ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಮಗನ ಕನಸನ್ನು ನನಸು ಮಾಡಿದ ತಂದೆ…
ಅಜಯ್ ಬಾರೋಟ್ ಸಣ್ಣ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು.

ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ ಗುಜರಾತ್ ಸಂಪ್ರದಾಯದಂತೆ ಇದೀಗ ಅಜಯ್ ಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.
ಮಗನ ಮದುವೆಯ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಜಯ್ ತಂದೆ, ನನ್ನ ಮಗ ಅಂಗವೈಕಲ್ಯನಾಗಿದ್ದು, ಚಿಕ್ಕಂದಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ. ಈತ ಕೆಲವು ಮದುವೆಗಳಿಗೆ ತೆರಳಿ ಮೆರವಣಿಗೆಯಲ್ಲಿ ಭಾಗವಹಿಸಿ ಸಂತಸ ಪಡುತ್ತಿದ್ದನು. ಅಲ್ಲದೆ ತನ್ನ ಮದುವೆಯ ಬಗ್ಗೆಯೂ ನನ್ನಲ್ಲಿ ವಿಚಾರಿಸುತ್ತಿದ್ದನು. ಆದರೆ ಆತನ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿರಲಿಲ್ಲ.
ಯಾಕಂದರೆ ಆತನಿಗೆ ತಕ್ಕುದಾದ ಸಂಗಾತಿಯನ್ನು ಹುಡುಕಲು ನಮ್ಮಿಂದ ಸಾಧ್ಯವಿಲ್ಲ ಎಂಬುದು ತಿಳಿದಿತ್ತು. ಹೀಗಾಗಿ ನಾನು ನನ್ನ ಕುಟುಂಬಸ್ಥರ ಜೊತೆ ಮಗನ ಮದುವೆಯ ಬಗ್ಗೆ ಮಾತುಕತೆ ನಡೆಸಿದೆ. ಈ ವೇಳೆ ವಧುವಿಲ್ಲದೆ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವುದಾಗಿ ತೀರ್ಮಾನಿಸಿದೆವು. ಈ ಮೂಲಕ ಆತನ ಕನಸನ್ನು ನನಸು ಮಾಡುವ ನಿರ್ಧಾರಕ್ಕೆ ಬಂದೆವು.

ಇದೇ ವೇಳೆ ಅಜಯ್ ಚಿಕ್ಕಪ್ಪ ಮಾತನಾಡಿ, ಮ್ಯೂಸಿಕ್ ಕೇಳಿ ಡ್ಯಾನ್ಸ್ ಮಾಡುವುದು ಅಂದರೆ ಅಜಯ್ ಗೆ ತುಂಬಾ ಇಷ್ಟ. ಇದರಿಂದ ಆತನ ಮುಖದಲ್ಲಿ ನಗು ನೋಡುತ್ತೇವೆ. ನಮ್ಮ ಗ್ರಾಮದಲ್ಲಿ ಯಾರೇ ಮದುವೆಯಾದ್ರೂ ಆ ಕಾರ್ಯಕ್ರಮಕ್ಕೆ ಅಜಯ್ ಯಾವುದೇ ಕಾರಣಕ್ಕೂ ಗೈರಾಗುತ್ತಿರಲಿಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ನನ್ನ ಮಗನ ವದುವೆ ಇತ್ತು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜಯ್, ತನ್ನ ಮದುವೆಯ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದನು. ಸದ್ಯ ನನ್ನ ಅಣ್ಣ(ಅಜಯ್ ತಂದೆ) ಮಗನ ಆಸೆಯಂತೆ ಇದೀಗ ಆತನಿಗೆ ಮದುವೆ ಮಾಡಿಸಿದ್ದಾರೆ. ನಾವು ಕೂಡ ಇತರ ಮದುವೆಯಂತೆ ಮೆರವಣಿಗೆಯ ಮೂಲಕ ಅದ್ಧೂರಿಯಾಗಿಯೇ ಕಾರ್ಯಕ್ರಮವನ್ನು ಭಾಗಿಯಾಗಿದ್ದೇವೆ. ಆದರೆ ಇಲ್ಲಿ ವಧು ಮಾತ್ರ ಇರಲಿಲ್ಲ ಅಷ್ಟೆ ಅಂದರು.

