ಸುದ್ದಿ

ಬಿಹಾರದಲ್ಲಿ ಹಣ್ಣಿನ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ…..

120

ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 165 ಕ್ಕೇರಿದ್ದು, ಮಕ್ಕಳ ಸಾವಿಗೆ ಮೆದುಳಿನ ಉರಿಯೂತವೇ ಕಾರಣ ಎನ್ನಲಾಗಿದೆ. ಮೆದುಳಿನ ಉರಿಯೂತ ಅಂದರೆ Acute Encephalitis Syndrome ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಇಲ್ಲಿನ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ(ಎಸ್ ಕೆ ಎಂಸಿಎಚ್) ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ.

ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಲಿಚಿ ಹಣ್ಣಗಳನ್ನು ಪ್ರಯೋಗಾಲಯಕ್ಕೆ ಕಳಿಸಿ, ಪ್ರಯೋಗಕ್ಕೊಳಪಡಿಸುವಂತೆ ಆದೇಶಿಸಿದೆ. ಈ ಹಣ್ಣಿನ ಸೇವನೆಯಿಂದ ಆರಂಭವಾದ ಕಾಯಿಲೆ ನಂತರ ಒಬ್ಬರಿಂದ ಒಬ್ಬರಿಗೆ ಸೋಂಕಾಗಿ ಹರಡಿರಬಹುದು ಎನ್ನಲಾಗಿದೆ.

ಲಿಚಿ ಹಣ್ಣಿನಲ್ಲಿರುವ ಟಾಕ್ಸಿನ್ ಅಂಶ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತಿದ್ದು, ಆದ್ದರಿಂದಲೇ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂಬ ಅನುಮಾನ ಎದ್ದಿದೆ. ಲಿಚಿ ಹಣ್ಣುಗಳನ್ನು ಪೋಷ್ಠಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ತಿಂದರೆ ಅದರಲ್ಲಿರುವ ಟಾಕ್ಸಿನ್ ಅಂಶ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದರಿಂದ ಸಾವು ಸಂಭವಿಸುತ್ತದೆ ಎಂಬುದು ವೈದ್ಯರ ಅನುಮಾನ.

ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೋರಲಾಗಿ ಮಲಗುವುದು ನಿಜಕ್ಕೂ ಕೆಟ್ಟದ್ದೇ..?ತಿಳಿಯಲು ಈ ಲೇಖನ ಓದಿ..

    ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಬೇಕಾಗುತ್ತದೆ. ಬೋರಲಾಗಿ ಅಂದರೆ ಹೊಟ್ಟೆ ಅಡಿಯಾಗಿ ಮಲಗುವದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಇದು ನಿದ್ರೆಯನ್ನು ಕೆಡಿಸುವ ಜೊತೆಗೆ ನಿಮ್ಮ ಶರೀರಕ್ಕೂ ಅನಾನುಕೂಲವನ್ನುಂಟು ಮಾಡುತ್ತದೆ.

  • ಸುದ್ದಿ

    ಖ್ಯಾತ ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಾಡಿದ್ದೇನು ಗೊತ್ತಾ..?

    ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್‍ಮೆಂಟ್‍ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್‍ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…

  • ಸುದ್ದಿ

    ಮಹಾಭಾರತ ನಡೆದೇ ಇಲ್ಲ ಎನ್ನುವ ಬುದ್ಧಿ ಜೀವಿಗಳಿಗೆ ಕಾದಿದೆ ಅಚ್ಚರಿ!! ಉತ್ತರಖಂಡದಲ್ಲಿದೆ ಮಹಾಭಾರತ ಕಾಲದ ವಿಸ್ಮಯಕಾರಿ ಕೋಟೆ…..

