ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ.

ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹೋಲುವ ಕಾರ್ಟೂನ್ ಚಿತ್ರ ಕೂಡ ಇತ್ತು.

ಗಾಂಧೀಜಿ ಚಿತ್ರವಿರುವ ಬಿಯರ್ ಬಾಟಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಗಾಂಧೀಜಿಗೆ ಇಸ್ರೇಲ್ ಅವಮಾನ ಮಾಡಿದೆ ಎಂದು ರೊಚ್ಚಿಗೆದ್ದ ಭಾರತೀಯರು ಮಾಲ್ಕಾ ಬಿಯರ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ರಾಜ್ಯ ಸಭೆಯಲ್ಲೂ ಕೂಡ ಮಂಗಳವಾರ ಚರ್ಚೆ ನಡೆದಿತ್ತು. ಈ ವೇಳೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

ಭಾರತದಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಕಂಪನಿ ಬ್ರಾಂಡ್ ಮ್ಯಾನೇಜರ್ ಭಾರತೀಯರಲ್ಲಿ ಹಾಗೂ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ. ಗಾಂಧೀಜಿ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿದ್ದು ತಪ್ಪಾಯಿತು. ಇದರಿಂದ ಭಾರತೀಯರ ಭಾವನೆಗಳಿಗೆ ದಕ್ಕೆ ಉಂಟಾಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಜಾಗತಿಕ ಮಟ್ಟದಲ್ಲಿ ಗೌರವಿಸಲಾಗುತ್ತದೆ. ನಾವು ನಮ್ಮ ಕಂಪನಿ ಬಿಯರ್ ಬಾಟಲಿಗಳ ಮೇಲೆ ಇರುವ ಗಾಂಧೀಜಿ ಅವರ ಚಿತ್ರವನ್ನು ತೆಗೆಯುತ್ತೇವೆ ಕ್ಷಮಿಸಿ ಎಂದಿದ್ದಾರೆ.
ಅಚಾತುರ್ಯದಿಂದ ಬಾಟಲಿಗಳ ಮೇಲೆ ಅವರ ಚಿತ್ರ ಮುದ್ರಿತಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಹಿನ್ನೆಲೆ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ಬಿಯರ್ ಬಾಟಲಿ ಮೇಲೆ ಅವರ ಚಿತ್ರ ಬಳಸಲಾಯಿತು. ಗಾಂಧೀಜಿ ಮಾತ್ರವಲ್ಲ ಬಾಟಲಿಯ ಮೇಲೆ ಇಸ್ರೇಲ್‍ನ ಮೂವರು ಮಾಜಿ ಪ್ರಧಾನಿಗಳ ಜತೆ ಚಿತ್ರವನ್ನೂ ಗೌರವ ಸಲ್ಲಿಸಲು ಬಳಸಲಾಗಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಪಿಎಲ್ ಕಾರ್ಡ್ ಯಾರ ಬಳಿ ಇಲ್ಲ ಹೇಳಿ, ಸರ್ಕಾರದ ನಿಯಮ ಅನುಸಾರವಾಗಿ ಯಾರು ಬಡತನ ರೇಖೆಗಿಂತ ಕೆಳಗೆ ಇರುತ್ತಾರೋ ಮತ್ತು ಯಾವ ಕುಟುಂಬದ ಆದಾಯ ಕಡಿಮೆ ಇರುತ್ತದೋ ಅವರು ಮಾತ್ರ ಬಿಪಿಎಲ್ ಕಾರ್ಡ್ ಮಾಡಿಕೊಳ್ಳಲು ಅರ್ಹರು. ಆದರೆ ಈಗ ಕೇವಲ ಬಡವರು ಮಾತ್ರವಲ್ಲದೆ ಶ್ರೀಮಂತರು ಕೂಡ ಬಿಪಿಎಲ್ ಕಾರ್ಡುಗಳನ್ನ ಮಾಡಿಸಿಕೊಂಡಿದ್ದು ಸರ್ಕಾರಕ್ಕೆ ಮೋಸ ಮಾಡಿ ಪಡಿತರ ದಾನ್ಯಗಳನ್ನ ಪಡೆಯುತ್ತಿದ್ದಾರೆ, ಹೌದು ಸರ್ಕಾರೀ ಕೆಲಸದಲ್ಲಿ ಇರುವವರು, ಕುಟುಂಬದ ಆದಾಯ ಜಾಸ್ತಿ ಇರುವವರು ಮತ್ತು ಶ್ರೀಮಂತರು ಕೂಡ ಬಿಪಿಎಲ್ ಕಾರ್ಡುಗಳನ್ನ…