ಮದುವೆ ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಮಾಡಿ ಸಂಬಂಧಿಕರಿಗೆ ನೀಡಿದ್ದೇವೆ. ಗುಜರಾತಿನ ಸಂಪ್ರದಾಯದಂತೆ ಪುರೋಹಿತರ ಮೂಲಕವೇ ಕಾರ್ಯಕ್ರಮ ನೆರವೇರಿದೆ. ಒಟ್ಟಿನಲ್ಲಿ ಇಲ್ಲಿ ಮಗನ ಸಂತಸವೇ ನಮಗೆ ಮುಖ್ಯವಾಗಿದೆ. ಆತನ ನಗು ಮುಖಕ್ಕಿಂತ ನಮಗೆ ಯಾವುದು ಮುಖ್ಯವಾಗಿರಲಿಲ್ಲ ಎಂದು ಅಜಯ್ ಅಂಕಲ್ ತಿಳಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
OneADನಿಮಗೆ ಎರಡು ಪ್ರಯೋಜನವನ್ನು ನೀಡುತ್ತದೆ – ಹಣ ಸಂಪಾದಿಸಿ ಮತ್ತು ಉಳಿತಾಯ ಮಾಡಿ.!ನಿಮ್ಮ ಸ್ನೇಹಿತರಿಗೆ ಅಪ್ಲಿಕೇಶನ್ ಅನ್ನು ಉಲ್ಲೇಖಿಸಿ ನೀವು ಹಣವನ್ನು ಮಾಡಬಹುದು.
ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…
ಬೆಂಗಳೂರು ನಗರದಲ್ಲಿ ನಡೆದ ಭಾರೀ ಸೈಬರ್ ವಂಚನೆ ಪ್ರಕರಣವೊಂದು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ನಿವೃತ್ತ ಶಿಕ್ಷಕಿಯಾಗಿದ್ದ 74 ವರ್ಷದ ವೃದ್ಧೆಯೊಬ್ಬರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದ ಸುಮಾರು ₹24 ಕೋಟಿ ರೂಪಾಯಿಯನ್ನು “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಸೈಬರ್ ಖದೀಮರು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಕರ್ನಾಟಕದ ಅತಿದೊಡ್ಡ “ಡಿಜಿಟಲ್ ಅರೆಸ್ಟ್” ವಂಚನೆ ಪ್ರಕರಣಗಳಲ್ಲಿ ಒಂದೆಂದು ಪೊಲೀಸರು ಹೇಳುತ್ತಿದ್ದಾರೆ. ವಂಚಕರು ತಮ್ಮನ್ನು CBI, ED ಮತ್ತು ಇತರೆ ಕೇಂದ್ರ ತನಿಖಾ ಸಂಸ್ಥೆಗಳ…
ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖವಾದ ಅಂಗ ಎಂದರೆ ಅದು ಮೆದುಳು. ಮೆದುಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಆತ ಬುದ್ಧಿವಂತನಾಗುತ್ತಾನೆ, ಅಥವಾ ಆತ ಮಾನಸಿಕವಾಗಿ ಸ್ವಸ್ಥನಾಗಿದ್ದಾನೆ ಎಂದು ಹೇಳಬಹುದು. ಹಾಗಾದ್ರೆ ನಮ್ಮ ಮೆದುಳಿಗೆ ತೊಂದರೆ ಉಂಟು ಮಾಡುವ ಹತ್ತು ಹವ್ಯಾಸಗಳನ್ನು ತಿಳಿಯೋಣ..
ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.