Sports

ಪಾಕಿಸ್ತನದ ಅಭಿಮಾನಿಗೆ ಟಿಕೆಟ್ ಕೊಡಿಸಿದ ಧೋನಿ….!

31

ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ಬಶೀರ್ (ಚಾಚಾ ಶಿಕಾಗೋ) ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್ ಕೊಡಿಸಿದ್ದಾರೆ.

ಧೋನಿ ಮತ್ತು ಬಶೀರ್ ಅವರದ್ದು 9 ವರ್ಷದ ಗೆಳತನ. ಜೂನ್ 16ರಂದು ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಧೋನಿ ಚಾಚಾ ಶಿಕಾಗೋ ಅವರಿಗೆ ಟಿಕೆಟ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಅಮೆರಿಕದ ಶಿಕಾಗೋದಲ್ಲಿ ರೆಸ್ಟೋರೆಂಟ್ ಹೊಂದಿರುವ ಪಾಕಿಸ್ತಾನ ಮೂಲದ 63 ವರ್ಷದ ಮೊಹಮ್ಮದ್ ಬಶೀರ್, ಧೋನಿ ಅಭಿಮಾನಿಯಾಗಿದ್ದಾರೆ. 2011ರ ವಿಶ್ವಕಪ್ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮೊಹಮ್ಮದ್ ಬಶೀರ್ ಭಾರತಕ್ಕೆ ಆಗಮಿಸಿದ್ದರು. ಆಗಲೂ ಧೋನಿ ಟಿಕೆಟ್ ಖರೀದಿಸಿ ಕೊಟ್ಟಿದ್ದರು.ಧೋನಿ ಮತ್ತು ಬಶೀರ್ ಅವರ ನಡುವೆ ಸ್ನೇಹ ಮುಂದುವರೆದಿದ್ದು, ಪಂದ್ಯ ವೀಕ್ಷಿಸಲು ಬಶೀರ್ ಇಂಗ್ಲೆಂಡ್‍ಗೆ ಆಗಮಿಸಿದ್ದಾರೆ.

ಧೋನಿ ತುಂಬಾ ಒಳ್ಳೆಯ ವ್ಯಕ್ತಿ ಅವರೊಂದಿಗೆ 9 ವರ್ಷಗಳಿಂದ ಸ್ನೇಹವಿದೆ. ಈ ಪಂದ್ಯದ ಟಿಕೆಟ್‍ಗಾಗಿ ಜನರು 800-900 ಪೌಂಡ್ ನೀಡಲು ತಯಾರಾಗಿದ್ದಾರೆ. ನಾನು ಈ 800-900 ಪೌಂಡ್ ನಲ್ಲಿ ಮತ್ತೆ ಚಿಕಾಗೋಗೆ ವಾಪಸ್ ಹೋಗಬಹುದು. ಆದರೆ ನಾನು ಟಿಕೆಟ್‍ಗಾಗಿ ಹೆಣಗಾಡಬೇಕಾಗಿಲ್ಲ ನನಗೆ ಧೋನಿ ಅವರು ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.ಇದೇ ವೇಳೆ ಬಶೀರ್ ಪಾಕಿಸ್ತಾನ ತಂಡ ತಂಗಿರುವ ಹೋಟೆಲ್‍ಗೆ ತೆರಳಿ ಶೋಯಬ್ ಮಲ್ಲಿಕ್ ಮತ್ತು ಅವರ ಪತ್ನಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಭೇಟಿಯಾಗಿದ್ದಾರೆ.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಹಣ ಕಾಸು

    ‘ಎಟಿಎಂ’ಗಳಲ್ಲಿ ‘2000ರೂ’ ನೋಟು ಸಿಗೋದು ಕಡಿಮೆಯಾಗಿದೆ! ಏನಾಗುತ್ತೆ ಅಂತ ನಿಮಗೇನಾದ್ರು ಗೊತ್ತಾ???

    ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ ಮುಖಬೆಲೆಯ ನೋಟುಗಳನ್ನು ಸ್ವಲ್ಪ ದಿನಗಳಲ್ಲೇ ಬ್ಯಾನ್ ಮಾಡುತ್ತಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ಆರ್‍ಬಿಐ ಅಲ್ಲಗಳೆದಿತ್ತು. ಆದರೆ ಈದೀಗ ಕೆಲವು ವರದಿಗಳ ಪ್ರಕಾರ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್‍ಬಿಐ ನಿಲ್ಲಿಸಿದೆ ಎಂದು ವರದಿಯಾಗಿದೆ.

  • ಸುದ್ದಿ

    MP ಪ್ರತಾಪ್ ಸಿಂಹರವರನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು!ಈ ಸುದ್ದಿ ನೋಡಿ…

    ಬಹುಭಾಷ ನಟ ಪ್ರಕಾಶ್ ರೈ ಸಲ್ಲಿಸಿದ್ದ ಮಾನನಷ್ಟ ಕೇಸಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರತಾಪ್ ಸಿಂಹ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಆದೇಶದ ಮೇರೆಗೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದು ಕೂರಿಸಿದ್ದಾರೆ. ಮತ್ತೆ ರೀ ಕಾಲ್ ಮಾಡುವವರೆಗೆ ಕಸ್ಟಡಿಗೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ….

  • ಸುದ್ದಿ

    ಮರದಲ್ಲೇ ಕುರ್ಚಿ ಬೆಳೆಯುವ ಪದ್ಧತಿ ಬಗ್ಗೆ ನಿಮಗೆಷ್ಟು ಗೊತ್ತು.?? ಇದರಿಂದಾಗುವ ಲಾಭಗಳೇನು ಗೊತ್ತೇ….

    ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನ ಸೆಳೆದಿದೆ. ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ…

  • Uncategorized

    ಹಳ್ಳಿ ಹುಡುಗರಿಂದ ಕ್ರಿಕೆಟ್ ಕನ್ನಡದಲ್ಲಿ ಲೈವ್ ಕಾಮೆಂಟ್ರಿ

    ನಮ್ಮ ತಂಡದವರಿಂದ ಹಳ್ಳಿಯ ಪ್ರತಿಯೊಬ್ಬನಿಗೂ ಮನಮುಟ್ಟುವಾಗೆ ಕನ್ನಡಲ್ಲಿ ಕ್ರಿಕೆಟ್ ರಸದೌತಣವನ್ನು ಸವಿಯಲು ಸಿದ್ದರಾಗಿ …. ಸಾಧಾರಣ ಮೊತ್ತ ಬೆನ್ನತ್ತಿದರೂ ಆತಂಕದ ಕ್ಷಣಗಳನ್ನು ಎದುರಿಸಿದ ಪಾಕಿಸ್ತಾನ ಒತ್ತಡ ಮೆಟ್ಟಿ ನಿಂತು ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿತು. 237 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಕಂಡರೂ ನಂತರ ಆತಂಕಕ್ಕೆ ಒಳ ಗಾಯಿತು. ಅಜರ್‌ ಅಲಿ ಮತ್ತು ಫಕ್ರ್ ಜಮಾನ್‌ ಮೊದಲ ವಿಕೆಟ್‌ಗೆ 68 ಎಸೆತಗಳಲ್ಲಿ 74…