ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ.

1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೇನೆಯವರು ಮೊದಲು ಉತ್ತಯ್ಯ ಮಿಸ್ಸಿಂಗ್ ಎಂದು, ನಂತರ ಅವರು ನಿಧನರಾಗಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಸಾಕ್ಷಿ ಕೊಡಿ ಎಂದು ಪಾರ್ವತಿ ಇದುವರೆಗೂ ಪತಿಗಾಗಿ ಕಾಯುತ್ತಿದ್ದಾರೆ.

ಆಗಸ್ಟ್ 1999ರಂದು, ಉತ್ತರಪ್ರದೇಶದಲ್ಲಿ ಸ್ನಿಗ್ನಲ್ ಬೆಟಾಲಿಯನ್‍ನಲ್ಲಿ ಲಾನ್ಸ್ ನಾಯಕ್ ಆಗಿದ್ದ ಉತ್ತಯ್ಯ ಮನೆಗೆ ಬಂದಿದ್ದರು. 20 ದಿನ ಇದ್ದು ಗರ್ಭಿಣಿ ಪತ್ನಿಗೆ ದೇಶ ಸೇವೆ ಮುಗಿಸಿ ಬೇಗ ಹಿಂದಿರುಗಿ ಬರುತ್ತೇನೆ ಎಂದು ಹೇಳಿ ಅಲಹಾಬಾದ್‍ನ ತನ್ನ ಯುನಿಟ್‍ಗೆ ವಾಪಾಸ್ ಹೋಗಿದ್ದರು. ಬಳಿಕ ನವೆಂಬರ್ 21ರಂದು ಪತ್ನಿಗೆ ಕರೆ ಮಾಡಿ ಹುಷಾರಿಲ್ಲ ಎಂದು ಹೇಳಿದ್ದರು. ಅದೇ ಕಡೆಯ ಕರೆ, ಆ ನಂತರ ಮತ್ತೆ ಕರೆಯೇ ಬರದಿರೋದ್ರಿಂದ ಆತಂಕಕ್ಕೀಡಾದ ಕುಟುಂಬಕ್ಕೆ ಡಿಸೆಂಬರ್ 4ಕ್ಕೆ ಒಂದು ಟೆಲಿಗ್ರಾಂ ಬಂತು. ಕಡೆಗೂ ಪತಿಯಿಂದ ಟೆಲಿಗ್ರಾಂ ಬಂತು ಎಂದುಕೊಂಡಿದ್ದ ಪತ್ನಿಗೆ ದೊಡ್ಡ ಆಘಾತವೇ ಕಾದಿತ್ತು.
ಆ ಟೆಲಿಗ್ರಾಂನಲ್ಲಿ ಉತ್ತಯ್ಯ ಸೈನ್ಯದ ಯುನಿಟ್‍ನಲ್ಲಿಲ್ಲ ಊರಲ್ಲಿದ್ರೆ ಕಳುಹಿಸಿಕೊಡಿ ಎಂದು ಬರೆಯಲಾಗಿತ್ತು. ಆ ಸುದ್ದಿ ಕೇಳಿ ಶಾಕ್‍ಗೆ ಒಳಗಾದ ಯೋಧ ಉತ್ತಯ್ಯನ ಗರ್ಭಿಣಿ ಪತ್ನಿಗೆ ಡೆಲಿವರಿಯಾಗಿ ಮಗು ಕೂಡ ಸಾವನ್ನಪ್ಪಿತ್ತು. ದಿನ ಕಳೆದಂತೆ ಸುಧಾರಿಸಿಕೊಂಡು ಪತಿಗಾಗಿ ಹುಡುಕಾಟ ನಡೆಸಿ ಸೈನ್ಯದ ಯುನಿಟ್‍ಗೂ ಹೋಗಿ ಬಂದರೂ ಪತಿಯ ಸುಳಿವೇ ಸಿಗಲಿಲ್ಲ. ಕಡೆಗೆ ಸೇನೆ ಜೂನ್ 14ಕ್ಕೆ ಉತ್ತಯ್ಯ ನಿಧನರಾಗಿದ್ದಾರೆ ಎಂದು ಪತ್ರ ಕಳುಹಿಸಿದ್ದರು.

