ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ, ಪಾಕಿಸ್ತಾನದ ಬಾಲಕೋಟ್ನಲ್ಲಿ ನಡೆಸಿದ ಏರ್ಸ್ಟ್ರೈಕ್ ಬಗ್ಗೆ ಓವರ್ಸೀಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ ಪ್ರಶ್ನೆ ಎತ್ತಿದ್ದಾರೆ. 300 ಜನರನ್ನ ಕೊಂದಿದ್ದರೆ ಸರಿ. ಆದ್ರೆ ಅದಕ್ಕೆ ಸಾಕ್ಷಿ ಕೊಡ್ತೀರಾ? ಅದನ್ನು ಪ್ರೂವ್ ಮಾಡ್ತೀರಾ? ಎಂದು ಕೇಳಿದ್ದಾರೆ. ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮುಂಬೈ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಅಲ್ಲಿಂದ ಬಂದ 8 ಮಂದಿ ಇಲ್ಲಿ ಕೃತ್ಯ ಎಸಗಿದ್ದನ್ನು ಪರಿಗಣಿಸಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ದೂಷಣೆ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ನಾನು ನಂಬಿಕೆಯನ್ನು ಇಟ್ಟಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಲ್ವಾಮಾ ದಾಳಿ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಈ ರೀತಿಯ ದಾಳಿ ನಡೆಯುತ್ತಲೇ ಇರುತ್ತದೆ. ಮುಂಬೈ ದಾಳಿಯಾದಾಗ ನಾವು ವಿಮಾನವನ್ನು ಪಾಕಿಸ್ತಾನಕ್ಕೆ ಕಳುಹಿಸಬಹುದಿತ್ತು. ಆದರೆ ನನ್ನ ಪ್ರಕಾರ ಇದು ಸರಿಯಾದ ನಿರ್ಧಾರ ಅಲ್ಲ ಎಂದು ಹೇಳಿದರು.

ಸುದ್ದಿ ಸಂಸ್ಥೆಯೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಪಿತ್ರೋಡ, ನಿಜಕ್ಕೂ ದಾಳಿ ನಡೆಯಿತಾ? ನಿಜಕ್ಕೂ 300 ಜನರನ್ನು ಕೊಲ್ಲಲಾಯಿತಾ? ನನಗೆ ಗೊತ್ತಿಲ್ಲ. ಒಬ್ಬ ಪ್ರಜೆಯಾಗಿ ಇದನ್ನು ಕೇಳುವುದು ನನ್ನ ಕರ್ತವ್ಯ. ವಿದೇಶಿ ಮಾಧ್ಯಮಗಳು ಈ ಏರ್ಸ್ಟ್ರೈಕ್ ಬಗ್ಗೆ ಬೇರೆಯದ್ದೇ ರೀತಿಯಲ್ಲಿ ವರದಿ ಮಾಡಿವೆ ಎಂದು ಹೇಳಿದ್ರು.

