ಸುದ್ದಿ

ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ…!

105

ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ ಸಿನಾ ಎಂಬವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇವಾಗ ಖುಷಿನಾ ಎಂದು ಬರೆದುಕೊಂಡಿದ್ದಾರೆ. ಇದೇ ಸಿನಾ ಪಿನ್ ಮಾಡಿಕೊಂಡಿರುವ ಟ್ವೀಟ್ ನಲ್ಲಿ ನಾನೋರ್ವ ಮುಸ್ಲಿಂ, ಆದ್ರೆ ಹಿಂದೂಗಿಂತ ಕಡಿಮೆ ಏನಿಲ್ಲ. ನನ್ನ ಧರ್ಮ ಇಸ್ಲಾಂ, ಆದ್ರೆ ನನ್ನ ಸಂಸ್ಕೃತಿ ಹಿಂದೂ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‍ನ್ನು ಸಾಹಿತಿ ಮಧು ಕಿಶ್ವರ್ ರೀಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ಪಾಕಿಸ್ತಾನದವರು ನಟಿ ಮಾಧುರಿಯವರನ್ನು ಕೊಡಿ ಪಾಕಿಸ್ತಾನ ತೆಗೆದುಕೊಳ್ಳಿ ಎಂದು ಜಪಿಸಿದ್ದರು. ಈಗ ಪಂದ್ಯ ಸೋತ ಹತಾಶೆಯಲ್ಲಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪಾಕ್ ಕಾಲೆಳೆದಿದ್ದಾರೆ.

ವೈರಲ್ ಫೋಟೋ ನಿಜಾನಾ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಸುಳ್ಳು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. 2016ರಲ್ಲಿ ಕಶ್ಮೀರಾ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದನ್ನು ಖಂಡಿಸಿ ಕೆಲ ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.

ಅಂದು ಕಾಶ್ಮೀರಿ ಕೆಲ ಯುವಕರು ಹಸಿರು ಬಣ್ಣದ ದೊಡ್ಡ ಬ್ಯಾನರ್ ಜೊತೆ ಪಾಕಿಸ್ತಾನ ಧ್ವಜಗಳನ್ನು ಹಿಡಿದು ನಿಂತಿದ್ದರು. ಹಸಿರು ಬ್ಯಾನರ್ ಮೇಲೆ ನಮಗೆ ಸ್ವಾತಂತ್ರ ಬೇಕೆಂದು ಬರೆಯಲಾಗಿತ್ತು. ಇದೀಗ ಅದೇ ಫೋಟೋವನ್ನು ಎಡಿಟ್ ಮಾಡಿ, ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಕಾರ್ಗಿಲ್ ಯುದ್ಧದಷ್ಟೇ ಕಾವು ಪಡೆದ ಮತ್ತು ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಭಾರತದ ವಿರುದ್ಧದ ಸೋಲನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕ್ ತಂಡದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಹಿರಿಯ ಆಟಗಾರರು ಕೂಡ ನಾಯಕ ಸರ್ಫರಾಜ್ ವಿರುದ್ಧ ಕಿಡಿಕಾರಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಧಿಕಾರಿಗಳಿಗೆ ತಲೆನೋವು ತಂದ ಯಡಿಯೂರಪ್ಪನ ಆದೇಶ, ಇಷ್ಟಕ್ಕೂ ಆ ಆದೇಶವಾದರೂ ಏನು? ತಿಳಿಯಿರಿ,.!

    ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್‌ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ….

  • ಆರೋಗ್ಯ, ಉಪಯುಕ್ತ ಮಾಹಿತಿ

    ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..?

    ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ ನೀರನ್ನು ಕುಡಿಯುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದು. * ಬೆಳಗಿನ ಸಮಯ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆಯಾಗುತ್ತದೆ. * ದೇಹದಲ್ಲಿ ಉಷ್ಣಾಂಶವು ಹೆಚ್ಚಾಗಿ ವಿಷಕಾರಿ ಅಂಶಗಳನ್ನು ಹೊರ ಹಾಕಲು ಬಿಸಿ ನೀರು ಸಹಾಯ ಮಾಡುತ್ತದೆ. * ರಕ್ತವನ್ನು ಶುದ್ಧೀಕರಿಸಲು ಬಿಸಿ ನೀರಿನ ಸೇವನೆ ಅತ್ಯುತ್ತಮವಾಗಿದೆ….

  • ವಿಸ್ಮಯ ಜಗತ್ತು

    ಈ ಊರಿನ ಜನ ಸೂರ್ಯನನ್ನ ನೋಡೋದು 40 ದಿವಸಕ್ಕೆ ಒಂದೇ ಸಲ ಅಂತೆ..!ಯಾವ ಊರು ಗೊತ್ತಾ..?

    ಈ ನಗರವು ಪೋಲಾರ್ ವೃತ್ತದ ಆಚೆಗೆ ಕಾಣ ಸಿಗುವಂತದ್ದು, ಈ ನಗರದ ಹೆಸರು ಮುರ್ಮ್ಯಾನ್ಸ್ಕ್ಬೆ (Murmansk) ಇದು ರಷ್ಯಾ ದೇಶದ ನಾರ್ತ್ ಪೋಲ್ ನಲ್ಲಿ ಕಂಡುಬರುವ ಒಂದು ನಗರ.

  • ಸುದ್ದಿ

    ತನ್ನ ಹೆಂಡತಿಯ ರೂಮಿನಲ್ಲಿ ಆಕೆಯ ಪ್ರಿಯತಮನನ್ನು ನೋಡಿದ ಗಂಡ ಮಾಡಿದ್ದೇನು ಗೊತ್ತಾ?

    ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯತಮನಿಗೆ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಚೆವೆಲ್ಲಾದಲ್ಲಿ ನಡೆದಿದೆ.  ಗಂಡ ರವಿ, ಪತ್ನಿ ಭಾಗ್ಯಲಕ್ಷ್ಮಿ ಮತ್ತು ಆಕೆಯ ಪ್ರಿಯತಮನನ್ನು ರೂಮಿನಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯಕ್ಕೆ ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಮತ್ತು ರವಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಸಂಸಾರಿಕ ಜೀವನ ಚೆನ್ನಾಗಿ ನಡೆಯುತ್ತಿತ್ತು. ಆದರೆ ಕೆಲವು ತಿಂಗಳ…

  • ಸುದ್ದಿ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ನೂರಾರು ಎಕರೆ ಬೆಳೆ ನಾಶ…!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ. ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ. ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ…