ಸುದ್ದಿ

ಆಷಾಢದಲ್ಲೂ ಮದುವೆ ಸಂಬ್ರಮ ಹೊಸ ಜೀವನಕ್ಕೆ ಕಾಲಿಟ್ಟ 32 ನವಜೋಡಿಗಳು

43

ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ.

ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಈ ಕಲ್ಯಾಣೋತ್ಸವದಲ್ಲಿ 32 ನವಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಈ ವಿವಾಹ ಮಹೋತ್ಸವದಲ್ಲಿ ಅಂತರ್‌ಧರ್ಮ ವಿವಾಹವಾದ ಹಿಂದೂ ಹಾಗೂ ಇಸ್ಲಾಂ ಧರ್ಮದ ಒಂದು ಜೋಡಿಯು ಎಲ್ಲರ ಗಮನ ಸೆಳೆಯಿತು. ಅಲ್ಲದೇ ಸಾಮೂಹಿಕ ವಿವಾಹದಲ್ಲಿ ಅಂತರ್ ಧರ್ಮ ವಿವಾಹದ ಮೂಲಕ ನವಜೀವನಕ್ಕೆ ಪಾದಾರ್ಪಣೆ ಮಾಡಿದ ಹಸೀನ ಕೂಡ ತಮ್ಮ ಜೀವನಕ್ಕೆ ಬಸವತತ್ವವನ್ನು ಅಳವಡಿಸಿಕೊಂಡಿದ್ದಾರೆ.

ಸಮಾಜ ಪರಿವರ್ತನೆಗಾಗಿ ಅಂತರ್ಜಾತಿ ಹಾಗೂ ಅಂತರ್‌ಧರ್ಮ ವಿವಾಹಗಳಿಂದಾದರೂ ಈ ಮೌಢ್ಯ ನಿಷೇಧವಾಗಬೇಕೆಂದು ನೂತನ ವಧು ಹಸೀನ ಹೇಳಿದ್ದಾರೆ.ಮುರುಘಾ ಮಠದಲ್ಲಿ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಜಾತಿ ಧರ್ಮಗಳನ್ನು ಮೀರಿ ನಿಂತಿದೆ. ಆಷಾಢ ಶುಕ್ರವಾರ ಅನ್ನೋದನ್ನೂ ಲೆಕ್ಕಿಸದೇ 32 ನವಜೋಡಿಗಳು ನವಜೀವನಕ್ಕೆ ಕಾಲಿಡುವ ಮೂಲಕ ಮೌಢ್ಯ ನಿಷೇಧಕ್ಕೆ ಪ್ರೇರಣೆಯಾದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    6 ವರ್ಷದ ಮಗನಿದ್ದರೂ ಎರಡನೇ ಮದುವೆ ಆಗುತ್ತಿರುವ ರಜನೀಕಾಂತ್ ಮಗಳು.!ಹುಡುಗ ಯಾರು ಗೊತ್ತಾ..?

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ 2 ನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 11 ರಂದು ಸೌಂದರ್ಯ ರಜನಿಕಾಂತ್ ವಿವಾಹ, ನಟ ಹಾಗೂ ಉದ್ಯಮಿಯಾಗಿರುವ ವಿಶಾಗನ್ ವನಂಗಮುಡಿ ಅವರೊಂದಿಗೆ ನೆರವೇರಲಿದೆ. ಈಗಾಗಲೆ ಮದುವೆ ಸಿದ್ಧತೆ ಆರಂಭವಾಗಿವೆ. ಸೌಂದರ್ಯ ರಜನಿಕಾಂತ್ ಮತ್ತು ವಿಶಾಗನ್ ವನಂಗಮುಡಿ ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ರಜನಿಕಾಂತ್ ದಂಪತಿ ಇತ್ತಿಚೆಗೆ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೊದಲು ಅಶ್ವಿನ್ ರಾಮ್ ಕುಮಾರ್ ಜೊತೆ…

  • ಸುದ್ದಿ

    ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು…ಕಾರಣ?

    ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು. ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ…

  • ಸುದ್ದಿ

    ‘ಬಿಗ್ ಬಾಸ್’ ಮನೆಯಿಂದ ರಶ್ಮಿ ಔಟ್ : ಒಪನ್ ಮೈಂಡೆಡ್ ವೈಲ್ಡ್ ಕಾರ್ಡ್ ವ್ಯಕ್ತಿ ಯಾರು ಗೊತ್ತಾ?

    ‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ಮೂರನೇ ವಾರದ ಎಲಿಮಿನೇಶನ್ ಆಗಿದೆ. ‘ಬಿಗ್ ಬಾಸ್’ ಮನೆಯಿಂದ ಗುರುಲಿಂಗ ಸ್ವಾಮೀಜಿ, ಆಂಕರ್ ಚೈತ್ರ ವಾಸುದೇವನ್ ಹೊರ ಬಂದ ಬಳಿಕ ಇದೀಗ ಚಿತ್ರನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ. ‘ದುನಿಯಾ’ದಂತಹ ಸೂಪರ್ ಹಿಟ್ ಚಿತ್ರವನ್ನು ನೀಡಿದ ಬಳಿಕ ರಶ್ಮಿ ಅಷ್ಟಾಗಿ ಸಿನಿ ಲೋಕದಲ್ಲಿ ಕಾಣಿಸಿಕೊಂಡಿರಲಿಲ್ಲ. ‘ಬಿಗ್ ಬಾಸ್’ ಮೂಲಕ ಅದೃಷ್ಟ ಪರೀಕ್ಷೆಗೆ ದುನಿಯಾ ರಶ್ಮಿಇಳಿದಿದ್ದರು. ‘ಬಿಗ್ ಬಾಸ್’ ಶೋದಿಂದ ಸ್ಯಾಂಡಲ್ ವುಡ್ ನಲ್ಲಿ ಭಾಗ್ಯದ ಬಾಗಿಲು ತೆರೆಯ ಬಹುದು ಎಂದು ದುನಿಯಾ…

  • ಸುದ್ದಿ

    ಜಗತ್ತಿನಲ್ಲೇ ಅತಿ ದುಬಾರಿ ಡೈವೋರ್ಸ್; ಪತ್ನಿಗೆ 2.4 ಲಕ್ಷ ಕೋಟಿ ರೂ ಪರಿಹಾರ ಕೊಟ್ಟಿದ್ದು ಯಾರು ಗೊತ್ತೇ.??

    ವಿಶ್ವದ ಅತೀದೊಡ್ಡ  ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಅಲಂಕರಿಸಿದ್ದಾರೆ. ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ…

  • ಸಿನಿಮಾ

    ರೆಬೆಲ್ ಸ್ಟಾರ್ ಅಂಬರೀಶ್ ರವರ ಆ ಎರಡು ಕನಸು ಕೊನೆಗೂ ನನಸಾಗಲೇ ಇಲ್ಲಾ…

    ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮಗ ಅಭಿಷೇಕ್ ಎಂದರೆ ಅಚ್ಚುಮೆಚ್ಚು, ಮಗನ ಮದುವೆ ಮಾಡಬೇಕು, ಅವನ ಮೊದಲ ಚಿತ್ರವನ್ನು ನೋಡಬೇಕು ಎಂದು ಕನಸು ಕಂಡಿದ್ದರು. ಅಂಬರೀಶ್ ಅವರಿಗೆ ಇದ್ದಿದ್ದು ಎರಡೇ ಆಸೆ. ಒಂದು ಮುದ್ದಿನ ಮಗ ಅಭಿಷೇಕ್ ಅವರ ಮದುವೆ ಮಾಡ್ಬೇಕು, ಇನ್ನೊಂದು ಮಗನ ಮೊದಲ ಸಿನಿಮಾ ಅಮರ್ ಚಿತ್ರವನ್ನು ನೋಡಬೇಕು ಅಂತಾ. ರೆಬೆಲ್ ಸ್ಟಾರ್ ಎಂದಿಗೂ ಅವರ ಮಗನಿಗೆ ನೀನು ಹೀಗೆ ಇರಬೇಕು, ಇಂತದ್ದೆ ಮಾಡಬೇಕು ಎಂದು ಹೇಳಿದವರಲ್ಲ.   ಅಂಬರೀಶ್ ಅವರ ಹಾಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(12 ಫೆಬ್ರವರಿ, 2019) ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಹಠಮಾರಿ ಪ್ರಕೃತಿ ನಿಮ್ಮ ಪೋಷಕರ…