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಇಂದು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಯ ಬಳಿಕ, ಗಾರ್ಮೆಂಟ್ಸ್ ಮಹಿಳೆಯರಿಗೆ, ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದರು. ಈ ಬಳಿಕ ಇದೀಗ, ಇಂದಿರಾ ಕ್ಲಿನಿಕ್ ಆರಂಭಗೊಂಡಿದೆ. ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿವೆ.
ಭಾರತವು ವಿಭಿನ್ನ ಧರ್ಮಗಳ, ನಂಬಿಕೆಗಳು, ಆಚರಣೆಗಳ ನೆಲೆಬೀಡಾಗಿದ್ದು, ಇಲ್ಲಿ ಎಷ್ಟೋ ಸಾಧು,ಸಂತರು,ಮಹಾನ್ ದಾರ್ಶನಿಕರು ಜನಿಸಿದ್ದಾರೆ. ತಮ್ಮ ಸಾಮಾನ್ಯ ಜೀವನ ಕ್ರಮದಿಂದ ಧರ್ಮವನ್ನು ಭೋದಿಸಿ,ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ.
ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ.ಮಾನಸಿಕ ಹಾಗೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಬೇರೆ ಬ್ಯಾಂಕ್ ಎಟಿಎಂಗೆ ಹೋದಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬೇರೆ ಎಟಿಎಂಗೆ ಹೋದಾಗ ನೀವು ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಹಣ ಡ್ರಾ ಮಾಡಿದ ನಂತ್ರ ಬರುವ ಸ್ಲಿಪ್ ನ್ನು ಜೋಪಾನವಾಗಿ ತೆಗೆದಿಟ್ಟುಕೊಂಡಿರಬೇಕಾಗುತ್ತದೆ. ಕೆಲವೊಮ್ಮೆ ಹಣ ಡ್ರಾ…
ಚಂದನವನದ ಆ್ಯಕ್ಷನ್ ಪ್ರಿನ್ಸ್ ದೃವಾ ಸರ್ಜಾ ಮೊನ್ನೆ ಮೊನ್ನೆ ಅಷ್ಟೇ ದುರಂತ ಅಂತ್ಯ ಕಂಡ ಖಳನಾಯಕ ಉದಯ್ ಅವರ ಅಕ್ಕನ ಗಂಡ ಅಂದರೆ ಬಾವ ರಾಜ ನಿರ್ದೇಶನದ ಐರಾ ಚಿತ್ರದ ಮೂಹೂರ್ತವನ್ನು ಉದಯ್ ಅವರ ಸಮಾಧಿ ಬಳಿ ಕ್ಲಾಪ್ ಮಾಡುವ ಆ ಚಿತ್ರಕ್ಕೆ ಚಾಲನೆಯನ್ನು ಮಾಡಿ ಗೆಳೆಯನನ್ನು ನೆನೆದು ಭಾವುಕರಾಗಿದ್ದರು. ದೃವಾ ಸರ್ಜಾ ಮದುವೆಯ ತಯಾರಿ ಕೂಡ ಭರ್ಜರಿಯಾಗಿ ಸಾಗಿದೆ. ಇತ್ತ ದೃವಾ ಸರ್ಜಾ ಮದುವೆಯ ಆಮಂತ್ರಣ ಪತ್ರಿಕೆ ಹಿಡಿದು ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಮನೆ…
ಇಂಡೊನೇಶಿಯದ ಸಣ್ಣ ಗ್ರಾಮ ಸೆಮರೆಂಗ್ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ನ್ಯೂಸ್ ಆಗಿದೆ. ಪ್ರತಿಯೊಬ್ಬರು ಈಗ ಈ ಗ್ರಾಮದ ಬಗ್ಗೆ ತಿಳಿಯಲು ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಪರ್ವತ ಪ್ರದೇಶಗಳಲ್ಲಿರುವ ಈ ಗ್ರಾಮವು ಪ್ರವಾಸಿಗರನ್ನು ಅದರಲ್ಲೂ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.