ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಳಿಕ ಸೆರೆಯಾದರೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯಲ್ಲದೆ ಇದರ ಜೊತೆಗೆ ಕತ್ತಿಗೆ ಬಿಜೆಪಿ ಚಿನ್ಹೆಯುಳ್ಳ ವಸ್ತ್ರವನ್ನು ಹಾಕಿರುವ ಅಭಿನಂದನ್ ರನ್ನೇ ಹೋಲುವ ಫೋಟೋ ಒಂದನ್ನು ಹಾಕಲಾಗಿದೆ.

ವೈರಲ್ ಆದ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿರುವ ಸುದ್ದಿ ಸಂಸ್ಥೆಯೊಂದು ಇದು ಫೇಕ್ ಎಂದು ಹೇಳಿದೆ. ಫೋಟೋವನ್ನು ಬಹು ಸೂಕ್ಷ್ಮವಾಗಿ ಪರಿಶೀಲಿಸಿರುವ ಸುದ್ದಿಸಂಸ್ಥೆ, ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿ ಈತ ಎಂದು ತಿಳಿಸಿದ್ದು, ಮುಖದಲ್ಲಿನ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರಿಸಬಾರದೆಂಬ ಕಾರಣಕ್ಕೆ ಆತನಿಗೆ ದೊಡ್ಡದಾದ ಕನ್ನಡಕವನ್ನು ಹಾಕಿಸಲಾಗಿದೆ ಎಂದು ಹೇಳಿದೆ.

ಅಲ್ಲದೆ ಅಭಿನಂದನ್ ತಮಿಳುನಾಡು ಮೂಲದವರಾಗಿದ್ದು, ಅವರ ಮತ ಅಲ್ಲಿಯೇ ಇರುವ ಸಾಧ್ಯತೆ ಇದೆ. ಜೊತೆಗೆ ತಮಿಳುನಾಡಿನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿ.

ಸೇವಾ ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯ ಫೋಟೋ ಹಾಕಿ ಆತನನ್ನೇ ವಿಂಗ್ ಕಮಾಂಡರ್ ಅಭಿನಂದನ್ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಮಂಗಳವಾರ, 27/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸಲು, ವಿಶೇಷ ಸ್ಥಾನಮಾನ ನೀಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಮಂಗಳಮುಖಿಯರಿಗೆ ಹೊಟೇಲ್, ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸ ನೀಡಲಾಗಿದ್ದು, ತಮಗೆ ದೊರೆತ ಕೆಲಸವನ್ನು ಮಂಗಳಮುಖಿಯರು ಕೂಡಾ ನಿಷ್ಠೆಯಿಂದ ಮಾಡುತ್ತಿದ್ದಾರೆ. ಇನ್ನು ಎಷ್ಟೋ ಕಡೆಗಳಲ್ಲಿ ಮಂಗಳಮುಖಿಯರು ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಸರ್ಕಾರದಿಂದ ನೆರವು ದೊರೆಯದೆ ಮಂಗಳಮುಖಿಯರು ಕೂಡಾ ಬೇಸರಗೊಂಡಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂತವರ ಸಹಾಯಕ್ಕೆ ಮುಂದಾಗಿದ್ದಾರೆ. ಮಂಗಳಮುಖಿಯರಿಗೆ ನೆಲೆ…
ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್ಗಳಿವೆ. ಚೆಫ್ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.
ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು
ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…
ಪ್ರಸ್ತುತ ನಾವೆಲ್ಲರೂ ಇರುವುದು ಕಲಿಯುಗದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಯುಗದಲ್ಲೇ ಯುಗಾಂತ್ಯವಾಗುತ್ತದೆ ಎಂದು ಪುರಾಣಗಳು ಹೇಳುತ್ತಿವೆ. ಕಲಿಯುಗದಲ್ಲಿ ಮನುಷ್ಯರು ಉನ್ನತ ಸ್ಥಾನಕ್ಕೆ ಸೇರಿಕೊಳ್ಳಲು ವಿಧವಿಧವಾಗಿ ಪ್ರಯತ್ನಿಸುತ್ತಾರೆಂದು, ಅಗತ್ಯ ಬಿದ್ದರೆ ಅಡ್ಡದಾರಿ ಸಹ ತುಳಿಯುತ್ತಾರೆ, ವಯಸ್ಸು, ಎತ್ತರ, ಬಲ, ಜ್ಞಾನ, ಆಕರ್ಷಣೆಯಂತಹವು ಬರುಬರುತ್ತಾ ಕಲಿಯುಗದಲ್ಲಿ ಕಡಿಮೆಯಾಗುತ್ತವೆ ಎಂದು ಪುರಾಣಗಳು ಹೇಳುತ್ತಿವೆ. ಅವೆಲ್ಲಾ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ.