ಸುದ್ದಿ

ವರದಕ್ಷಿಣೆ ಬೇಡವೆಂದ ಹೇಳಿದ ವರನಿಗೆ ಸಿಕ್ಕಿತು 1 ಲಕ್ಷ ಮೌಲ್ಯದ ಸಾವಿರ ಪುಸ್ತಕ…!

113

ಕೋಲ್ಕತ್ತಾ: ವರದಕ್ಷಿಣೆಯೇ ಬೇಡ ಎಂದಿದ್ದ ವರನಿಗೆ 1 ಲಕ್ಷ ರೂಪಾಯಿ ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಉಡುಗೊರೆಯಾಗಿ ನೀಡಿ ಮಗಳನ್ನು ಧಾರೆಯೆರೆದು ಕೊಟ್ಟ ವಿಶೇಷ ಮದುವೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾದ ಶಿಕ್ಷಕ ಸೂರ್ಯಕಾಂತ್ ಬರಿಕ್ ಅವರ ಮದುವೆಯು ಅದೇ ಊರಿನ ಪ್ರಿಯಾಂಕಾ ಬೇಜ್ ಅವರ ಜೊತೆ ಖೇಜುರಿಯ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಬೇಕಿತ್ತು. ಈ ವೇಳೆ ಕಲ್ಯಾಣಮಂಟಪಕ್ಕೆ ಬಂದ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಗಿಫ್ಟ್ ಮಾಡಿದ್ದಾರೆ. ವರದಕ್ಷಿಣೆ ನಿರಾಕರಿಸಿ ಎಲ್ಲರಿಗೂ ಮಾದರಿಯಾದ ವರನಿಗೆ ಈ ಉಡುಗೊರೆ ನೋಡಿ ಸಿಕ್ಕಪಟ್ಟೆ ಖುಷಿಯಾಗಿದೆ. ಈ ವಿಶೇಷ ಉಡುಗೊರೆ ವಿಚಾರ ಸದ್ಯ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ.

ನಾನು ಯಾವುದೇ ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ನಾನು ಕಲ್ಯಾಣ ಮಂಟಪಕ್ಕೆ ಬಂದಾಗ, ಪುಸ್ತಕಗಳ ಬೃಹತ್ ರಾಶಿಯನ್ನು ಉಡುಗೊರೆಯಾಗಿ ಕಂಡು ತುಂಬಾ ಆಶ್ಚರ್ಯವಾಯಿತು ಎಂದು ಬರಿಕ್ ಹೇಳಿದ್ದಾರೆ. ಹಾಗೆಯೇ ನನ್ನ ಪತಿಗೆ ಓದುವ ಹಂಬಲ ಹೆಚ್ಚು. ನನಗೂ ಓದುವ ಹವ್ಯಾಸವಿದೆ. ಇದನ್ನು ತಿಳಿದ ನನ್ನ ತಂದೆ ಈ ಗಿಫ್ಟ್ ಕೊಟ್ಟಿದ್ದಾರೆ ಎಂದು ವಧು ತಿಳಿಸಿದ್ದಾರೆ.

ಈ ಬಗ್ಗೆ ವಧುವಿನ ಕುಟುಂಬದವರು ಮಾತನಾಡಿ, ಈ ಪುಸ್ತಕಗಳನ್ನು ಕೊಲ್ಕತ್ತಾ ಕಾಲೇಜು ರಸ್ತೆ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪ್ರಕಾಶನವಾದ ಉದ್ಧೋಧನ್ ಪಬ್ಲಿಷ್ ಹೌಸ್‍ನಿಂದ ಖರೀದಿಸಿದ್ದೇವೆ. ಈ ಪುಸ್ತಕ ಸಂಗ್ರಹಣೆಯಲ್ಲಿ ರವೀಂದ್ರನಾಥ ಟ್ಯಾಗೋರ್, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮತ್ತು ಶರತ್ ಚಂದ್ರ ಚಟ್ಟೋಪಾಧ್ಯಾಯವರ ಸಂಪೂರ್ಣ ಕೃತಿಗಳು ಇವೆ ಎಂದರು.

ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದು ಅಪರಾಧ ಎಂದು ತಿಳಿದಿದ್ದರೂ ಅನೇಕರು ವರದಕ್ಷಿಣೆಯಿಲ್ಲದೆ ಮದುವೆ ಆಗುವುದಿಲ್ಲ. ಇಂತಹ ಜನರ ನಡುವೆಯೂ ಸೂರ್ಯಕಾಂತ್ ಅವರ ತರಹ ವರದಕ್ಷಿಣೆ ನಿರಾಕರಿಸುವವರ ಸಂಖ್ಯೆ ಕಡಿಮೆ. ಸೂರ್ಯಕಾಂತ್ ಅವರು ಇತರರಿಗೆ ಮಾದರಿ ಎಂದು ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರಗಳನ್ನು, ಹಂಚದ ಪೋಸ್ಟ್‌ಮ್ಯಾನ್‌.

    ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.  ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….

  • corona

    ಕೋವಿಡ್-19 ಮಾರ್ಗಸೂಚಿ ಪಾಲನೆಗೆ ಸೂಚನೆ

    ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲೆಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯವಾಗಿದೆ. ಮುಚ್ಚಿದ ಸಂರಕ್ಷಣೆಗಳಾದ  (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಛೇರಿಗಳು…

  • ರಾಜಕೀಯ

    ಖ್ಯಾತ ನಟ ಪ್ರಕಾಶ್ ರೈ:ಗುಜರಾತ್ ಫಲಿತಾಂಶದಿಂದ ನಿಜವಾಗಿಯೂ ಸಂತಸವಾಗಿದೆಯೇ?ಎಂದು ಮೋದಿಯವರಿಗೆ ಪ್ರಶ್ನೆನಿಸಿದ್ದಾರೆ ..!

    ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದಕ್ಕೆ ನಟ ಪ್ರಕಾಶ್ ರೈ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಫಲಿತಾಂಶದಿಂದ ನಿಮಗೆ ನಿಜವಾಗಿಯೂ ತೃಪ್ತಿಯಾಗಿದೆಯೇ ಎಂದೂ ಮೋದಿಯವರನ್ನು ಪ್ರಶ್ನಿಸಿದ್ದಾರೆ.

  • ಮನರಂಜನೆ

    ಪ್ರಿಯಾಂಕ, ಕುರಿ ಪ್ರತಾಪ್ ಗೆ ಈಗೆ ಮಾಡಿದಕ್ಕೆ. ಪ್ರತಾಪ್ ಪತ್ನಿ ಪ್ರಿಯಾಂಕಾಗೆ ಹೇಳಿದ್ದೇನು ಗೊತ್ತಾ.

    ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳು ಭೇಟಿ ನೀಡಿದರು. ಈ ವೇಳೆ ಪ್ರತಾಪ್ ಅವರ ಪತ್ನಿ ಸರಿತಾ ಸ್ಪರ್ಧಿ ಪ್ರಿಯಾಂಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಸರಿತಾ ಆಗಮಿಸಿದ್ದರು. ಈ ವೇಳೆ ಸರಿತಾ ಅವರು ಮನೆ ಮಂದಿ ಜೊತೆ ಆತ್ಮೀಯವಾಗಿ ಮಾತನಾಡಿಸಿ ತಾವು ತಂದಿದ್ದ ತಿಂಡಿಯನ್ನು ಪ್ರತಾಪ್ ಅವರಿಗೆ ನೀಡದೇ ವಾಸುಕಿ ಅವರಿಗೆ ಕೊಟ್ಟಿದ್ದಾರೆ. ಸರಿತಾ, ಪ್ರತಾಪ್ ಜೊತೆ ಮಾತನಾಡಿದ ಬಳಿಕ…

  • ವಿಚಿತ್ರ ಆದರೂ ಸತ್ಯ

    ಇಲ್ಲಿ ಮಕ್ಕಳು ಅಪ್ಪನನ್ನೇ ಮದುವೆ ಆಗ್ತಾರೆ…!ನಂಬೋದಕ್ಕೆ ಆಗೋಲ್ಲ,ಆದ್ರೂ ಸತ್ಯ…

    ಹಲವು ದೇಶಗಳಲ್ಲಿ ಹಲವು ರೀತಿಯ ಚಿತ್ರ ವಿಚಿತ್ರ ಪದ್ಧತಿ, ಸಂಪ್ರದಾಯಗಳು ಈಗಲೂ ರೂಢಿಯಲ್ಲಿವೆ. ಕೆಲವು ಸ್ಥಳಗಳಲ್ಲಿ ಅನಾದಿಕಾಲದಿಂದ ಬಂದ ಪದ್ಧತಿಗಳನ್ನು ಈಗಲೂ ಸಹ ಆಚರಿಸಿಕೊಂಡು ಬರಲಾಗ್ತಿದೆ. ನಮಗೆಲ್ಲಾ ಗೊತ್ತಿರುವಂತೆ ಹೆಣ್ಣು ಮಕ್ಕಳ ತಂದೆಯಾದವನಿಗೆ ಅವರಿಗೆ ಯೋಗ್ಯನಾದ ಗಂಡನ್ನು ಹುಡುಕಿ ಮದುವೆ ಮಾಡುವುದೇ ಅತೀ ದೊಡ್ಡ ಜವಾಬ್ದಾರಿಯಾಗಿರುತ್ತೆ.ಇದಕ್ಕಾಗಿ ತಂದೆಯಾದವನು ತುಂಬಾ ಕಷ್ಟಪಟ್ಟು ಮಗಳ ಮಾಡುವೆ ಮಾಡುತ್ತಾನೆ.ಆದ್ರೆ ಈ ಗ್ರಾಮದಲ್ಲಿ ಮಗಳಿಗೆ ವರನನ್ನು ಹುಡುಕಬೇಕಾಗಿಲ್ಲ. ಶಾಕಿಂಗ್ ವಿಷಯ ಅದರಲ್ಲೂ ವಿಚಿತ್ರ ಏನೆಂದರೆ ತಾನು ಸಾಕಿ ಸಲುಹಿದ ಮಗಳನ್ನು ತಂದೆಯೇ ಮದುವೆಯಾಗ್ತಾನೆ….

  • ಜ್ಯೋತಿಷ್ಯ

    ನಿಮ್ಮ ಮಂಗಳವಾರದ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ…

    ಮಂಗಳವಾರ, 27/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಆಗಾಗ ಮಾನಸಿಕ ಸ್ಥಿರತೆ ಇರದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ಹಾಗೆ ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯ ಒದಗುತ್ತದೆ. ಅತಿಯಾದ ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಷ್ಟವಾದರೂ ವ್ಯವಹಾರದಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ವೃಷಭ:- ಸಾಂಸಾರಿಕವಾಗಿ ಪತ್ನಿ ಹಾಗೂ ಮಕ್ಕಳಿಂದ ಸುಖ ಸಮಾಧಾನ ವಿರುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಗಳಿಕೆ ಅಧಿಕಗೊಂಡು ಉತ್ತಮ ಆದಾಯ. ಮಕ್ಕಳ ಆರೋಗ್ಯದ ಬಗ್ಗೆ…