ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಗಳೂರು: ಮನೆಯೊಂದರಲ್ಲಿ ಅರ್ಧ ಸುಟ್ಟು, ಕೊಳೆತ ಸ್ಥಿತಿಯಲ್ಲಿ ವೃದ್ಧ ದಂಪತಿ ಮೃತದೇಹಗಳು ಮಂಗಳೂರಿನ ಹೊರವಲಯದ ತೊಕ್ಕೊಟ್ಟಿನ ಚೆಂಬುಗುಡ್ಡೆಯಲ್ಲಿ ಪತ್ತೆಯಾಗಿದೆ.
ಚೆಂಬುಗುಡ್ಡೆ ನಿವಾಸಿಗಳಾದ ಪದ್ಮನಾಭ(78) ಮತ್ತು ವಿಮಲ(65) ಮೃತ ದುರ್ದೈವಿಗಳು. ಮನೆಯಲ್ಲಿ ದಂಪತಿಗಳಿಬ್ಬರೇ ವಾಸವಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ದಂಪತಿಗಳನ್ನು ಅಕ್ಕಪಕ್ಕದ ಮನೆಯವರು ನೋಡಿದ್ದರು. ಆದಾದ ಬಳಿಕ ಇಬ್ಬರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ದಂಪತಿಗಳು ಅಕ್ಕಪಕ್ಕದ ಮನೆಯವರ ಬಳಿ ಹೆಚ್ಚಿನ ಸಲುಗೆ ಹೊಂದಿರಲಿಲ್ಲ. ಹೀಗಾಗಿ ಅವರಿಬ್ಬರು ಮೃತಪಟ್ಟಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದಂಪತಿ ಸ್ಥಳೀಯರಿಗೆ ಕಾಣದ ಹಿನ್ನೆಲೆ ಅವರ ಮನೆ ಬಳಿ ನೆರೆಹೊರೆ ಮನೆಯವರು ಹೋಗಿ ನೋಡಿದಾಗ ಮೃತಪಟ್ಟಿರುವ ಬಗ್ಗೆ ತಿಳಿದಿದೆ. ಬಳಿಕ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಉಳ್ಳಾಲ ಠಾಣಾ ಪೊಲೀಸರು ಮನೆಯೊಳಗೆ ಹೋದಾಗ ದಂಪತಿ ಮೃತದೇಹಗಳು ಅರ್ಧ ಸುಟ್ಟು, ಕೊಳೆತು ಸ್ಥಿತಿಯಲ್ಲಿ ಪತ್ತೆಯಾಗಿದೆ.
ವೃದ್ಧ ದಂಪತಿ ಹೇಗೆ ಸಾವನ್ನಪ್ಪಿರಬಹುದು ಎಂಬ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಇಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಈ ನಿಗೂಢ ಸಾವಿನ ಸುತ್ತ ಹಲವು ಅನುಮಾನಗಳು ಕೂಡ ಹುಟ್ಟಿಕೊಂಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.
ಪ್ರಸ್ತುತ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಟೆಲಿಕಾಂ ಆಪರೇಟರ್ ವಡಾಫೋನ್ ಐಡಿಯಾಗೆ ಶಾಕ್ ಉಂಟಾಗಿದೆ. ಸಂಸ್ಥೆಗೆ ಎರಡನೇ ತ್ರೈಮಾಸಿಕದಲ್ಲಿ 50,921 ಕೋಟಿ ರೂ ನಷ್ಟ ಉಂಟಾಗಿದೆ.ಭಾರತದ ಟೆಲಿಕಾಂ ಸಂಸ್ಥೆಯೊಂದು ಇಷ್ಟೊಂದು ನಷ್ಟ ಅನುಭವಿಸಿರುವುದು ಇದೇ ಮೊದಲ ಭಾರಿ ಎನ್ನಲಾಗಿದೆ. ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ನೆಟ್ವರ್ಕ್ ಏರ್ಟೆಲ್ಗೆ 23,045 ಕೋಟಿ ರೂ ನಷ್ಟ ಉಂಟಾಗಿದೆ. ಬಾಕಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ…
ತುಳಸಿ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣಪಡಿಸಬಹುದು. ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ…
ತಮ್ಮನ್ನು ಹೆತ್ತು ಹೊತ್ತು ಬೆಳೆಸಿದವರನ್ನು ನಿರ್ಲಕ್ಷಿಸುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ವಯೋವೃದ್ಧರು ತಮ್ಮ ಜೀವನ ಸಂಧ್ಯಾಕಾಲದಲ್ಲಿ ಅಸಹಾಯಕರಂತೆ ಬದುಕಬೇಕಾಗಿದೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಇರುವ ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದ್ದು. ಇದರ ಜೊತೆಗೆ ಹೆತ್ತವರನ್ನು ನಿರ್ಲಕ್ಷಿಸುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳವರೆಗೆ ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ….
ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿದೆ.
ರಾಜಧಾನಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತರೊಂದಿಗೆ ನಿನ್ನೆ ನಡೆಸಿದ ಸಭೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ವಿಫಲವಾದರೆ ಕ್ರಮ ಜರುಗಿಸುವ ಆದೇಶ ನೀಡಿರುವುದಾಗಿ ಡಾ. ಸುಧಾಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಇದಕ್ಕೂ ಮುನ್ನ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಬ್ರಿಗೇಡ್…