ಸುದ್ದಿ

ವೋಟ್ ಮಾಡಿ ಎಂದಿದಕ್ಕೆ ಮಂಗಳಾರತಿ ಮಾಡಿಸಿಕೊಂಡ ಮೋಹಕ ತಾರೆ ರಮ್ಯಾ..

320

ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಇದೀಗ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಅವಕಾಶ ಸಿಕ್ಕಾಗ ತಾವು ಮತದಾನ ಮಾಡದೇ, ಇದೀಗ ಟ್ವಿಟರ್ ನಲ್ಲಿ ಮತದಾನದ ಜಾಗೃತಿ ಮೂಡಿಸಲು ಹೋಗಿ ಟ್ವಿಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ, ‘ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಸಿಕೊಳ್ಳಿ, ಟೈಂ ಹೋಗ್ತಿದೆ…..ಭವಿಷ್ಯ ನಿಮ್ಮದಾಗಿದೆ’ ಅಂತಾ ಟ್ವೀಟ್ ಮಾಡಿದ್ರು.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು ರಮ್ಯಾಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೇರೆಯವರಿಗೆ ವೋಟು ಮಾಡಿ ಅಂತಾ ಹೇಳೋ ಹಕ್ಕು ನಿಮಗಿಲ್ಲ. ಮೊದಲು ನೀವು ಹೋಗಿ ವೋಟ್ ಮಾಡಿ ಅಂತಾ ಕೆಲವರು ಕಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಹಿಂದೆ ನಡೆದ ಚುನಾವಣೆಯಲ್ಲಿ ಮತದಾನ ಮಾಡದೆ ತಪ್ಪಿಸಿಕೊಂಡ ರಮ್ಯಾರಿಂದ ಮತದಾನದ ಪಾಠ ಅಂತಾ ವ್ಯಂಗ್ಯವಾಡಿದ್ದಾರೆ. ಮತ್ತೊಂದಿಷ್ಟು ಜನ ದೆಹಲಿ ಬಿಟ್ಟು ಬಂದು ಮೊದಲು ವೋಟ್‍ ಮಾಡ್ರಿ, ಆಮೇಲೆ ಬೇರೆಯವರಿಗೆ ಉಪದೇಶ ಮಾಡಿ ಎಂದು ಟ್ವೀಟ್ ನಲ್ಲಿ ಕಾಲೆಳೆದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ವೋಟ್‍ ಮಾಡಿರಲಿಲ್ಲ. ಹೀಗಾಗಿ ವೋಟ್‍ ಮಾಡಿ ಅಂತಾ ಉಪದೇಶ ಮಾಡಲು ಬಂದ ರಮ್ಯಾ ವಿರುದ್ಧ ಟ್ವಿಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಪ್ರೇಮ, ಸಂಬಂಧ, ಸ್ಪೂರ್ತಿ

    ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ…

  • ಉಪಯುಕ್ತ ಮಾಹಿತಿ

    ಯಾವುದೇ ಹೊಸ ಗಡಿಯಾರಗಳನ್ನ ನೋಡಿದಾಗ ಅದರಲ್ಲಿ 10:10 ಟೈಮ್ ಗೆ ನಿಂತಿರುತ್ತದೆ ಯಾಕೆ ಗೊತ್ತಾ?

    ಹೌದು ನೀವು ಗಮನಿಸಿರಬಹುದು ನೀವು ಯಾವುದೇ ಗಡಿಯಾರಗಳನ್ನು ತರಲು ಅಂಗಡಿಗಳಿಗೆ ಹೋದಾಗ ಆ ಎಲ್ಲ ಗಡಿಯಾರಗಳು 10:10 ಸಮಯವನ್ನು ತೋರಿಸುತ್ತದೆ ಅಂದರೆ ಗಡಿಯಾರ ರೆಡಿಯಾಗಿ ಬಂದಿರುವಾಗ ಎಲ್ಲವು ಕೂಡ 10 :10 ಸಮಯದಲ್ಲಿ ನಿಂತಿರುತ್ತದೆ, ಅದು ಯಾಕೆ ಅನ್ನೋದು ನಿಮಗೆ ತಿಳಿಯದೆ ಇರಬಹುದು ಆದ್ರೆ ಇದರ ಹಿಂದಿದೆ ಕೆಲವು ಇಂಟ್ರೆಸ್ಟಿಂಗ್ ವಿಚಾರ ಅದು ಏನು ಅನ್ನೋದನ್ನ ಮುಂದೆ ನೋಡಿ. ನೀವು ಇದನ್ನು ಗಮನಿಸಿರಬಹುದು ಒಂದು ವೇಳೆ ಗಮನಿಸದೆ ಇದ್ರೆ ನೀವು ಒಮ್ಮೆ ಯಾವಾಗಲು ಗಡಿಯಾರದ ಅಂಗಡಿಗೆ ಹೋದಾಗ…

  • ದೇಶ-ವಿದೇಶ

    ಇತಿಹಾಸ ನಿರ್ಮಿಸಿದ ಇಸ್ರೋ…..

    ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ

  • ಸುದ್ದಿ, ಸ್ಪೂರ್ತಿ

    ಗಂಗೆ ಮಲೀನವಾಗಬಾರದೆಂದು ಪ್ರತಿದಿನ ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತಿರುವ ಮೀನುಗಾರ. ಈ ಸುದ್ದಿ ನೋಡಿ.

    ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ನ ಬಳಕೆ ಅತಿ ಹೆಚ್ಚಾಗಿದ್ದು ನದಿಯ ಮಾಲಿನ್ಯಕ್ಕೆ ತುತ್ತಾಗಿದೆ, ಇಲ್ಲಿಗೆ ಬರುವ ಪ್ರವಾಸಿಗಳು ಕೂಡ ತಾವು ತರುವ ವಸ್ತುಗಳ ಪ್ಲಾಸ್ಟಿಕ್ ಅನ್ನು ಎಲ್ಲೆಂದರೆ ಅಲ್ಲಿ ಬಿಸಾಡಿ ಹೋಗುತ್ತಾರೆ. ಇದು ತೀರಾ ನದಿಯ ಮಾಲಿನ್ಯಕ್ಕೆ ತುತ್ತಾಗಿದೆ. ಆದರೆ ಇಲ್ಲಿ 48 ವರ್ಷದ ಕಾಳಿಪದ ದಾಸ್ ಎಂಬುವವರು  ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುವ ಕಾರ್ಯವನ್ನು ಮಾಡುತ್ತಾರೆ. ಇವರು ಮೂಲತಃ ಪಶ್ಚಿಮ ಬಂಗಳಾದವರಾಗಿದ್ದು ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ…

  • ಜ್ಯೋತಿಷ್ಯ

    ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಮಾಡಿ ಕನಸನ್ನು ನನಸಾಗಿಸಿಕೊಂಡ ಸೋದರರು………!

    ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್‍ಗಳನ್ನು ಮಾಡುವ ಕನಸು ಹೊಂದಿದ್ದನು. ಅದು…

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ರಾಜಯೋಗ ಕಟ್ಟಿಟ್ಟಬುತ್ತಿ,. ನಿಮ್ಮ ರಾಶಿ ಇದೆಯಾ….!

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ…