ರಾಜಕೀಯ, ಸುದ್ದಿ

ಪ್ರಧಾನಿ ಮೋದಿ ಕುರಿತು, ನಿಮ್ಗೆ ಸೌಟ್‍ನಿಂದ ಹೊಡಿಬೇಕಾ?ಗ್ಯಾಸ್‍ನಿಂದ ಹೊಡಿಬೇಕಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ..!

71

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಖಂಡಿಸುವ ಬರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೋದಿಯವರೇ ನಿಮಗೆ ಸೌಟ್‍ನಿಂದ ಹೊಡಿಬೇಕಾ? ಅಥವಾ ಗ್ಯಾಸ್‍ನಿಂದ ಹೊಡಿಬೇಕಾ? ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ? ಗ್ಯಾಸ್ ಬೆಲೆ ಏರಿಕೆಯಾಯಿತು. ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಅವರ ವೈಫಲ್ಯದ ಬಗ್ಗೆ ಮಾತನಾಡಿದವರು ದೇಶದ್ರೋಹಿಗಳಾಗುತ್ತಾರೆ. ಮೋದಿ ಅವರು 2014ರಲ್ಲಿ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದರು. ವಿದೇಶದಲ್ಲಿ ಇರುವ ಕಪ್ಪು ಹಣವನ್ನು ತರುವುದಾಗಿ ಹೇಳಿದ್ದರು. ಇಂತಹ ಅನೇಕ ಭರವಸೆಗಳನ್ನು ಮೋದಿ ಅವರು ಮರೆತಿದ್ದಾರೆ. ಚುನಾವಣೆ ಬಳಿಕ ಬಿಎಸ್‍ಎನ್‍ಎಲ್ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಇದರಿಂದ ಅನೇಕರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಜಿಯೋ ಕಂಪನಿಯ ರಾಯಬಾರಿಯಾಗಿದ್ದಾರೆ. ನಾನೇ ಅಂತರ್ಜಾಲದಲ್ಲಿ ಕ್ರಾಂತಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೂ ಮೊದಲೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು, ದೂರವಾಣಿ ಸಂಪರ್ಕದಲ್ಲಿ ಕ್ರಾಂತಿ ಮಾಡಿದ್ದರು. ಎಲ್ಲವನ್ನೂ ನಾನೇ ಮಾಡಿದೆ ಅಂತ ಹೇಳುವುದು ಸರಿಯಲ್ಲ ಎಂದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ವಿಜ್ಞಾನ

    ವ್ಯಾಸ ಮಹರ್ಷಿಗಳು ಆ ಕಾಲದಲ್ಲೇ ಹೇಳಿದ್ದನ್ನು, ಕಂಡುಹಿಡಿಯುತ್ತಿರುವ ವಿಜ್ಞಾನಿಗಳು..!ನಿಜ..!ತಿಳಿಯಲು ಈ ಲೇಖನ ಓದಿ…

    ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(13 ಫೆಬ್ರವರಿ, 2019) ದಿನದ ಉತ್ತರಾರ್ಧದಲ್ಲಿ ಅತ್ಯಾಕರ್ಷಕ ಮತ್ತು ಮನರಂಜನೆಯ ಏನನ್ನಾದರೂ ಹೊಂದಿಸಿ. ಪ್ರಣಯ ಮತ್ತು…

  • Health

    ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…?

    ಪಪ್ಪಾಯಿ ಹಣ್ಣಿನಲ್ಲಿ ಬರೀ ಪೋಷಕಾಂಶಗಳು ಮಾತ್ರವಲ್ಲ, ವ್ಯಾಧಿ ನಿಯಂತ್ರಿಸುವ ಶಕ್ತಿಯು ಅಡಗಿದೆ. ಮುಖ್ಯವಾಗಿ ಇದರಲ್ಲಿರುವ ಜಿಯೋ ಕ್ಯಾಂಟೀನ್ ಎಂಬ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯದ ಕಾಯಿಲೆಗಳು ಕಾಡದಂತೆ, ಆಸ್ತಮ ವ್ಯಾಧಿ ತಗುಲದಂತೆ ನೋಡಿಕೊಳ್ಳುತ್ತದೆ. ಅದರ ಜೊತೆಗೆ * ಪಪ್ಪಾಯದಲ್ಲಿನ ಬೀಟಾ ಕೆರೋಟಿನ್ ಕಾರಣದಿಂದ ಹೆಚ್ಚು ಪಪ್ಪಾಯಿ ತಿನ್ನುವವರಲ್ಲಿ ಕ್ಯಾನ್ಸರ್ ರೋಗ ಬರುವುದಿಲ್ಲ. ಪುರುಷರಲ್ಲಿನ ಪ್ರಾಸ್ಟೇಟ್ ಕ್ಯಾನ್ಸರ್ ತೊಂದರೆಯನ್ನು ಪಪ್ಪಾಯಿ ನಿಯಂತ್ರಿಸುತ್ತದೆ. * ಎಲುಬಿನ ಆರೋಗ್ಯಕ್ಕೆ ಅಗತ್ಯದ ವಿಟಮಿನ್ ಕೆ ಕೂಡ ಇದರಲ್ಲಿ ಹೆಚ್ಚಿದೆ. * ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆ…

  • ಸುದ್ದಿ

    ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರಿಗೊಂದು ಬಿಗ್ ಶಾಕ್, ಇಷ್ಟಕ್ಕೂ ಏನದು, ಇದನ್ನೊಮ್ಮೆ ಓದಿ ..!

    ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ. 2019ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗಿರುವ ದಂಡ ವನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲಾಗಿದೆ. ಸೆಪ್ಟೆಂಬರ್ 1ರಿಂದ ಪರಿಷ್ಕøತ ದಂಡದ ಪ್ರಮಾಣ ಅನುಷ್ಠಾನಕ್ಕೆ ಬರಲಿದೆ. ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ತಂದು ವಿವಿಧ ಸಂಚಾರಿ ನಿಯಮ ಗಳಿಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಅಪರಾಧಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 100 ನಿಂದ…

  • ಸುದ್ದಿ

    ಬಿಹಾರ ರೈತರ ನಿದ್ದೆಗೆಡಿಸಿದ ಬಾನುಗಲ್ಲು….! ಕಾರಣ ಏನು?

    ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. “ರೈತರು…

  • ವಿಸ್ಮಯ ಜಗತ್ತು

    ಭಕ್ತನೊಬ್ಬ ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಪತ್ರವೊಂದನ್ನು ಬರೆದಿದ್ದಾನೆ..!ಆ ಪತ್ರದಲ್ಲಿ ಏನಿತ್ತು ಗೊತ್ತಾ..?

    ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದ ಭಕ್ತನೊಬ್ಬ ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ…