ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೇ ಸ್ಟ್ರೆಚರ್‌ನಲ್ಲಿ ಪುರುಷ ರೋಗಿ ಜೊತೆ ಎಕ್ಸ್ ರೇ ರೂಮಿಗೆ ಹೋಗುವಂತೆ ಮಹಿಳೆಗೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ಇರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನಡೆದಿದೆ.ಸಂಗೀತಾ ಪುರುಷ ರೋಗಿ ಜೊತೆ ಸ್ಟ್ರೆಚರ್ ಹಂಚಿಕೊಂಡ ಮಹಿಳೆ. ಸಂಗೀತಾ ಕಳೆದ 12 ದಿನಗಳ ಹಿಂದೆ ಬಲಗಾಲು ಫ್ರ್ಯಾಕ್ಚರ್ ಆಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಎಕ್ಸ್ ರೇ ರೂಮಿಗೆ ಕರೆದುಕೊಂಡು ಹೋಗಬೇಕಾದರೆ ಸ್ಟ್ರೆಚರ್ ಇಲ್ಲವೆಂದು ಪುರುಷ ರೋಗಿಯಿದ್ದ ಸ್ಟ್ರೆಚರ್‌ನಲ್ಲಿ ಹೋಗುವಂತೆ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ನನ್ನ ಪತ್ನಿ ಸಂಗೀತಾ ಆರ್ಥೋಪೆಡಿಕ್ ವಾರ್ಡ್‍ನಲ್ಲಿ ದಾಖಲಾಗಿದ್ದಳು. ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕಡಿಮೆ ಇದ್ದ ಕಾರಣ ಎಕ್ಸ್ ರೇ ರೂಮಿಗೆ ಆಕೆಯನ್ನು ಪುರುಷನ ಜೊತೆ ಕಳುಹಿಸಲಾಯಿತು. ಇದನ್ನು ನೋಡಿ ನಾನು ಅಸಹಾಯಕನಾಗಿದ್ದೆ. ನನ್ನ ಪತ್ನಿಗೆ ಚಿಕಿತ್ಸೆ ದೊರೆಯಬೇಕು ಎಂಬ ಒಂದೇ ಕಾರಣದಿಂದ ಆಕೆಯನ್ನು ಆ ಸ್ಟ್ರೆಚರ್‌ನಲ್ಲಿ ಹೋಗಲು ಅನುಮತಿ ನೀಡಿದೆ ಎಂದು ಸಂಗೀತಾ ಅವರ ಪತಿ ಧಮೇಂದ್ರ ತಿಳಿಸಿದ್ದಾರೆ.
ಒಂದೇ ಸ್ಟ್ರೆಚರ್‌ನಲ್ಲಿ ಏಕೆ ಇಬ್ಬರು ಇದ್ದೀರಿ ಎಂದು ಸಂಗೀತಾ ಅವರನ್ನು ಪ್ರಶ್ನಿಸಿದಾಗ “ವೈದ್ಯರು ಈ ರೀತಿ ಹೋಗುವಂತೆ ಆದೇಶ ನೀಡಿದ್ದರು. ಈ ರೀತಿ ಸ್ಟ್ರೆಚರ್‌ನಲ್ಲಿ ಹೋಗುವುದರಿಂದ ಕಷ್ಟವಾಗುತ್ತದೆ ಎಂದು ನಾವು ಅವರಿಗೆ ತಿಳಿಸಿದ್ದೆ” ಎಂದು ಹೇಳಿದ್ದಾರೆ.ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಅಧಿಕ್ಷಕ ಡಾ. ಪಿ.ಎಸ್ ಠಾಕೂರ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಗೆ, ನರ್ಸ್, ವಾರ್ಡ್ ಬಾಯ್‍ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಠಾಕೂರ್ ಅವರು, ಇಲ್ಲಿ ಸ್ಟ್ರೆಚರ್ ಹಾಗೂ ಇತರ ಸೌಲಭ್ಯಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.ವೈದ್ಯರು ನಮಗೆ ಕೊಟ್ಟ ಸಮಯದಲ್ಲಿ ಮಾತ್ರ ಅವರು ವಾರ್ಡ್ ಗೆ ಭೇಟಿ ನೀಡುತ್ತಾರೆ. ಅವರ ಡ್ಯೂಟಿ ಸಮಯ ಮುಗಿದು ಹೋದರೆ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಸಂಗೀತಾ ಪತಿ ಧಮೇಂದ್ರ ವೈದ್ಯರ ವಿರುದ್ಧ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆನ್‌ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 4 GB RAM ಮತ್ತು 64 GB ROM ಮಾದರಿಗಳಲ್ಲಿ ಮಾರಾಟವಾಗುತ್ತಿದೆ….
ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ನಿಪಾಹ್ ವೈರಸ್‌ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್‌ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ. ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್‌ಸ್ಟಿಟ್ಯೂಟ್ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಾಕಷ್ಟು…
ಸುನಿತಾ ಮಂಜುನಾಥ್ ರವರ ನೂತನ ಪ್ರಯತ್ನದ ಫಲವಾಗಿ ರಾಧಾಕೃಷ್ಣ ಪಬ್ಲಿಕ್ ಶಾಲೆಯ ತುಂಬಾ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು..
ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಮಹಿಳೆಯ ಪತಿ ಜನಕರಾಜ್, ಅಕ್ಟೋಬರ್ 29ರಂದು ಈ ಘಟನೆ ನಡೆಯಿತು. ತರಕಾರಿ ಕತ್ತರಿಸಿ ತುಂಬಲಾಗಿದ್ದ ಬೌಲ್ನಲ್ಲಿ ನನ್ನ ಪತಿ ಹಾಗೂ ಸೊಸೆ ತಮ್ಮ ಚಿನ್ನಾಭರಣವನ್ನು ಅದರಲ್ಲಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಚಿನ್ನದಮೇಲೆ ತರಕಾರಿ ತ್ಯಾಜ್ಯವನ್ನು ಇಡಲಾಗಿತ್ತು.ಕೊನೆಯಲ್ಲಿ ಇದರ ಅರಿವಿಲ್ಲದೆ ಅದನ್ನು ಕಸದ ಗುಂಡಿಗೆ ಎಸೆಯಲಾಗಿತ್ತು….
ಮನೆ ಕಟ್ಟಲು ಮುಂದಾದವರಿಗೆ ಗುಡ್ ನ್ಯೂಸ್ ಇಲ್ಲಿದೆ. ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕ್ರಮಕೈಗೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮರಳು ನೀತಿ ಜಾರಿಗೆ ಕ್ರಮ ಕೈಗೊಂಡಿದ್ದು 2014ರಲ್ಲಿ ಮರಳು ನೀತಿ ಪ್ರಕಟಿಸಲಾಗಿತ್ತು. ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿ ರಚಿಸಲಾಗಿತ್ತು. ಮರಳು ದರ ನಿಗದಿ ಮಾಡುವ ಅಧಿಕಾರವನ್ನು ಜಿಲ್ಲಾ ಸಮಿತಿಗೆ ನೀಡಿ ಮರಳು ಬ್ಲಾಕ್ ಗಳನ್ನು ಗುರುತಿಸಿ ಲೋಕೋಪಯೋಗಿ…
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿಗೆ ಮಗು ಎಂದಿದ್ದಾರೆ.ತಮ್ಮ ಸರ್ಕಾರದ ಬಗ್ಗೆ ರಾಹುಲ್ ಗಾಂಧಿ ಮಾಡಿದ್ದ ಆರೋಪವನ್ನು ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದಾರೆ. ಕನಿಷ್ಠ ಆದಾಯ ಯೋಜನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಏನು ಅಂದುಕೊಂಡಿದ್ದರೋ ಅದನ್ನು ಹೇಳಿದ್ದಾರೆ. ಕನಿಷ್ಠ ಆದಾಯ ತೆರಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನೂ ಅವ್ರು ಮಗು. ಅವ್ರ…