ಸುದ್ದಿ

ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

179

ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ.

ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು ಕಾಪಾಡುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೊಸ ಟಿವಿಎಸ್ ಅಪಾಚಿ ಆರ್ ಆರ್ 310 ಆರ್ ಟಿ ಸ್ಲಿಪ್ಪರ್ ಕ್ಲಚ್ ಒಂದು ಶಕ್ತಿಯುತ ಹಾಗೂ ಅಧಿಕ ಉಪಯುಕ್ತತೆಯ ಸೌಲಭ್ಯವಾಗಿದ್ದು, ಇದು ನಗರ ಪ್ರದೇಶ, ಹೆದ್ದಾರಿಗಳ ಜೊತೆಗೆ ರೇಸಿಂಗ್ ಸ್ಪರ್ಧೆಗಳಿಗೂ ಉತ್ತಮವಾಗಿವೆ.

ಇದು ರೇಸಿಂಗ್ ಟ್ರ್ಯಾಕ್ ಗಳಲ್ಲಿ ವೇಗವಾಗಿ ಸಾಗುವಾಗ ಹಿಂಭಾಗದ ದೃಶ್ಯಗಳನ್ನು ಸ್ಪಷ್ಟವಾಗಿ ತೋರಿಸುವ ಡಿಒಎಚ್ ಸಿ (ಡಬ್ಬಲ್ ಓವರ್ ಹೆಡ್ ಕ್ಯಾಮೆರಾ), ಲಿಕ್ವಿಡ್ ಕೂಲ್ಡ್ ಇಂಜಿನ್ ಹಾಗೂ ಆಯಿಲ್ ಕೂಲಿಂಗ್ ತಂತ್ರಜ್ಞಾನ, 6-ವೇಗದ ಗೇರ್ ಬಾಕ್ಸ್, ಸ್ಪರ್ಧೆಗಳಿಗೆ ಅನುಕೂಲಕರವಾದ ವರ್ಟಿಕಲ್ ಸ್ಪೀಡೋ-ಕಮ್-ಟ್ಯಾಕೋಮೀಟರ್, ಮೈಕೆಲಿನ್ ಸ್ಟ್ರೀಟ್ ಸ್ಪೋರ್ಟ್ಸ್ ಚಕ್ರಗಳನ್ನು ಒಳಗೊಂಡಿದೆ. ಇದು ಕೆಂಪು ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    5 ವರ್ಷ ಅಪಾರ್ಟ್‌ಮೆಂಟ್ ನಿಷೇಧಜ್ಞೆ……!

    ಮುಂದಿನ ಐದು ವರ್ಷ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಚಿಂತನೆ ನಡೆದಿದೆ ಎಂದು ಹೇಳುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಶಾಕ್‌ ನೀಡಿದ್ದಾರೆ. ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಸ್ಕೃತಿ ಹೆಚ್ಚುತ್ತಿದ್ದು, ಸಮಸ್ಯೆಗಳೂ ಬೆಳೆಯುತ್ತಿವೆ. ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಆಗುವುದಿಲ್ಲ. ಖಾಸಗಿಯವರು ಮೂಲ ಸೌಲಭ್ಯ ಒದಗಿಸುವ ಭರವಸೆ ನೀಡದೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿ, ಮಾರಾಟ ಮಾಡುತ್ತಾರೆ. ಈಗ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಐದು ವರ್ಷ…

  • ಉಪಯುಕ್ತ ಮಾಹಿತಿ

    ರೆಫ್ರಿಜರೇಟರ್, ಏರ್‍ಕಂಡಿಷನರ್,ಫ್ರಿಜ್‍ನಂಥ ಗೃಹೋಪಯೋಗಿ ಸಾಧನಗಳು ಕಡಿಮೆ ಬೆಲೆಯಲ್ಲಿ ದೊರಿಯಳಿವೆ..!ತಿಳಿಯಲು ಇದನ್ನು ಓದಿ..

