ಸುದ್ದಿ

ಝೊಮ್ಯಾಟೋ ಮೇಲೆ 55 ಸಾವಿರ ದಂಡ ವಿಧಿಸಿದ ಕೋರ್ಟ್…ಸಸ್ಯಾಹಾರಿ ಕೇಳಿದಕ್ಕೆ ಮಾಂಸಹಾರಿ ಡೆಲಿವರಿ

61

ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ, ಪುಣೆಯ ಕೇಂದ್ರ ಕಚೇರಿ, ಗುರ್ಗಾಂವ್ ಕೇಂದ್ರ ಕಚೇರಿ ಹಾಗೂ ಪುಣೆಯ ಹೋಟೆಲ್ ಪ್ರೀತ್ ಪಂಜಾಬಿ ಸ್ವಾದ್ ಹೋಟೆಲ್‍ಗೆ 55 ಸಾವಿರ ರೂ. ದಂಡ ವಿಧಿಸಿದ್ದು, 45 ದಿನಗಳಲ್ಲಿ ದಂಡವನ್ನು ಗ್ರಾಹಕರಿಗೆ ಪಾವತಿಸವಂತೆ ಸೂಚಿಸಿದೆ. ತಡವಾದರೆ ಅದಕ್ಕೆ ಅನ್ವಯವಾಗುವ ಬಡ್ಡಿಯನ್ನು ಸೇರಿಸಿ ಹಣ ನಿಡುವಂತೆ ಸೂಚಿಸಿದೆ.

ಪನ್ನೀರ್ ಬಟರ್ ಮಸಾಲವನ್ನು ಆರ್ಡರ್ ಮಾಡಿದ್ದ ವಕೀಲರಿಗೆ ಅದರ ಬದಲಿಗೆ ಬಟರ್ ಚಿಕನ್ ಡೆಲಿವರಿ ಮಾಡಲಾಗಿದೆ. ಎರಡಕ್ಕೂ ಬಳಸುವ ಸಂಬಾರು ಪದಾರ್ಥಗಳು ಬಹುತೇಕ ಒಂದೇ ಥರ ಇರುವುದರಿಂದ ವಕೀಲರಿಗೆ ವ್ಯತ್ಯಾಸ ಗೊತ್ತಾಗದೆ ಚಿಕನ್ ಅನ್ನೇ ತಿಂದಿದ್ದರು.ಅಂದ ಹಾಗೆ ಅವರಿಗೆ ಹೀಗೆ ಸಸ್ಯಾಹಾರದ ಬದಲಿಗೆ ಮಾಂಸಾಹಾರ ಖಾದ್ಯವನ್ನು ಡೆಲಿವರಿ ಮಾಡಿದ್ದು ಎರಡು ಬಾರಿಯಂತೆ.

ಈ ಕುರಿತು ಝೊಮ್ಯಾಟೊ ಸ್ಪಷ್ಟಪಡಿಸಿದ್ದು, ವಕೀಲರು ಆಪ್‍ನಲ್ಲಿಯೇ ದೂರು ನೀಡಿದ್ದರು. ಈಗಾಗಲೇ ಅವರ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಬೇರೆ ಪದಾರ್ಥ ಡೆಲಿವರಿ ಮಾಡಿರುವುದು ಹೋಟೆಲ್ ತಪ್ಪು ಎಂದು ಝೊಮ್ಯಾಟೊ ವಾದಿಸಿದೆ. ಹೋಟೆಲ್‍ನಷ್ಟೇ ತಪ್ಪು ಸಂಸ್ಥೆಯದ್ದೂ ಇದೆ ಎಂದು ಗ್ರಾಹಕರ ನ್ಯಾಯಾಲಯ ತಿಳಿಸಿದೆ. ಹೋಟೆಲ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ವರ್ಷವೂ ಗೂಗಲ್ ಸರ್ಚ್​ನಲ್ಲಿ ನಂ 1 ಸ್ಥಾನ ಉಳಿಸಿಕೊಂಡ ಸೆಲಿಬ್ರೆಟಿ…ಯಾರು ಗೊತ್ತೇ ?

    ಪ್ರತಿವರ್ಷದ ಹಾಗೆಯೇ ಈ ವರ್ಷವು ಕೂಡ ಗೂಗಲ್ ನಲ್ಲಿ ಸರ್ಚ್​ ಆದವರು ಯಾರು ? ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರವೊಂದು ಸಿಕ್ಕಿದೆ ಏನಪ್ಪಾ ಅದು ಅಂತೀರಾ? ಹೌದು ಈ ವರ್ಷದ ಅರ್ಧದಷ್ಟು ಭಾಗ ಈಗಾಗಲೇ ಮುಗಿದಿದೆ. ಇನ್ನೂ ಈ ವರ್ಷದಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್​ ಆದವರು ಯಾರು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಈ ಭಾರಿ ಅತಿ ಹೆಚ್ಚು ಸರ್ಚ್​ಗೊಳಗಾದವರು ಯಾರು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮೋದಿ ಎಂದಾಗಿದ್ದಲ್ಲಿ ತಪ್ಪು. ಇಷ್ಟಕ್ಕೂ…

  • ಜ್ಯೋತಿಷ್ಯ

    ನಿತ್ಯ ಪಂಚಾಂಗ ಶುಭ ಶುಕ್ರವಾರ, ರಾಶಿಗನುಗುಣವಾಗಿ ದಿನಭವಿಷ್ಯ 24/8/2018

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com ಮೇಷ:– ನಿಮ್ಮ ಹೆಚ್ಚುವರಿ…

  • ಸುದ್ದಿ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ..!

    ಇಂಟರ್‌ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್‌ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಖುಷಿಯಾಗುತ್ತಾರೆ. ಅಲ್ಲದೆ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡುತ್ತಾರೆ. ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ…

  • inspirational

    ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ

    ಬೆಳ್ಳುಳ್ಳಿ ಕರೋನಾ ಕಿಲ್ಲರ್ ಹೌದೇ..? ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು. ಬೆಳ್ಳುಳ್ಳಿ ತಿಂದರೆ ಈ ಮಾರಕ ವೈರಸ್ ನಿಂದ ನಾವು ಬಚಾವ್ ಆಗ ಬಹುದೇ..? ಅದಕ್ಕೆ ಉತ್ತರ ಹುಡುಕೋಣ.   WHO ಸ್ಪಷ್ಟವಾಗಿ ಹೇಳಿದೆ.. ಬೆಳ್ಳುಳ್ಳಿ ಒಂದು ಹೆಲ್ತಿ ಹರ್ಬ್. ಅದರಲ್ಲಿ ಎರಡು ಮಾತಿಲ್ಲ.  ಇದನ್ನು ತಿಂದರೆ ಹೊಟ್ಟೆ ಸಮಸ್ಯೆ ಪರಿಹಾರವಾಗುತ್ತದೆ. ಇದರಿಂದ ಕರೋನಾ ವೈರಸ್…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…