ಸುದ್ದಿ

ಪತಿಯನ್ನ ಆಸ್ಪತ್ರೆಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ – ಸೆಲ್ಫಿ ವಿಡಿಯೋ ಮಾಡಿ ಮಹಿಳೆ ನೇಣಿಗೆ ಶರಣು…!

149

ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್‍ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು. ಈ ವೇಳೆ ಮನೆ ಮಾಲೀಕ ಸೋಮಶೇಖರ್, ಗೀತಾ ಮತ್ತು ಬಿಂದು ಪೊಲೀಸರ ಮುಂದೆಯೇ ಮಂಜುಳಾ ಮತ್ತು ಪತಿ ಸುಬ್ರಮಣಿಗೆ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದ ಮಂಜುಳಾ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ? , ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ನನ್ನ ಮಾಂಗಲ್ಯವನ್ನು ಕಿತ್ತುಕೊಂಡು ತುಂಬಾನೇ ಹಿಂಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸೋಮಶೇಖರ್, ಗೀತಾ ಮತ್ತು ಬಿಂದು ಮೂವರೂ ನನಗೆ ಮತ್ತು ಪತಿಗೆ ಚೆನ್ನಾಗಿ ಹೊಡೆದಿದ್ದಾರೆ. ಆದರೆ ಪೊಲೀಸರು ಯಾಕೆ ಹೊಡೆಯುತ್ತಿದ್ದೀರಿ ಎಂದು ಕೂಡ ಕೇಳಿಲ್ಲ. ನಾನು ಪತಿಯನ್ನು ಆಸ್ಪತ್ರೆಗೆ ಕಳುಹಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಈ ಮೂವರು ಕಾರಣರಾಗಿದ್ದು ಅವರನ್ನು ಬಿಡಬೇಡಿ. ಬಡವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Cinema

    ಚಿರಂಜೀವಿ ಸರ್ಜಾ ಅಭಿಮಾನಿಗಳು ಕಂಡಿದ್ದ ಆ ಕನಸು ಕಡೆಗೂ ಕನಸಾಗಿಯೇ ಉಳಿಯಿತು!

    ಹಲವು ಪಾತ್ರಗಳ ಮೂಲಕ ಸಿನಿಪ್ರಿಯರನ್ನು ಚಿರಂಜೀವಿ ಸರ್ಜಾ ರಂಜಿಸಿದ್ದರು. ಹಾಗಿದ್ದರೂ ಅಭಿಮಾನಿಗಳಿಗೆ ಸಮಾಧಾನ ಆಗಿರಲಿಲ್ಲ. ಯಾಕೆಂದರೆ, ಫ್ಯಾನ್ಸ್‌ಗೆ ಇದ್ದ ಮಹತ್ವದ ಆಸೆಯೊಂದು ಇನ್ನೂ ಈಡೇರಿರಲಿಲ್ಲ. ಏನದು? ಸರ್ಜಾ ಕುಟುಂಬದ ಸ್ಟಾರ್‌ ಹೀರೋಗಳೆಲ್ಲ ಜೊತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಕನಸು ಕಂಡಿದ್ದರು. ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಜೊತೆ ಅವರ ಮಾವ ಅರ್ಜುನ್‌ ಸರ್ಜಾರನ್ನು ಒಟ್ಟಿಗೆ ತೆರೆಮೇಲೆ ನೋಡಬೇಕು ಎಂಬ ಆಸೆ ಅವರದ್ದಾಗಿತ್ತು. ಈ ವಿಚಾರದ ಬಗ್ಗೆ ಸರ್ಜಾ ಕುಟುಂಬದ ಹೀರೋಗಳಿಗೆ ಆಗಾಗ ಪ್ರಶ್ನೆ ಎದುರಾಗುತ್ತಲೇ ಇತ್ತು. ‘ನೀವು…

  • ಸುದ್ದಿ

    ಜಮೀನಿನಲ್ಲಿ ಕೆಲಸವನ್ನ ಮಾಡುತ್ತಿದ್ದ ಕೂಲಿಗೆ ಜಮೀನಿನಲ್ಲಿ ಸಿಕ್ಕಿದ್ದೇನು ಗೊತ್ತಾ.!

    ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ…

  • ರಾಜಕೀಯ

    ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಮಾತನಾಡಿ, ರಾಜ್ಯದಲ್ಲಿ ಹೊಸ ಮುಖಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ ಎಂದರು. 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ, 16 ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು, 32 ಒಬಿಸಿ, 9…

  • ಸಂಬಂಧ

    ಮದುವೆಯಾಗುವ ಹುಡುಗನಿಗೆ ಅಡುಗೆ ಬರುತ್ತಾ???ಶಾಕ್ ಆಗ್ಬೇಡಿ!ಮುಂದೆ ಓದಿ…..

    ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ

  • ಉಪಯುಕ್ತ ಮಾಹಿತಿ

    ನಿಮ್ಮ ಎಲ್ಲಾ ಕಾಯಿಲೆಗಳಿಗೆ ಔಷಧಿಗಳು ಅಡುಗೆ ಮನೆಯಲ್ಲಿ ದೊರೆಯುತ್ತವೆ! ತಿಳಿಯಲು ಈ ಲೇಖನ ಓದಿ…

    ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ. ಅಡುಗೆ ಮನೆಯಲ್ಲೇ ಇದೆ ಆರೋಗ್ಯ. ದೊರೆಯುವ ಔಷಧಿಗಳು ಇಲ್ಲಿವೆ ಓದಿ.

  • ಸುದ್ದಿ

    ರಾಮ..ರಾಮ..ಮತ್ತೆ ಭಗವಾನ್ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಕ್ತರ ಕೆಂಗಣ್ಣಿಗೆ ಗುರಿಯಾದ ಪ್ರೊಫೆಸರ್ ಭಗವಾನ್..!

    ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ. ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರೊಫೆಸರ್ ಭಗವಾನ್‍ರವರು…