ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕುರಿಗಾಯಿ ಹನುಮಂತ ಆಯಿತು, ಕೊಪ್ಪಳದ ಗಂಗಮ್ಮ ಆಯಿತು. ಈಗ ಇವರ ಸಾಲಿಗೆ ಮತ್ತೊಂದು ಗಾನ ಕೋಗಿಲೆ ಸೇರಿಕೊಂಡಿದೆ. ಸರ್ಕಾರಿ ನೌಕರಿ ಮಾಡುತ್ತಲೇ, ಸಂಗೀತ ಸರಸ್ವತಿಯ ಸೇವೆ ಮಾಡುತ್ತಾ ಯಾದಗಿರಿಯ ಬಸ್ ಕಂಡಕ್ಟರ್ ಪರಶುರಾಮ್ ಪಬ್ಲಿಕ್ ಹೀರೋ ಆಗಿದ್ದಾರೆ.

ಹೌದು. ಯಾದಗಿರಿ- ಕಲಬುರಗಿ ಮಧ್ಯೆ ಸಂಚರಿಸುತ್ತಿರುವ ಈಶಾನ್ಯ ಸಾರಿಗೆ ಬಸ್ ಹತ್ತಿದರೆ ನಿಮಗೆ ಫುಲ್ ಎಂಟರ್ಟೈನ್ಮೆಂಟ್ ಸಿಗೋದು ಗ್ಯಾರಂಟಿ. ಯಾಕಂದ್ರೆ ಬಸ್ನ ಕಂಡಕ್ಟರ್ ಕಂಠದಿಂದ ಹೊರಹೊಮ್ಮುವ ಹಾಡುಗಳು ಎಲ್ಲರ ಮನಸೋರೆಗೊಳ್ಳುತ್ತವೆ. ಬಸ್ಸಲ್ಲೇ ಕರೋಕೆ ಮ್ಯೂಸಿಕ್ ಹಾಕಿಕೊಂಡು ಕೈಯಲ್ಲಿ ಮೈಕ್ ಹಿಡ್ಕೊಂಡು ಹಾಡೋಕೆ ಶುರು ಮಾಡ್ತಾರೆ.

ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರಿನವರಾದ ಪರಶುರಾಮ್, ಕಳೆದ ಎಂಟು ವರ್ಷದಿಂದ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪರಶುರಾಮ್ಗೆ ಶಾಲಾ ದಿನಗಳಿಂದಲೂ ಹಾಡು ಹೇಳೋ ಹುಚ್ಚು. ಹೀಗಾಗಿ ಇದೀಗ ಇಲಾಖೆಯ ಅನುಮತಿ ಪಡೆದು ಬಸ್ಸಲ್ಲೂ ಗಾಯನ ಮುಂದುವರಿಸಿದ್ದಾರೆ.

ಅಂದ ಹಾಗೇ ಪರಶುರಾಮ್ ಎಲ್ಲೂ ಹೋಗಿ ಸಂಗೀತ ಕಲಿತಿಲ್ಲ. ಆದರೂ ಶೃತಿ, ರಾಗ, ಲಯ ತಪ್ಪದಂತೆ ಹಾಡಿ ನಿತ್ಯ ನೂರಾರು ಪ್ರಯಾಣಿಕರನ್ನು ರಂಜಿಸುತ್ತಾರೆ. ಈ ಮೂಲಕ ಅಭಿಮಾನಿಗಳನ್ನೂ ಗಳಿಸಿಕೊಂಡಿದ್ದಾರೆ. ಈ ಭಾಗದಲ್ಲಿ ನಿತ್ಯ ಸಂಚರಿಸೋ ಸರಕಾರಿ ನೌಕರರು, ವಿದ್ಯಾರ್ಥಿಗಳು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಈ ಬಸ್ ಹತ್ತುವುದಾಗಿ ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಒಟ್ಟಿನಲ್ಲಿ ಪರಶುರಾಮ್ ತನ್ನ ಗಾಯನದ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ವೃತ್ತಿಯ ಜೊತೆಗೆ ತನ್ನ ಹವ್ಯಾಸ ಮುಂದುವರಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈರುಳ್ಳಿಯನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ಮೂಳೆಗಳು, ನರಗಳು ದೃಢವಾಗಿರುತ್ತವೆಯಂತೆ. ಎರಡೂ ಹೊತ್ತಿನ ಊಟದಲ್ಲಿ ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ಸೇವಿಸುವವರು ನಿತ್ಯ ಆರೋಗ್ಯವಂತರಾಗಿ ಮುಂದುವರೆಯುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಅನೇಕ ದುಬಾರಿ ಕಾರುಗಳು ಮತ್ತು ಬೈಕ್ಗಳು ಇವೆ. ಆದರೂ ದರ್ಶನ್ ಲೂನಾ ಗಾಡಿಯಲ್ಲಿ ಸವಾರಿ ಮಾಡಿದ್ದಾರೆ. ನಟ ದರ್ಶನ್ ಅವರ ಪಾಲಿಗೆ ಈ ಲೂನಾ ಗಾಡಿ ಲಕ್ಕಿಯಾಗಿದೆ. ಯಾಕೆಂದರೆ ಈ ಲೂನಾ ಗಾಡಿಯನ್ನು ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕೊಡಿಸಿದ್ದರು. ಹೀಗಾಗಿ ದರ್ಶನ್ ಇಂದಿಗೂ ಅಪ್ಪ ಕೊಡಿಸಿದ ಗಾಡಿನಾ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ದರ್ಶನ್ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವ ಮೊದಲು ಲೈಟ್ ಬಾಯ್ ಆಗಿದ್ದರು. ಆಗ ಈ ಲೂನಾ ಗಾಡಿನಾ…
ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.
ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ. ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು. ಈ ಮಾರ್ಗಸೂಚಿಗಳನ್ನು…
ಮೂಲಭೂತ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಶಾಶ್ವತ ಬಂದ್ ಆಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ )ಅಡಿ ನೀಡುತಿದ್ದ ಆರ್ಥಿಕ ನೆರವನ್ನು ಪ್ರಸಕ್ತ ವರ್ಷದಿಂದಲೇ ಸ್ಥಗಿತ ಗೊಳಿಸುವ ಮಹತ್ವದ ತರ್ಮಾನ ಕೈಗೊಂಡಿದೆ.!!!!
ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಇಡೀ ದೇಶದ ಗಮನ ಸೆಳೆಯುತ್ತಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಈ ಮೊದಲು ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರು ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡುವ ಮೂಲಕ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮೈತ್ರಿ ಪಕ್ಷದ ಅಭ್ಯರ್ಥಿ ಹಾಗೂ…