ಸುದ್ದಿ

16ರ ಬಾಲಕಿಗೆ ಬಾಲ್ಯ ವಿವಾಹ ಸಂಬ್ರಮ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್……!

110

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯೊಂದು ಬಂದಿದೆ.

ಈ ಮಾಹಿತಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮಾಂಗಲ್ಯಧಾರಣೆ ಆಗಿ ಹೋಗಿತ್ತು. ಬಾಲಕಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲಾತಿ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮದುಮಗ ಮಹೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ.

ಈ ಸಂದರ್ಭದಲ್ಲಿ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ವಿಡಿಯೋ ಮಾಡದಂತೆ ಧಮ್ಕಿ ಹಾಕಿದ್ದಾರೆ.ಬಾಲ್ಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪುಟ್ಟರಂಗಶೆಟ್ಟಿ, ಬಾಲ್ಯ ವಿಹಾಹಕ್ಕೆ ತಮ್ಮ ತೀವ್ರ ವಿರೋಧವಿದ್ದು ಯಾವುದೇ ಮುಲಾಜಿಲ್ಲದೆ ಪೋಷಕರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • India, Sports, ಕ್ರೀಡೆ

    2 ನೇ ಟೆಸ್ಟ್ ಸೋತ ಭಾರತ ತಂಡ

    ಡೀನ್ ಎಲ್ಗರ್ ಅವರು ಅಜೇಯ 96 ರನ್ ಗಳಿಸಿದರು, ದಕ್ಷಿಣ ಆಫ್ರಿಕಾವು 240 ರನ್ ಬೆನ್ನಟ್ಟಿದ್ದು ಏಳು ವಿಕೆಟ್‌ಗಳೊಂದಿಗೆ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತವನ್ನು ತನ್ನ ಮೊದಲ ಸೋಲಿಗೆ ಒಪ್ಪಿಸಿತು. ಈ ವಿಜಯವು ಕೇಪ್ ಟೌನ್‌ನಲ್ಲಿ ಅಂತಿಮ ಟೆಸ್ಟ್‌ಗೆ ಹೋಗುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ ಜೀವಂತವಾಗಿರಿಸಿತ್ತು. ಬುಧವಾರ, ಎಲ್ಗರ್ ತಮ್ಮ ದೇಹವನ್ನು ಲೈನ್‌ನಲ್ಲಿ ಹಾಕಿದರು, ಅವರು ತಮ್ಮ ವಿಕೆಟ್ ಅನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ಕೈಗವಸುಗಳು ಮತ್ತು ಭುಜದ ಮೇಲೆ ಹೊಡೆತಗಳನ್ನು ಪಡೆದರು. ಅವರು ಇಂದು ಹೆಚ್ಚು…

    Loading

  • ಸುದ್ದಿ

    ಯಶ್ ತುಂಬಿಸಿದ್ರು ಕೆರೆ, ಆಫಿಸರ್ಸ್ ತುಂಬಿಕೊಂಡ್ರು ಜೇಬು..!

    ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ. ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು…

  • ಉಪಯುಕ್ತ ಮಾಹಿತಿ, ಜ್ಯೋತಿಷ್ಯ

    ಹರಿದ ಬಟ್ಟೆ, ಜೀನ್ಸ್ ತೊಡೋದರಿಂದ ಏನಾಗುತ್ತೆ ಗೊತ್ತಾ?

    ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ.  ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ…

  • ದೇವರು-ಧರ್ಮ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…

  • ದೇವರು-ಧರ್ಮ

    ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶವಿರುವ,ಹೆಣ್ಣುಮಕ್ಕಳ ಶಬರಿಮಲೆ..!ಗಿನ್ನಿಸ್ ರೆಕಾರ್ಡ್’ನಲ್ಲಿ ದಾಖಲೆ…ಈ ದೇವಾಲಯದ ವಿಶೇಷತೆ ಏನು ಗೊತ್ತಾ..?

    ನಮ್ಮ ಭಾರತೀಯ ಹಿಂದೂ ದೇವಾಲಯಗಳು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಹಾಗು ಈ ದೇವಾಲಯ ಹಲವಾರು ಮಹತ್ವವನ್ನು ಹೊಂದಿದೆ, ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಪ್ರಸಿದ್ದಿ ಪಡೆದಿದೆ.

  • ಪ್ರೇಮ, ಸಂಬಂಧ, ಸ್ಪೂರ್ತಿ

    ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ…