ಸುದ್ದಿ

ಈ ಹುಡುಗಿಯನ್ನು ಮದ್ವೆ ಆಗೋ ಹುಡುಗರಿಗೆ ಸಿಗುತ್ತೆ ಕೋಟಿ ಕೋಟಿ ರೂಪಾಯಿಗಳ ಆಸ್ತಿ..!

275

ಥೈಲ್ಯಾಂಡ್ ನ ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗುವ ವ್ಯಕ್ತಿಗೆ ಅನನ್ಯ ಮತ್ತು ಆಸಕ್ತಿದಾಯಕ ಷರತ್ತು ವಿಧಿಸಿದ್ದಾನೆ. ಈತನ ಮಗಳನ್ನು ಮದುವೆಯಾದ್ರೆ 2 ಕೋಟಿ ರೂಪಾಯಿ ಹಣವನ್ನು ತಂದೆ ನೀಡಲಿದ್ದಾನಂತೆ.

ಥೈಲ್ಯಾಂಡ್ ನ ಶ್ರೀಮಂತ ವ್ಯಕ್ತಿ, ಮಗಳ ಸುರಕ್ಷತೆ ಜವಾಬ್ದಾರಿಯನ್ನು ಹೊತ್ತಿದ್ದಾನೆ. ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆಪರ್ ನೀಡಿದ್ದಾನೆ.

ತಂದೆಯ ಪ್ರಕಟಣೆ ನಂತ್ರ ಅನೇಕ ಯುವಕರು ಮದುವೆಯಾಗಲು ಮುಂದೆ ಬಂದಿದ್ದಾರೆ. ಈವರೆಗೆ 10,000 ಹುಡುಗ್ರು ಮದುವೆಯಾಗಲು ಆಸಕ್ತಿ ತೋರಿಸಿದ್ದಾರಂತೆ. 58 ವರ್ಷದ ತಂದೆ ಮಿಸ್ಟರ್ ರಾತೊಂಗ್ ನನ್ನು ಅನೇಕರು ಸಂಪರ್ಕಿಸಿದ್ದಾರಂತೆ.

ಬಂದವರಲ್ಲಿ ಒಬ್ಬ ಯುವಕ ತುಂಬಾ ಸುಂದರವಾಗಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ನಿರಾಕರಿಸಿದ್ದಾನಂತೆ. ಮೂರು ತಿಂಗಳ ಕಾಲ ಅಳಿಯನ ಹುಡುಕಾಟ ನಡೆಸಲು ರಾತೊಂಗ್ ಮುಂದಾಗಿದ್ದಾನೆ.

ಮಗಳನ್ನು ಮದುವೆಯಾಗುವ ವ್ಯಕ್ತಿ ಯಾವುದೇ ದೇಶದವನಾಗಿದ್ದರೂ ಸರಿ, ಒಳ್ಳೆಯವನಾಗಿರಬೇಕು. ಶ್ರಮಿಕನಾಗಿರಬೇಕು ಎಂದು ತಂದೆ ಹೇಳಿದ್ದಾನೆ. ಪ್ರತಿ ದಿನ 50 ಟನ್ ಹಣ್ಣನ್ನು ತೋಟದಿಂದ ಕೀಳುವ ರಾತೊಂಗ್, ತನ್ನ ವ್ಯಾಪಾರವನ್ನು ಅಳಿಯ ಮುಂದುವರಿಸಬೇಕು. ಆತ ಡಿಗ್ರಿ ಪಡೆದಿರಬೇಕೆಂದಿಲ್ಲ ಎಂದಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