ಸುದ್ದಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷದವರಿಂದ ಕುದುರೆ ವ್ಯಾಪಾರ: ಸಿಎಂ ಕಮಲ್‍ನಾಥ್ ಹೇಳಿಕೆ….!

27

ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್‍ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.


ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್ ನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ಪಕ್ಷ ತೊರೆಯಲು ಒಬ್ಬರಿಗೆ 50 ಕೋಟಿಯ ಆಫರ್ ನೀಡಲಾಗಿದೆ ಎಂದು ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿ ನಾಯಕರು ಯಾವೆಲ್ಲ ಆಫರ್ ನೀಡುತ್ತಿದ್ದಾರೆ ಎಂಬುವುದು ಗೊತ್ತಿಲ್ಲ ಎಂದರು. ಬಿಜೆಪಿ ಮಾತ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ವಾದವನ್ನು ಮಂಡಿಸುತ್ತಿದೆ.


2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 230 ಕ್ಷೇತ್ರಗಳ ಪೈಕಿ 114ರಲ್ಲಿ ಗೆಲುವಿನ ನಗೆ ಬೀರಿತ್ತು. ಬಿಜೆಪಿ 109, ಬಹುಜನ ಸಮಾಜ ಪಾರ್ಟಿ 2 ಮತ್ತು ಸಮಾಜವಾದಿ ಪಾರ್ಟಿ 1, ನಿರ್ದಲಿಯ ಪಕ್ಷ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಬಿಎಸ್‍ಪಿ ಬೆಂಬಲ ಪಡೆದ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ದೇವರು

    ಸಂಕ್ರಾಂತಿ ಯಾಕೆ ಮಾಡ್ತಾರೆ ಗೊತ್ತಾ? ಈ ದಿನ ಎಳ್ಳಿಗೆ ಯಾಕೆ ಇಷ್ಟು ಮಹತ್ವ.

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು…

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663953892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663953892 ಮೇಷ(27 ನವೆಂಬರ್, 2018) ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನುಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು…

  • Cinema

    ಇಷ್ಟೇನಾ ಕನ್ನಡ ಸೂಪರ್ ಸ್ಟಾರ್ ನಟರು ಓದಿರೋದು..!ಹಾಗಾದರೆ ಅವ್ರು ಓದು ನಿಲ್ಲಿಸಿದ್ದು ಏಕೆ?

    ನಮ್ಮ  ನೆಚ್ಚಿನ ಸ್ಟಾರ್ ನಟರು ಏನು ಓದಿದ್ದಾರೆ, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವು ಅಭಿಮಾನಿಗಳಿಗೆ ಇರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ನಟ ರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಈ ನಟರ ವಿದ್ಯಾಬ್ಯಾಸ ಹಾಗೂ ಅವರು ಓದು  ನಿಲ್ಲಿಸಲು ಕಾರಣವೇನು ಅಂತ ಇಲ್ಲಿದೆ ನೋಡಿ…. ಡಾ.ರಾಜ್ ಕುಮಾರ್..                 …

  • inspirational, ವ್ಯಕ್ತಿ ವಿಶೇಷಣ

    ವರದಕ್ಷಿಣೆ ವಿರೋಧಿಸಿ: ಈ ವರ ಮಾಡಿದ ಕೆಲಸ ನೋಡಿ ಆಶ್ಚರ್ಯಗೊಂಡ್ರು ಜನ..! ತಿಳಿಯಲು ಈ ಲೇಖನ ಓದಿ..

    ಮಧ್ಯಪ್ರದೇಶದ ನಿಮಚ್ ನಲ್ಲಿ ಅನನ್ಯ ಹಾಗೂ ಸಮಾಜಕ್ಕೆ ಮಾದರಿಯಾಗಬಲ್ಲಂತ ಮದುವೆಯೊಂದು ನಡೆದಿದೆ. ಮದುವೆಗಾಗಿ ಅಹಮದಾಬಾದ್ ನಿಂದ ಬಂದಿದ್ದ ವರ ಸಪ್ತಪದಿ ನಂತ್ರ 8ನೇ ಸುತ್ತು ಸುತ್ತಲು ಶುರುಮಾಡಿದ್ದಾನೆ. ಇದನ್ನು ನೋಡಿ ನೆರೆದಿದ್ದವರೆಲ್ಲ ಆಶ್ಚರ್ಯಕ್ಕೊಳಗಾಗಿದ್ದಾರೆ.

  • ರೆಸಿಪಿ

    ನಿಮ್ಮ ಮನೆಯಲ್ಲೇ ರುಚಿ ರುಚಿಯಾದ “ಪಾನಿ ಪುರಿ” ತಯಾರಿಸಿ…

    ಸಂಜೆ ಆದ್ರೂ ಸಾಕು, ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕೆಂದು ಎಲ್ಲಾ ರೀತಿಯ ವಯೋಮಾನದವರಿಗೆ ಇಷ್ಟವಾಗುತ್ತದೆ. ಆದ್ರೆ ಹೆಚ್ಚಾಗಿ ತಳ್ಳು ಗಾಡಿಯಲ್ಲಿ ಸಿಗುವ ಪಾನಿ ಪುರಿಯನ್ನು ತಿನ್ನಲು ಕೆಲವರು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ.ಯಾಕೆಂದ್ರೆ ತಳ್ಳು ಗಾಡಿಯಲ್ಲಿನ ಸ್ವಚ್ಚತೆ ಕುರಿತು ಕೆಲವರಿಗೂ ಅನುಮಾನ. ಆದ್ರೂ ತಿನ್ನದೇ ಸುಮ್ಮನೆ ಇರಲಿಕ್ಕೆ ಆಗೋದಿಲ್ಲ.

  • ದೇವರು-ಧರ್ಮ

    ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ!ಈ ಆಚರಣೆ ಮಾಡಿದ್ರೆ ಏನಾಗುತ್ತೆ ಗೊತ್ತಾ..?

    ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.