ಪತ್ರ ಕಳುಹಿಸಿದ ನಂತರ 2010ರಿಂದ ಯೋಧನ ಪತ್ನಿಗೆ ಪಿಂಚಣಿ ಕೊಡುವುದಕ್ಕೆ ಶುರು ಮಾಡಿದ ಸರ್ಕಾರ ಮೃತದೇಹವಾಗಲಿ, ಎಲ್ಲಿ, ಹೇಗೆ ನಿಧನರಾದರು ಎಂದಾಗಲೀ ಯೋಧನ ಕುಟುಂಬಕ್ಕೆ ಮಾಹಿತಿಯೇ ಕೊಟ್ಟಿಲ್ಲ. ಹೀಗಾದರೆ ಹೇಗೆ ಸೈನ್ಯ ನಂಬಿ ಯೋಧರನ್ನಾಗಿ ದೇಶ ಸೇವೆಗೆ ನಮ್ಮವರನ್ನು ಕಳುಹಿಸೋದು ಎಂದು ಪಾರ್ವತಿ ಹಿತೈಷಿಗಳು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ. ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ…
“ವಾಟ್ಸಪ್” (ಸಾಮಾಜಿಕ ಜಾಲತಾಣ)ವನ್ನು ಉಪಯೋಗಿಸದವರು ಯಾರಿದ್ದಾರೆ. ಈಗಂತೂ ಎಲ್ಲಾ ವಯೋಮಾನದವರು
ಪವರ್ ಫುಲ್ ಆ್ಯಕ್ಟಿಂಗ್, ಪವರ್ ಫುಲ್ ಡ್ಯಾನ್ಸ್, ಪವರ್ ಫುಲ್ ವಾಯ್ಸ್, ಫುಲ್ ಪವರ್ನಲ್ಲೇ ಆ್ಯಕ್ಷನ್. ಪವರ್ ಸ್ಟಾರ್ ಎನ್ನಲು ಇನ್ನೇನು ಬೇಕು ಅಲ್ಲವೇ, ಹೌದು ಕನ್ನಡದ ‘ರಾಜರತ್ನ’ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೋದಲ್ಲಿ ಬಂದಲ್ಲಿ ಗೆಳೆಯರಿರುವುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಬಿಡುವು ಸಿಕ್ಕಾಗೆಲ್ಲಾ ಅಪ್ಪು ಗೆಳೆಯರೊಂದಿಗೆ ಟ್ರಿಪ್ ಹೋಗುತ್ತಾರೆ ಎಂಬ ಮಾತಿದೆ. ಹಾಗಿದ್ರೆ ಸ್ನೇಹಿತರ ದಿನ ಬುಟ್ ಬಿಡ್ತಾರಾ ಇಲ್ಲ ಎಂಬುದಕ್ಕೆ ನಟ ಪುನೀತ್ ರಾಜ್ಕುಮಾರ್ ಅವರು ಹಾಕಿರುವ ಈ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರಾಸರಿ ಸುಮಾರು 25 ವರ್ಷಗಳ ಕಲ ನಿದ್ರಿಸುತ್ತಾನೆ. ಮಾನವರಿಗೆ ನಿದ್ರೆ ಅಗತ್ಯ. ಮತ್ತೆ ನಿದ್ದೆ ಏಕೆ ಅಗತ್ಯವಾಗಿದೆ ಎಂದು ಸಂಶೋಧಕರು ಸಹ ತಿಳಿದುಕೊಳ್ಳಬೇಕಾದ ವಿಷಯ. ಪ್ರತಿ ರಾತ್ರಿ 7-9 ಗಂಟೆಗಳ ಕಾಲ ಅಗತ್ಯವಿರುವ ಮಾತುಗಳನ್ನು ವಿವರಿಸುತ್ತಾರೆ. ಏಕೆಂದರೆ ನಮ್ಮ ನಿದ್ರೆಯು ನಮ್ಮ ಆರೋಗ್ಯದ ಮೇಲೆ ಸಂಭಂದಪಟ್ಟಿರುತ್ತದೆ.ಬೆನ್ನುನೋವಿನಿಂದ ಸಿನಸ್ ಇನ್ಫೆಕ್ಷನ್ ಗೆ ರಕ್ತದೊತ್ತಡ, ಒಂದು ನಿರ್ದಿಷ್ಟ ಮಾರ್ಗದಲ್ಲಿ ನಿದ್ರೆ ಮಾಡುವುದರಿಂದ ಈ ಎಲ್ಲಾ ರೀತಿಯ ಲಕ್ಷಣಗಳು…
MAYOON N/ BIOTECHNOLOGIST / KOLAR ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್…
ಸೇತುವೆ ಮೇಲೆ ನಿಂತ ಮೂತ್ರ ಮಾಡಿದ ವ್ಯಕ್ತಿಯೊಬ್ಬ ಅನೇಕರು ಆಸ್ಪತ್ರೆ ಸೇರಲು ಕಾರಣವಾಗಿದ್ದಾನೆ. ಗಾಯಾಳುಗಳನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಜರ್ಮನ್ ರಾಜಧಾನಿ ಬರ್ಲಿನ್ ನಲ್ಲಿ ನಡೆದಿದೆ. ಮಾಧ್ಯಮದ ವರದಿ ಪ್ರಕಾರ, ಜಾನೋವಿಟ್ಜ್ ಸೇತುವೆ ಮೇಲೆ ನಿಂತ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸೇತುವೆ ಕೆಳಗೆ ಹೋಗ್ತಿದ್ದ ಪ್ರವಾಸಿ ಬೋಟ್ ನಲ್ಲಿ ಗೊಂದಲ ಸೃಷ್ಟಿಯಾಗಿದೆ. ಘಟನೆಯಲ್ಲಿ ಅನೇಕ ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣ ರಕ್ಷಣಾ ಪಡೆಯನ್ನು ಕರೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿ ವಿರುದ್ಧ ದೂರು ದಾಖಲಿಸಿಕೊಂಡು…