ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಡೆಲ್ ಮತ್ತು ನಟಿ ಆಮಿ ಜಾಕ್ಸನ್ ಅವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿರುವ ‘ದಿ ವಿಲನ್’ ಚಿತ್ರದ ನಾಯಕಿ ಆಮಿ ಜಾಕ್ಸನ್ ಈ ವಿಚಾರ ಬಹಿರಂಗಗೊಳಿಸುತ್ತಿದ್ದಂತೆಯೇ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ.
ಆದರೆ, ಮದುವೆಯ ಮೊದಲೇ ಆಕೆ ಗರ್ಭಿಣಿಯಾಗಿರುವುದು ಅಭಿಮಾನಿಗಳ ತಲೆ ಸುತ್ತುವಂತೆ ಮಾಡಿದೆ.ನಟಿ ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.ತಾಯಂದಿರ ದಿನವೇ ಗರ್ಭಿಣಿಯಾಗಿರುವುದು ನನಗೆ ತಿಳಿಯಿತು. ಶೀಘ್ರವೇ ನಮ್ಮ ಮಗುವಿನೊಂದಿಗೆ ನಿಮ್ಮ ಎದುರು ಕಾಣಿಸಿಕೊಳ್ಳುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಂದ ಹಾಗೆ, ಆಮಿ ಜಾಕ್ಸನ್ ಮದುವೆಗೆ ಮೊದಲೇ ಗರ್ಭಿಣಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಲಿವುಡ್ ಮೂಲದ ನಟಿ ಅಮಿ ಜಾಕ್ಸನ್ ಭಾರತದಲ್ಲಿ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ‘ದಿ ವಿಲನ್’ ತಮಿಳಿನ ‘ಐ’, ‘2.0’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಆಮಿ 2019 ಜನವರಿ 1 ರಂದು ತಮ್ಮ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಇದೀಗ ತಾವು ಗರ್ಭಿಣಿ ಎಂದು ಹೇಳಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಜೋಡಿ 2020ಕ್ಕೆ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆದರೆ, ದಿಢೀರ್ ಆಗಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದೃಷ್ಟ ಎನ್ನುವಂತೆ ತಾಯಂದಿರ ದಿನವೇ ನಾನು ಗರ್ಭಿಣಿಯಾಗಿರುವುದು ನನಗೆ ತಿಳಿದು ಬಂದಿದೆ. ಆದಷ್ಟು ಬೇಗ ನಮ್ಮ ಬೇಬಿಯೊಂದಿಗೆ ನಿಮ್ಮ ಎದುರು ಬರುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಕಣ್ಣ ಮುಂದಯೇ ಅನೇಕ ಚಿಕ್ಕ ಪುಟ್ಟ ವಿಷಯಗಳು ನಡೆಯುತ್ತಿರುತ್ತವೆ.ಅವನ್ನು ನೋಡಿಯೂ ನೋಡದಂತಯೂ ಇರುತ್ತೇವೆ.ಒಂದು ವೇಳೆ ಗಮನಿಸಿದರೂ ಸಹ ಅದರ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ.ಏಕೆ ಹೀಗೆ ಮಾಡುತ್ತಾರೆ ಎನ್ನುವ ಕಾರಣ ಗೊತ್ತಿಲ್ಲದಿದ್ರೂ ತಿಳಿದುಕೊಳ್ಳುವ ಯಾವುದೇ ಆಲೋಚನೆ ನಮ್ಮಲ್ಲಿ ಬರುವುದೇ ಇಲ್ಲ. ಇಂತಹ ಅನೇಕ ಚಿಕ್ಕ ಪುಟ್ಟ ವಿಷಯಗಳಲ್ಲಿ ಸತ್ತ ದೇಹದ ಮೂಗಿಗೆ ಮತ್ತು ಕಿವಿಗೆ ಹತ್ತಿ ಇಡುವುದು.ಹೌದು ಹಿಂದೂ ಧರ್ಮದಲ್ಲಿ ಮನುಷ್ಯ ತೀರಿಕೊಂಡ ನಂತರ ಮೃತದೇಹದ ಕಿವಿ ಮತ್ತು ಮೂಗಿಗೆ ಹತ್ತಿ ಇಡುತ್ತಾರೆ. ಇದನ್ನು…
ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ…
ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜುಲೈ 1 ರೊಳಗೆ ಜಿಎಸ್ಟಿ ಹೊರತರಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಧರಿಸಿವೆ. ಹಾಗಾದರೆ GST ಎಂದರೇನು? …
ಶ್ರೀಕೃಷ್ಣನು ಸ್ವರ್ಗದಿಂದ ತಂದ ಪಾರಿಜಾತ ವೃಕ್ಷದ ಬಗ್ಗೆ ತಿಳಿಯದವರು ಇಲ್ಲವೆಂದರೆ ಸುಳ್ಳಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಗೊತ್ತು ಶ್ರೀಕೃಷ್ಣ ಪಾರಿಜಾತ ವೃಕ್ಷದ ಬಗ್ಗೆ ಪಾರಿಜಾತ ವೃಕ್ಷ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಶ್ರೀಕೃಷ್ಣ ಹಾಗೂ ಸತ್ಯಭಾಮೆ. ಪಾರಿಜಾತ ವೃಕ್ಷವನ್ನು ಸ್ವರ್ಗದಿಂದ ಸತ್ಯಭಾಮೆಗಾಗಿ ಶ್ರೀಕೃಷ್ಣನು ತಂದಿದ್ದಾನೆ ಎನ್ನುವ ವೃತ್ತಾಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇನ್ನೂ ಹೀಗೆ ಬೋಕರಿಸಲ್ಪಟ್ಟ ಪಾರಿಜಾತ ವೃಕ್ಷ ಮತ್ತೆಲ್ಲೂ ಇಲ್ಲ. ಅದು ನಮ್ಮ ಭಾರತ ದೇಶದಲ್ಲಿಯೇ ಇದೆ. ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ತನ್ನ ಪ್ರಿಯಸಖಿಯಾದ ಸತ್ಯಭಾಮೆಗೆ ಬೋಕರಿಸಬೇಕೆಂದ್ದಿದ…
ಚೀನಾ ಹ್ಯಾಂಡ್ಸೆಟ್ ತಯಾರಿಕಾ ಕಂಪನಿ ಒಪೋ ತನ್ನ ಹೊಸ ಸ್ಮಾರ್ಟ್ಫೋನ್ ಗೆ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಇದಕ್ಕಾಗಿ ತನ್ನ ಪಾಲುದಾರ ಕಂಪನಿ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿದೆ.
ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್ಟಾಕ್ ಆ್ಯಪ್ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್ಟಾಕ್ ಕ್ರೇಜ್ಗೆ ಬಲಿಯಾಗಿದ್ದಾಳೆ. ಮಾಲಾಗೆ ವಿಪರೀತ ಟಿಕ್ಟಾಕ್ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್ಟಾಕ್ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್ಟಾಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ…