ಸುದ್ದಿ

ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ವಾಹನ ಹರಿದು ನಾಲ್ಕು ಜನರ ಸಾವು…!

49

ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್‍ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಎಚ್ ಸಚಿನ್, ಆತನ ಗೆಳೆಯರಾದ ಕಾಶಿನಾಥ್, ಗುರುನಾಥ್ ಮತ್ತು ರಘುವೀರ್ ಮೃತಪಟ್ಟವರು. ಇವರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕರು ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಇವರ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ ಮಾದರಿಯಾದ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

    ಚುನಾಯಿತರಾದ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ಎಷ್ಟರ ಮಟ್ಟಿಗೆ ಭೇಟಿ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ ಇಲ್ಲೊಬ್ಬರು ಶಾಸಕರಿದ್ದಾರೆ.. ತಮ್ಮ ಕ್ಷೇತ್ರದ ಜನರ ಜೊತೆ ಸಾಮಾನ್ಯ ಜನರಂತೆ ಬೆರೆತು ಕ್ಷೇತ್ರದ ಹಾಗು ಹೋಗುಗಳ ಬಗ್ಗೆ ಸ್ವತಃ ತಾವೇ ಖುದ್ದಾಗಿ ವಿಚಾರಿಸುತ್ತಿರುತ್ತಾರೆ.. ಹೌದು ಇವರು ಮತ್ಯಾರು ಅಲ್ಲ ಅಭಿವೃದ್ಧಿ ಹೊಂದಿದ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು.. ಈಗಾಗಲೇ ಪ್ರತಿಭೆಗಳಿಗಾಗಿ ತಮ್ಮ ಕ್ಷೇತ್ರದಲ್ಲಿ ಮಾಡಿಕೊಟ್ಟಿರುವ ಅನುಕೂಲಗಳು ಲೆಕ್ಕವಿಲ್ಲ.. ಶಾಸಕರ ಅನುದಾನ…

  • ಸುದ್ದಿ

    ತನ್ನ ಬಾಡಿಗಾರ್ಡ್ ಆಗಿದ್ದವಳನ್ನೇ ಮದ್ವೆ ಆಗಿ ರಾಣಿಯನ್ನಾಗಿ ಮಾಡಿದ ರಾಜ.!?

    ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. 66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು,…

  • ಸುದ್ದಿ

    ಈ ಎರಡು 2 ಆ್ಯಪ್ ನಿಮ್ಮಲ್ಲಿದ್ದರೆ ಸಾಕು, ದುಬಾರಿ ದಂಡದಿಂದ ಬಚಾವ್ ಆಗಬಹುದು,.! ಇಲ್ಲಿದೆ ನೋಡಿ ಮಾಹಿತಿ!

    ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್‌ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್‌ನಿಂದ ಬಚಾವ್ ಆಗಬಹುದು. ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ  ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ…

  • ಸುದ್ದಿ

    ನೀವು ನಿದ್ದೆ ಮಾಡುವಾಗ ಎಡಗೈ ಮೇಲೆ ಮಲಗುತ್ತೀರಾ ಹಾಗಾದರೆ ಇದನ್ನೊಮ್ಮೆ ತಪ್ಪದೆ ಓದಿ,.!

    ನಾವು ಮಧ್ಯಾಹ್ನ ಅಥವಾ ರಾತ್ರಿ  ಮಲಗುವಾಗ ನಮ್ಮ ಕೈ ಮೇಲೆ ತಲೆನ ಹಾಕಿಕೊಂಡು ಮಲಗುತ್ತೇವೆ ಅದು ನಿಮಗೂ ಗೊತ್ತು, ನಿದ್ದೆ ಮನುಷ್ಯನಿಗೆ ವರದಾನವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ನಿದ್ರೆ ಕಡೆ ಗಮನ ಕೊಡುತ್ತಿಲ್ಲ ತುಂಬಾ ಕೆಲಸದ ಕಡೆ ಗಮನ ಕೊಡುತ್ತಿದ್ದಾರೆ ಇದರಿಂದ ನಮ್ಮ  ಆರೋಗ್ಯದ  ಮೇಲೆ ತುಂಬಾನೇ  ಪರಿಣಾಮ ಬೀರುತ್ತದೆ. ಇದರಿಂದ  ರಾತ್ರಿ ಮಲಗುವ  ನಿದ್ದೆ  ಸಾಕಾಗುವುದಿಲ್ಲ ಹಾಗಾಗಿ  ಮಧ್ಯಾಹ್ನವೂ ಕೂಡ ಮಲಗುತ್ತಾರೆ,  ಮತ್ತು  ಹೆಚ್ಚಾಗಿ ನಿದ್ರೆ ಮಾಡುವವರನ್ನು ಸೋಂಬೇರಿಗಳು ಅಂತಾನೂ  ಕರೆಯುತ್ತಾರೆ….

  • ಜ್ಯೋತಿಷ್ಯ

    ಯುಗಾದಿ ಅಮಾವಾಸ್ಯಯ ಈ ದಿನದಂದು ಈ ರಾಶಿಗಳಿಗೆ ಶುಭಯೋಗ…ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಏಪ್ರಿಲ್, 2019) ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ರಸ ಹೀರಬಹುದು ಮತ್ತು ನಿಮ್ಮನ್ನು…