ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ.
ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು.

ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ದೇವೇಗೌಡರ ಹಾದಿ ಸುಗಮವಾದಂತಾಗಿದೆ.

ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನವಾಗಿದ್ದ ಕಾರಣ ಮುದ್ದಹನುಮೇಗೌಡರನ್ನು ಭೇಟಿಯಾದ ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್, ಮನವೊಲಿಕೆ ಬಳಿಕ ಮುದ್ದಹನುಮೇಗೌಡರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಹೈಕಮಾಂಡ್ ಮಾತಿಗೆ ಮುದ್ದಹನುಮೇಗೌಡ ಮನ್ನಣೆ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮುದ್ದಹನುಮೇಗೌಡರು, ತಮ್ಮೊಂದಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರು ಕೂಡಾ ಮಾತನಾಡಿದ್ದು, ಜೊತೆಗೆ ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್ ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ ಈ ಎಲ್ಲ ವಿಷಯಗಳನ್ನು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಆ ಬಳಿಕ ನಾಮಪತ್ರ ಹಿಂಪಡೆಯುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬಹುತೇಕ ಮುದ್ದಹನುಮೇಗೌಡರು ತಮ್ಮ ನಾಮಪತ್ರ ಹಿಂಪಡೆಯುವುದು ಖಚಿತವೆನ್ನಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಇದೀಗ ಈ ಪ್ರಕರಣಕ್ಕೆ ರಾಜಕೀಯ ಪ್ರವೇಶ ಕೂಡ ಆಗಿದೆ. ನಟ ಅರ್ಜುನ್ ಸರ್ಜಾ ಪೋಲಿಸ್ ವಿಚಾರಣೆ ವೇಳೆ ಬಿಜೆಪಿಯ ತೇಜಸ್ವಿನಿ ರಮೇಶ್ ಕೂಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ತಂದೆಯವರು ಮೂಲತಃ ಆರ್ಎಸ್ಎಸ್ ನವರಾಗಿದ್ದು ಎಡಪಂಥಿಯರು ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್…
ಕೆಜಿಎಫ್ ಪರಭಾಷೆಗಳಿಗೆ ಡಬ್ ಆಗಿ ಧೂಳು ಎಬ್ಬಿಸಿದ ಬೆನ್ನಲ್ಲೇ ಇತ್ತ ಬೇರೆ ಭಾಷೆಯ ಚಲನ ಚಿತ್ರಗಳು ಸಹ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿವೆ. ಇಷ್ಟು ದಿನ ಬೇರೆ ಭಾಷೆಯ ಚಲನ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಲು ಭಾರಿ ವಿರೋಧ ವಿತ್ತು. ಡಬ್ ವಿಷಯವನ್ನು ಮಾತನಾಡುವಂತೂ ಇರಲಿಲ್ಲ. ಅದರಲ್ಲೂ ಕನ್ನಡ ಚಲನಚಿತ್ರ ಮಂಡಲಿಯಂತೂ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಕಾರಣ ಕನ್ನಡ ಚಲನಚಿತ್ರ ರಂಗವು ಮೊದಲೇ ಮಾರ್ಕೆಟಿಂಗ್ ವಿಚಾರದಲ್ಲಿ ಹಿಂದೆ ಇರುವುದರಿಂದ ಪರಭಾಷಾ ಚಿತ್ರಗಳು ಡಬ್ ಆದರೆ…
ಸಿಲಿಕಾನ್ ಸಿಟಿ ಜನರಿಗೆ ಇಂದು ಸಂಚಾರ ದಟ್ಟಣೆ ಬಿಸಿ ತಟ್ಟಲಿದೆ. ನೆರೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಜೆಡಿಎಸ್ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೂಡಲೇ ನೆರೆ ಪರಿಹಾರ ಹಣ ಬಿಡುಗಡೆಗೆ ಅಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ ಅವರು ಹೇಳಿದ್ದು, ಇವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯು ಸಂಗೊಳ್ಳಿ…
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
ಮುಖದ ಸೌಂದರ್ಯಕ್ಕೆ ವಿವಿಧ ರೀತಿಯ ಮಾಸ್ಕ್ ಗಳು ಹಾಕುವುದು ತಿಳಿದ ಸಂಗತಿ. ಅದರ ಜೊತೆಗೆ ಚಾರ್ ಕೋಲ್ ಫೇಸ್ ಮಾಸ್ಕ್ ಕೂಡ ಎಲ್ಲರ ಬ್ಯೂಟಿ ಪ್ರಾಡಕ್ಟ್ ಲಿಸ್ಟ್ ನಲ್ಲಿ ಇವೆ. ಈ ಮಾಸ್ಕ್ ಒಳ್ಳೆಯದೇ ಆದರೂ, ಕೆಲವು ಜಾಗ್ರತೆ ವಹಿಸಿದರೆ ಸುಂದರ ತ್ವಚೆಯನ್ನು ಪಡೆಯಬಹುದು. ಚಾರ್ ಕೋಲ್ ಮಾಸ್ಕ್ ನಿಂದ ಮುಖದ ಮೇಲಿರುವ ಮೊಡವೆ, ಮಚ್ಚೆಗಳು, ಬ್ಲ್ಯಾಕ್ ಹೆಡ್ಸ್, ಬ್ಯಾಕ್ಟೀರಿಯಾ ಅಂತಹ ಸಮಸ್ಯೆಗಳು ತೊಲಗುತ್ತವೆ. ಚಾರ್ ಕೋಲ್ ಮಾಮೂಲಿ ಇದ್ದಿಲು ಅಲ್ಲ. ಇದನ್ನು ಕೊಬ್ಬರಿ ಚಿಪ್ಪು ಇದ್ದಿಲನ್ನು…
ಸಿನಿ ಲೋಕದಲ್ಲಿ ನೋಡಲು ಸುಂದರವಾಗಿದ್ದರೆ ಗ್ಲಾಮರಸ್ ಆಗಿದ್ದರೆ ಮಾತ್ರ ಬೆಳೆಯಲು ಸಾದ್ಯ! ಆಗ ಮಾತ್ರ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂದು ಮಾತನಾಡಿಕೊಳ್ಳುವ ಸಮಯದಲ್ಲಿ, ಕಪ್ಪಗಿದ್ದರೆ ವ್ಯಕ್ತಿಗೆ ಅದು ಮೈನಸ್ ಅಲ್ಲ ಪ್ಲಸ್ ಎಂದು ತೋರಿಸಿಕೊಟ್ಟವರು ನಟಿ ಸರಿತಾ.! ಆಕೆಯ ಕಣ್ಣುಗಳನ್ನು ನೋಡಿ ಸೋತವರೆಷ್ಟೋ, ಅವರ ಅಭಿನಯ ಮತ್ತು ವ್ಯಕ್ತಿತ್ವವವನ್ನು ನೋಡಿ ಈ ರೀತಿಯಾದ ಹುಡುಗಿ ನಮಗೆ ಸಿಗಬೇಕು ಎಂದು ಅದೆಷ್ಟೋ ಜನ ಕನಸು ಕಂಡಿದ್ದರು. ಕನ್ನಡ, ತೆಲುಗು, ತಮಿಳು, ಮಲೆಯಾಳ ಮುಚ್ಚಿಗೆ ಮರಗಳಲ್ಲಿ ವಿಜೃಂಭಿಸಿದ ಅವರಿಗೆ ವೈವಾಹಿಕ ಜೀವನ…