    ಭಾರತ ಎಂದರೆ ಪುಣ್ಯಭೂಮಿಯೇ ಸರಿ!! ಇಲ್ಲಿರುವ ಕೆಲವೊಂದು ನಿಗೂಢ ಸ್ಥಳಗಳು ಹಾಗೂ ಕೆಲವೊಂದು ವಿಚಾರಗಳು ಅಚ್ಚರಿಯನ್ನು ಮೂಡಿಸುತ್ತದೆ!! ಅದರ ಬಗ್ಗೆ ಎಷ್ಟೂ ಪರಿಶೀಲನೆ ನಡೆಸಿದರೂ ಏನೋ ದೈವೀ ಶಕ್ತಿ ಎಂಬುವುದನ್ನು ನಂಬಲೇ ಬೇಕಾಗುತ್ತದೆ!! ಇಂತಹ ಕೆಲವೊಂದು ಸಂಗತಿಗಳಿಗೂ ವಿಜ್ಞಾನಿಗಳಿಗೂ ಸವಾಲಾಗಿರುವುದಲ್ಲದೆ ಅಚ್ಚರಿಯನ್ನುಂಟು ಮಾಡಿಸುತ್ತದೆ.. ಈಗಾಗಲೇ ಭಾರತದಲ್ಲಿ ಹಲವಾರು ಕೋಟೆಗಳನ್ನು ನಾವು ಕಂಡಿದ್ದೇವೆ.. ಆದರೆ ಯಾವತ್ತಾದರೂ ತಲೆಕೆಳಗಾದ ರಹಸ್ಯ ಕೋಟೆಯ ಬಗ್ಗೆ ಯಾರಾದರೂ ಕೇಳಿದ್ದೀರಾ?! ತಲೆಕೆಳಗಾದ ಕೋಟೆ ಅಂದಾಗಲೇ ಅಚ್ಚರಿಯನ್ನುಂಟು ಮಾಡುತ್ತೆ ಅಲ್ವಾ?! ಹೌದು ಇಂತಹ ಕೋಟೆ ಉತ್ತರಖಂಡದ…

  • ಸುದ್ದಿ

    ತನ್ನ 73 ಕೋಟಿ ರೂಪಾಯಿ ಆಸ್ತಿಯನ್ನ ಕೆಜಿಎಫ್ ನಟನ ಹೆಸರಿಗೆ ಬರೆದು ಜೀವ ಕಳೆದುಕೊಂಡ ಅಭಿಮಾನಿ, ಕಾರಣ ಮಾತ್ರ ಶಾಕಿಂಗ್.!

    ಮುಂಬೈ ಆ ಮಲಬಾರ್ ಹಿಲ್ ನಲ್ಲಿ ವಾಸವಿರುವ ನಿಷಿಯ ಹರಿಶ್ಚಂತ್ರ ತ್ರಿಪಾಠಿ ತನ್ನ ಮನೆ ಮತ್ತು ಹತ್ತಾರು ಕೋಟಿ ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನ ತನ್ನ ನೆಚ್ಚಿನ ನಟನ ಹೆಸರಿಗೆ ವಿಲ್ ಬರೆದು ಸಾವನ್ನಪ್ಪಿದ್ದಾಳೆ. ಇನ್ನು ನಿಷಿಯ ಸಾವನ್ನಪ್ಪಿದ ಕೆಲವು ಸಮಯದ ನಂತರ ಆಸ್ತಿಯನ್ನ ವರ್ಗಾವಣೆ ಮಾಡಲು ನೋಡಿದ ನಿಷಿಯ ಕುಟುಂಬದವರಿಗೆ ಇದನ್ನ ನೋಡಿ ದೊಡ್ಡ ಶಾಕ್ ಆಗಿತ್ತು. ಇನ್ನು ಈ ಅಭಿಮಾನಿ ತಾನು ಸಾಯುವ ಮುನ್ನ ತನ್ನ ಮನೆ, ಬ್ಯಾಂಕ್ ಅಕೌಂಟ್ ಮತ್ತು ಬರೋದದಲ್ಲಿ ಇರುವ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ,ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(21 ನವೆಂಬರ್, 2018) ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆಸೆಳೆಯದಿರಲಿ. ಕೆಟ್ಟ ಸಮಯಗಳು ನಮಗೆ ಇನ್ನೂ ಹೆಚ್ಚನ್ನು ನೀಡುತ್ತವೆ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ…

  • inspirational

    ಭವಿಷ್ಯವನ್ನು ಮುನ್ನಡೆಸಲು ಶಿಕ್ಷಣ ಅತ್ಯಗತ್ಯ

    ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶ ಕೋವಿಡ್ – 19 ನ ಭೀತಿಯಿಂದ ಸಮಗ್ರ ಶಿಕ್ಷಣವು ಕುಂಠಿತಗೊಂಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಮಂದಗತಿಯಲ್ಲಿ ಮುಂದುವರೆಯುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು DRM Career Build ಮತ್ತು SSN Academy ಸಂಸ್ಥೆಯು ಅಲವಾರು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸಲು ಅತಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. 10ನೇ / SSLC ತರಗತಿ CBSC / NCRT ವಿದ್ಯಾರ್ಥಿಗಳಿಗೆ Offline video ತರಗತಿಗಳನ್ನು ನಡೆಸಲಾಗುತ್ತಿದೆ. 12ನೇ…