ಸುದ್ದಿ

ರಾಜ್ಯ ಸರ್ಕಾರದ ಖಡಕ್ ಎಚ್ಚರಿಕೆ :2ನೇ ತರಗತಿವರೆಗೂ ಹೋಂ ವರ್ಕ್‌ ನೀಡುವಂತಿಲ್ಲ…..!

49

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್‌ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್‌ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ.


ಅಲ್ಲದೆ, ಈ ಮಕ್ಕಳ ಹೋಂ ವರ್ಕ್‌ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್‌ ನೀಡಬಾರದು ಎಂದು ಮೇ 3ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ರಾಜ್ಯ ಸರ್ಕಾರಕ್ಕೆ ಹೊಸ ನಿರ್ದೇಶನ ನೀಡಿದೆ. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್‌ ನೀಡುವ ಹಾಗೂ 1ರಿಂದ 5ನೇ ತರಗತಿ ಮಕ್ಕಳಿಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿದ ಪಠ್ಯ ಹೊರತುಪಡಿಸಿ ಇನ್ಯಾವುದೋ ಪಠ್ಯ ಬೋಧನೆ ಮಾಡುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬಹುದು ಎಂದು ತಿಳಿಸಿದೆ.


ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಭಾಷೆ ಮತ್ತು ಗಣಿತ ವಿಷಯ ಹಾಗೂ 3ರಿಂದ 5ನೇ ತರಗತಿ ಮಕ್ಕಳಿಗೆ ಭಾಷೆ, ಪರಿಸರ ವಿಜ್ಞಾನ ಹಾಗೂ ಗಣಿತ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಬಾರದು ಎಂದು ಖಡಕ್‌ ಎಚ್ಚರಿಕೆ ನೀಡಿದೆ.


ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಪಠ್ಯ ವಿಷಯಗಳನ್ನು ಹೊರತುಪಡಿಸಿ, ಇನ್ಯಾವುದೇ ಪಠ್ಯಕ್ರಮ ನಿಗದಿಪಡಿಸಿಕೊಂಡು ಬೋಧಿಸುವ ಶಾಲೆಗಳ ಬಗ್ಗೆ ನಿಗಾ ವಹಿಸಲು ಹಾಗೂ ಶಾಲೆಗೆ ಭೇಟಿ ನೀಡಿ ಈ ಬಗ್ಗೆ ತಪಾಸಣೆ ನಡೆಸಲು ವಿಶೇಷ ತಂಡ ರಚನೆ ಮಾಡಿಕೊಳ್ಳಬೇಕು ಎಂದು ಇಲಾಖೆಯ ಆಯುಕ್ತರಿಗೆ, ಯೋಜನಾ ನಿರ್ದೇಶಕರಿಗೆ, ಉಪ ನಿರ್ದೇಶಕರಿಗೆ ಸರ್ಕಾರ ಸೂಚಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ನಮ್ಮ ಹಳ್ಳಿ (ಲೊಕೇಶನ್ ಟು ಲೈವ್)

    ಸ್ನೇಹಿತರೇ ನೋಡಿ ನಮ್ಮ ಕನ್ನಡ ನಾಡು ಚೆಲುವಿನ ಬೀಡು………………ಅಮೋಘಮಯ ಪ್ರೇಕ್ಷಣಿಯ ತಾಣಗಳನ್ನು ಹೊಂದಿರುವ ಇ ನಮ್ಮ ಕನ್ನಡ ನಾಡು ವರ್ಣ ರಂಜಿತವಾಗಿದೆ ,ಮರೆಯದೆ ಭೇಟಿ ಕೊಡಿ. ಕರ್ನಾಟಕದ ಆ ಸೊಬಗನ್ನು ಸವಿಯಲು

  • ಆರೋಗ್ಯ

    ಗಂಟಲು ನೋವಿಗೆ ಮನೆಯಲ್ಲೇ ಔಷಧಿ ಸುಲಭವಾಗಿ ತಯಾರಿಸ ಬಹುದು ಈ ಲೇಖನ ಓದಿ ತಿಳಿಯಿರಿ….

    ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟ ವಾಗುತ್ತದೆ. ಆಹಾರ ಸೇವಿಸಲು ಸಹ ಕಷ್ಟ ವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ.

  • ಆಧ್ಯಾತ್ಮ

    ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ.. ಆದರೆ 48 ಯಾಕೆ, 108 ಯಾಕೆ ಅಂತ ಕೇಳಿದ್ರೆ, ಹೇಳೋರು ತುಂಬಾ ಕಮ್ಮಿ… ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಹಾಗಾದ್ರೆ 48 ದಿನ ಪೂಜೆ ಮಾಡಿ,…

  • ಸುದ್ದಿ

    ಮದುವೆ ಮೆರವಣಿಗೆಗೆ ಬಂದು ಸ್ಮಶಾನಕ್ಕೆ ಸೇರಿದ್ರು…ಕಾರಣ?

    ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ. ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ..ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ…

    ಸೋಮವಾರ, 2/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯ ಸಿದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವೃಷಭ:- ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಕೆಲಸಗಳು ಉತ್ತಮ ಫಲ ನೀಡುವುದರೊಂದಿಗೆ ಹಣಕಾಸಿನ ಅನುಕೂಲತೆಗಳು…