ಸಿನಿಮಾ

ಶಾಕಿಂಗ್ ನ್ಯೂಸ್!ಚಾಲೆಂಜಿಂಗ್ ಸ್ಟಾರ್ ಮನೆ ಮೇಲೆ ಕಲ್ಲು ತೂರಾಟ!ಮಾಡಿದ್ದು ಯಾರು?

113

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಇಂದು ಬೆಳಗಿನ ಜಾವ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ.

ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಸದ್ಯ ರಾಜರಾಜೇಶ್ವರಿನಗರ ಪೊಲೀಸರು ಹಾಗೂ ಕೆಂಗೇರಿ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೆನೆಮೇಲೆ ಕಲ್ಲು ತೂರಾಟ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದ್ದು, ಗಿರಿನಗರದ ಫ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿರುವ ತನ್ನ ಪತ್ನಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಇದ್ದರು ಎಂದು ಹೇಳಲಾಗಿದೆ.

ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾ ವೇಳೆ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಮಾತ್ರವೇ ಇದ್ದು, ಅವರೇ ದೂರು ನೀಡಿದ್ದಾರೆ. ಇನ್ನೇನು ತನಿಖೆ ನಡೆದು ಆ ದುಷ್ಕರ್ಮಿಗಳು ಯಾರೆಂಬ ಸತ್ಯ ಹೊರಬರಬೇಕಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪಿಂಚಣಿ ಹಣಕ್ಕಾಗಿ 100 ವರ್ಷ ವಯಸ್ಸಿನ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಗಳು.

    100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ…

  • ಸುದ್ದಿ

    ಲೈಂಗಿಕ ಕಿರುಕಳ ನೀಡುತಿದ್ದ ಕಾಮುಕ ಮಾವನ ಹಿಡಿಯಲು ಸೊಸೆ ಮಾಡಿದ ಚಾಣಾಕ್ಷ ಪ್ಲ್ಯಾನ್…..!

    ತನ್ನ ಸೊಸೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ 50 ವರ್ಷದ ಆಟೋ ಚಾಲಕನನ್ನು ಮುಂಬೈ ವಿಹಾರ್ ಪೊಲೀಸರು ಬಂಧಿಸಿದ್ದಾರೆ.  ಮಾವನಿಂದಲೇ ಶೋಷಣೆ ಆಗುತ್ತಿರುವ ಬಗ್ಗೆ ಮಹಿಳೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಳು. ಆದರೆ ಗಂಡ ಆಕೆಯ ಮಾತನ್ನು ನಂಬಿರಲಿಲ್ಲ. ಹಾಗಾಗಿ ಮಹಿಳೆ ಸಾಕ್ಷಿ ಸಮೇತ ಮಾವನನ್ನು ಹಿಡಿದಕೊಡುವ ನಿರ್ಧಾರಕ್ಕೆ ಬಂದಿದ್ದರು. ಅಡುಗೆ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಫಿಕ್ಸ್ ಮಾಡಿದಳು. ಮಾವ ಆಕೆಯ ಮೇಲೆ ಶೋಷಣೆ ಮಾಡಲು ಆಗಮಿಸಿದ.  ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದವ ಸೊಸೆಯ…

  • ಸುದ್ದಿ

    ಬಾಳ ಸಂಗಾತಿಯನ್ನು ತಬ್ಬಿ ಮಲಗುವುದರಲ್ಲಿರುವ ಲಾಭವೇನು ಗೊತ್ತ…?ಇದನ್ನೊಮ್ಮೆ ಓದಿ..

    ಕೆಲವರು ಸಂಗಾತಿಯನ್ನು ತಬ್ಬಿ ಮಲಗುತ್ತಾರೆ. ಆದ್ರೆ ಇದ್ರಿಂದ ಲಾಭವೇನು? ನಷ್ಟವೇನು? ಎಂಬುದು ಅವ್ರಿಗೆ ತಿಳಿದಿರುವುದಿಲ್ಲ. ಸಂಗಾತಿಯನ್ನು ತಬ್ಬಿ ಮಲಗುವುದ್ರಿಂದ ಸಾಕಷ್ಟು ಲಾಭವಿದೆ. ಕೇವಲ ಸಂಗಾತಿಗೆ ಪ್ರೀತಿ ವ್ಯಕ್ತಪಡಿಸುವ ವಿಧಾನ ಮಾತ್ರವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳೂ ಇವೆ. ಸಂಗಾತಿಯನ್ನು ತಬ್ಬಿ ಮಲಗುವುದ್ರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಸಂಶೋಧನೆಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಪತಿ-ಪತ್ನಿ ತಬ್ಬಿ ಮಲಗಿದ್ರೆ ಇಬ್ಬರಿಗೂ ಆರೋಗ್ಯಕರ ಲಾಭವಿದೆ. ತಲೆನೋವು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡ್ತಿದೆ. ರಾತ್ರಿ ಇಬ್ಬರು ತಬ್ಬಿ ಮಲಗುವುದ್ರಿಂದ ತಲೆನೋವು ಕಡಿಮೆಯಾಗುತ್ತದೆ. ಸಂಶೋಧಕರ ಪ್ರಕಾರ, ತಬ್ಬಿ…

  • ಸುದ್ದಿ

    ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ಸುಮಲತಾ ಅವರ ಮುಂದಿನ ಪ್ಲಾನ್ ಏನು?

    ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ..ಈ ದಿನದ ನಿಮ್ಮ ಭವಿಷ್ಯ ಶುಭವೋ ಅಶುಭುವೋ ನೋಡಿ ತಿಳಿಯಿರಿ.. ಶೇರ್ ಮಾಡಿ

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಶುಕ್ರವಾರ, 20/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:- ಹೊಸ ಉದ್ಯೋಗಗಳ ಹುಡುಕಾಟದಲ್ಲಿರುವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ನಿಮ್ಮದಾಗಲಿದೆ. ಸ್ನೇಹಿತರು ಸಹಾಯಕೋರಿ ಬರಲಿದ್ದು,…

  • ದೇವರು-ಧರ್ಮ

    ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಗೋವರ್ಧನ ಪೂಜೆ…!ಇದರ ಇನ್ನಳೆಯೇನು ಗೊತ್ತಾ?

    ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…