ನಾನು ಗಾಂಧಿವಾದಿ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನಂಬಿರುವವನು ಎಂದು ಹೇಳಿದ್ರು. ಹಾಗಿದ್ರೆ ಪಾಕಿಸ್ತಾನದೊಂದಿಗೆ ಮಾತುಕತೆ ಮಾಡಿ ಪರಿಹಾರ ಕಂಡುಕೊಳ್ಳಬೇಕಾ ಎಂದು ಮತ್ತೆ ಪ್ರಶ್ನಿಸಿದಾಗ, ಯಾರೋ ಕೆಲವು ಜನ ಬಂದು ಇಲ್ಲಿ ದಾಳಿ ಮಾಡಿದಾಗ ಇಡೀ ದೇಶವನ್ನು ದೂಷಿಸುವುದು ತಿಳಿಗೇಡಿತನ ಎಂದರು. ನನಗೆ ಪುಲ್ವಾಮಾ ದಾಳಿ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಹೇಳಿಕೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಒಬ್ಬ ವಿಜ್ಞಾನಿ. ನಾನು ಡೇಟಾಗಳನ್ನು ನಂಬುತ್ತೇನೆ ಹೊರತು ಭಾವನೆಗಳನ್ನು ನಂಬುವುದಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖಾಸಗಿ ಶಾಲೆಗಳು ಇದೀಗ ಎಲ್ಲೆಂದರೆಲ್ಲಿ ತಲೆಯೆತ್ತುತ್ತಿವೆ. ಗಲ್ಲಿಗೊಂದರಂತೆ ಶಾಲೆಗಳು ನಮಗೆ ಕಾಣಸಿಗುತ್ತವೆ. ಶಿಕ್ಷಣವು ಮೂಲಭೂತ ಹಕ್ಕಾಗಿರದೇ, ಇದೀಗ ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಕೊನೆ ಬಡ್ಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವರ ಪಿಯೂಶ್ ಗೋಯಲ್ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ. ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ…
ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು 1947 ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ. ಭಾರತದ ರಾಜ್ಯವಾಗಿ ಕಾಶ್ಮೀರ ಗುರುತಿಸಿಕೊಂಡಿದ್ದರೂ, ಈ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ಭಾರತದ ಬೇರೆ ರಾಜ್ಯಗಳಿರುವ ಕಾನೂನು ಈ…
ಸಾಮಾನ್ಯವಾಗಿ ಸಿಹಿತಿಂಡಿಗಳ ರುಚಿಯನ್ನು ಹೆಚ್ಚಿಸಲು ಗೋಡಂಬಿಯ ಜೊತೆಗೆ ದ್ರಾಕ್ಷಿಯನ್ನು ಸೇರಿಸುತ್ತಾರೆ. ಹಲವು ಅಡುಗೆಗಳಿಗೆ ಈ ದ್ರಾಕ್ಷಿ ಗೋಡಂಬಿಗಳನ್ನು ಬಳಸುತ್ತಾರೆ. ಆದರೆ ಒಣದ್ರಾಕ್ಷಿಯ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಹಲವು ಲಾಭಗಳಿವೆ ಏನೆಂದು ತಿಳಿಯೋಣ ಬನ್ನಿ. ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ : ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಇದರೊಂದಿಗೆ ಹಲವು ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಬಂಧಿ…
ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಇದೀಗ ಕರ್ನಾಕಟವೂ ದುಬಾರಿ ಟ್ರಾಫಿಕ್ ದಂಡದ ಮೊತ್ತವನ್ನು ಕಡಿತಗೊಳಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಮೊತ್ತವನ್ನು10 ಪಟ್ಟು ಹೆಚ್ಚಿಸಲಾಗಿತ್ತು. ಇದೀಗ ಕರ್ನಾಟಕ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದರೆ ಕರ್ನಾಟಕ ಸರ್ಕಾರ ಟ್ರಾಫಿಕ್ ದಂಡವನ್ನು ಎಷ್ಟು ಕಡಿತಗೊಳಿಸಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸಿದರೆ…
ನೆಚ್ಚಿನ ನಟ ನಟಿಯರನ್ನ ನೋಡುವ, ಭೇಟಿ ಮಾಡುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದ್ರೆ ಹುಚ್ಚು ಅಭಿಮಾನಕ್ಕೆ ಸಿಲುಕಿ ಅದೆಷ್ಟೋ ಅಭಿಮಾನಿಗಳು, ಹಣ, ಪ್ರಾಣ ಹಾನಿ ಮಾಡಿಕೊಂಡಿದ್ದನ್ನ ಕೂಡ ನಾವು ಹಿಂದೆ ಅನೇಕ ಭಾರಿ ನೋಡಿದ್ದೇವೆ. ಇದೀಗ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ನೋಡುವ ಆಸೆಯಿಂದ ಅಭಿಮಾನಿಯೋರ್ವ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ…