ಸುದ್ದಿ

ಕೆಲವೇ ನಿಮಿಶಗಳಲ್ಲಿ ಪಾಕಿಸ್ತಾನದಲ್ಲಿನ 300 ಉಗ್ರರನ್ನು ಉಡೀಸ್ ಮಾಡಿದ ಭಾರತೀಯ ವಾಯುಸೇನೆ

85

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ.

ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ. ಕಾಶ್ಮೀರದ ಬಾಲ್ಕೋಟ್ ನಲ್ಲಿ ನೆಲೆ ಕಂಡುಕೊಂಡಿದ್ದ ಉಗ್ರರ ಸಂಘಟನೆಯ ಕ್ಯಾಂಪ್ ಸಂಪೂರ್ಣ ಧ್ವಂಸವಾಗಿದ್ದು, ಪುಲ್ವಾಮಾ ದಾಳಿಗೆ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದೆ. 

ಮಿರಾಜ್- 2000 ಹೆಸರಿನ 12 ಜೆಟ್ ಗಳನ್ನು ಬಳಸಿ ಇಂದು ಬೆಳಗ್ಗಿನ ಜಾವ 3.30ಕ್ಕೆ ವೈಮಾನಿಕ ದಾಳಿ ನಡೆದಿದ್ದು, ಕೆಲವು ದೃಶ್ಯಗಳು ಮತ್ತು ಫೋಟೋಗಳನ್ನು ರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುತ್ತಿವೆ. ಭಾರತೀಯ ಸೇನೆಯ ಯುದ್ಧ ವಿಮಾನಗಳು ಎಲ್‍ಓಸಿ ಗಡಿಯನ್ನು ದಾಟಿ ಪಾಕಿಸ್ತಾನದತ್ತ ಬರುತ್ತಿವೆ ಎಂದು ಪಾಕ್ ಹೇಳಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪೇಪರ್ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇಂದು ಹೇಗಿದ್ದಾನೆ ಗೊತ್ತ…?

    ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು…

  • ಸುದ್ದಿ

    ದೇವಸ್ಥಾನದ ಬಳಿ ಭಿಕ್ಷೆ ಬೇಡಿದರೆ ಇಷ್ಟೊಂದು ಹಣ ಇರುತ್ತಾ.?ಬಿಕ್ಷುಕಿ ಬಳಿ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್…!

    ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…

  • ಸುದ್ದಿ

    ಇನ್ನುಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯಬೇಕೆಂದರೆ ಇದನ್ನು ಪಾಲಿಸಲೇಬೇಕು..!ಏನದು?

    ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್‌ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್  ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…

  • ವಿಸ್ಮಯ ಜಗತ್ತು

    ಸುಳ್ಳು ಸುದ್ದಿ ನಂಬಿ ಮಾಂಗಲ್ಯ ಸರದಲ್ಲಿನ ಹವಳವನ್ನು ಒಡೆದು ಬಿಸಾಡಿದ ಮಹಿಳೆಯರು!ಆ ಸುಳ್ಳು ವದಂತಿ ಏನು ಗೊತ್ತಾ?ಈ ಲೇಖನಿ ಓದಿ…

    ಬಾಯಿಯಿಂದ ಬಾಯಿಗೆ ಹಬ್ಬಿದ ಸುಳ್ಳು ಸುದ್ದಿಯಿಂದಾಗಿ ಆತಂಕಗೊಂಡ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದು ಮಾಂಗಲ್ಯ ಸರದಲ್ಲಿ ಇದ್ದ ಕೆಂಪು ಹವಳವನ್ನು ತೆಗೆದು ಕುಟ್ಟಿ ಪುಡಿ ಮಾಡಿದ್ದಾರೆ.

  • ರಾಜಕೀಯ

    ಚುನಾವಣಾ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್..!?

    ಲೋಕಸಭಾ ಚುನಾವಣೆಗೆ ಕೌಂಟ್‍ ಡೌನ್‍ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಗದಗ ರಾಜಕಾರಣದಲ್ಲಿ ಬಿಜೆಪಿಗೆ ಬಿಗ್ ಶಾಕ್‍ ಸಿಕ್ಕಿದೆ. ಗದಗದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ನಡೆಸಿದ್ದು, ಮಾಜಿ ಸಚಿವ ಹೆಚ್.ಕೆ. ಪಾಟೀಲ್‍, ಪ್ರಭಾವಿ ಲಿಂಗಾಯತ ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾಜಿ ಶಾಸಕ ಮತ್ತು ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್‍.ಕೆ. ಪಾಟೀಲ್ ಜೊತೆ ಶ್ರೀಶೈಲಪ್ಪ ಮಾತುಕತೆ ನಡೆಸಿರುವ…