    ಜನರ ತೆರಿಗೆ ಹೊರೆ ತಪ್ಪಿಸಲು ಗ್ರಾಹಕರ ಉತ್ಪನ್ನಗಳು ಹಾಗೂ ದಿನ ಬಳಕೆ ವಸ್ತುಗಳ ಮೇಲಿನ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟ) ಕಡಿಮೆ ಮಾಡಿರುವ ಕೇಂದ್ರ ಸರ್ಕಾರ ಈಗ ವಾಷಿಂಗ್‍ಮೆಷಿನ್, ಫ್ರಿಜ್‍ನಂಥ ಗೃಹೋಪಯೋಗಿ ಸಾಧನಗಳ ಸುಂಕ ಕಡಿಮೆ ಮಾಡಲು ಚಿಂತನೆ ನಡೆಸಿದೆ.

  • Sports, ಕ್ರೀಡೆ

    ಎಬಿ ಡಿ ವಿಲಿಯರ್ಸ್ ಆರ್ ಸಿ ಬಿ ಮತ್ತು ದಕ್ಷಿಣ ಆಫ್ರಿಕಾ ತಂಡ ದಿಲ್ಲಿ ತಮ್ಮ ಪಾತ್ರವನ್ನು ಇಲ್ಲಿ ಹೇಳಿದ್ದಾರೆ

    ಅವರಿಗೆ ಭವಿಷ್ಯ ಏನೆಂದು ಖಚಿತವಾಗಿಲ್ಲ ಆದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ರಾಷ್ಟ್ರೀಯ ತಂಡದಲ್ಲಿ ಮತ್ತು ಅವರ ಐಪಿಎಲ್ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭವಿಷ್ಯದ ಸೆಟ್‌ಅಪ್‌ನಲ್ಲಿ ಆಡಲು ಪಾತ್ರವನ್ನು ಹೊಂದಿರುತ್ತಾರೆ ಎಂದು ವಿಶ್ವಾಸ ಹೊಂದಿದ್ದಾರೆ. ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಎಲ್ಲಾ ರೀತಿಯ ಆಟದಿಂದ ನಿವೃತ್ತರಾಗಿದ್ದರು. “ಎಸ್‌ಎ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ನಾನು ಇನ್ನೂ ಒಂದು ಪಾತ್ರವನ್ನು ವಹಿಸುತ್ತೇನೆ…

    Loading

  • ಜೀವನಶೈಲಿ

    ದಯವಿಟ್ಟು ಕಡಿಮೆ ಬೆಲೆಯ “ಕಾಸ್ಮೆಟಿಕ್ಸ್”ಗಳನ್ನು ಬಳಸುವ ಮುನ್ನ ಹುಷಾರಾಗಿರಿ!ತಿಳಿಯಲು ಈ ಲೇಖನಿ ಓದಿ, ಮರೆಯದೇ ಶೇರ್ ಮಾಡಿ…

    ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ

  • ಸುದ್ದಿ

    ಧೋನಿ ನಿವೃತ್ತಿಗೆ ಕೊಹ್ಲಿ ಪ್ರತಿಕ್ರಿಯೆ…..!

    ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಸ್ಲೋ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಇಷ್ಟೇ ಅಲ್ಲ ಧೋನಿ ನಿವೃತ್ತಿಗೂ ಒತ್ತಡ ಕೇಳಿ ಬಂದಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಧೋನಿ ಎಲ್ಲಾ ಟೀಕಿಗೆ ಉತ್ತರಿಸಿದ್ದಾರೆ. 50 ರನ್ ಸಿಡಿಸೋ ಮೂಲಕ ಭಾರತದ ದಿಟ್ಟ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆದರೆ ಪಂದ್ಯ ಗೆಲ್ಲಲಿಲ್ಲ ಅನ್ನೋ ಕೊರಗು ಇನ್ನು ಮಾಸಿಲ್ಲ. ಇದರ ನಡುವೆ ಮತ್ತೆ ಧೋನಿ ನಿವೃತ್ತಿ ಪಶ್ನೆ ಎದ್ದಿದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ….

  • ಸೌಂದರ್ಯ

    ಜಿಡ್ಡು ಮುಖ(ಆಯಿಲ್ ಪೇಸ್ )ಇರುವವರು ಫ್ರೇಶ್ ಆಗಿ ಕಾಣಲು ಇಲ್ಲಿದೆ ಪರಿಹಾರ..! ಈ ಲೇಖನ ಓದಿ…….

    ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು. ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.