ಸುದ್ದಿ

ಈ ಕಿರಾತಕನೆ ನಮ್ಮ ಸೈನಿಕರನ್ನು ಕೊಂದವನು…ಇವನು ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ?

613

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್​ಪಿಎಫ್​ ಬೆಂಗಾವಲು ಪಡೆಯ ಮೇಲೆ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯ ನಂತರ ದಾಳಿಯ ಹೊಣೆ ಹೊತ್ತ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ದಾಳಿಗೆ ಮುನ್ನ ಮಾತನಾಡಿದ ಕೊನೆಯ ವಿಡಿಯೊ ವೈರಲ್ ಆಗಿದೆ.

ಹಿಂದೆ ಜೈಶ್ ಸಂಘಟನೆಯ ಧ್ವಜವನ್ನು ಹೊಂದಿರುವ ವಿಡಿಯೋದಲ್ಲಿ ದಕ್ಷಿಣ ಕಾಶ್ಮೀರದ ಕಾಕಪೊರದ ಆದಿಲ್​ ಅಲಿಯಾಸ್​ ವಕಾಸ್​ ಎಂಬ ಉಗ್ರ ಮಾತನಾಡಿದ್ದಾನೆ. ಅವನ ಸುತ್ತ ಹಲವು ಅತ್ಯಾಧುನಿಕ ಸ್ವಯಂಚಾಲಿತ ರೈಫೆಲ್ಸ್​ಗಳು ಇವೆ. ಈ ವಿಡಿಯೋ ನಿಮ್ಮನ್ನು ತಲುಪುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ. ಕಳೆದ ಒಂದು ವರ್ಷ ನಾನು ಜೈಶ್​- ಇ- ಮೊಹಮ್ಮದ್​ ಸಂಘಟನೆಯಲ್ಲಿ ಕಳೆದಿದ್ದೇನೆ ಮತ್ತು ಕಾಶ್ಮೀರದ ಜನರಿಗೆ ಇದು ನನ್ನ ಕಡೆಯ ಸಂದೇಶ,” ಎಂದು ಹೇಳಿದ್ದಾನೆ.

ಅಲ್ಲದೆ ಉತ್ತರ ಕಾಶ್ಮೀರ ಜನತೆಗೆ ಕೂಡ ಸಂದೇಶ ಕಳುಹಿಸಿದ್ದು ಅದರಲ್ಲಿ ದಕ್ಷಿಣ ಕಾಶ್ಮೀರದ ಜನರು ತಮ್ಮ ಹಕ್ಕುಗಳಿಗಾಗಿ ಭಾರತ ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದೀಗ ಅವರ ಜೊತೆ ಉತ್ತರ, ಕೇಂದ್ರ ಕಾಶ್ಮೀರ ಮತ್ತು ಜಮ್ಮು ಭಾಗದ ಜನರು ಕೂಡ ಕೈಜೋಡಿಸುವ ಕಾಲ ಸನ್ನಿಹಿತವಾಗಿದೆ. ನಮ್ಮ ಕೆಲವು ಉಗ್ರಗಾಮಿ ಕಮಾಂಡರ್ ಗಳನ್ನು ಕೊಂದ ಮಾತ್ರಕ್ಕೆ ನಮ್ಮನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಬೇಕಾಗಿಲ್ಲ ಎಂದು ಕೂಡ ಹೇಳಿದ್ದಾನೆ. ವಿಡಿಯೊದಲ್ಲಿ ಕಾಶ್ಮೀರದ ಭದ್ರತಾ ಪಡೆ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ್ದಾನೆ.

ಜೈಶ್​ ಇ- ಮೊಹಮ್ಮದ್​ ಉಗ್ರಗಾಮಿ ಸಂಘಟನೆ ಈ ಹಿಂದೆ ಭಾರತದ ಮೇಲೆ ಹಲವು ಭೀಕರ ದಾಳಿ ನಡೆಸಿದೆ. ಐಸಿಎ18 ವಿಮಾನ ಹೈಜಾಕ್​, 2001ರಲ್ಲಿ ಸಂಸತ್ತು​ ಮೇಲೆ ದಾಳಿ, ನಾಗರೊಟ ದಾಳಿ, ಉರಿ ದಾಳಿ ಹಾಗೂ ಪಠಾಣ್​ಕೋಟ್​ ವಾಯುಪಡೆ ಮೇಲೆ ದಾಳಿ ನಡೆಸಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಜನಿಕಾಂತ್ ಈ ಮಹಿಳೆಯನ್ನು ಈಗಲೂ ಹುಡುಕುತ್ತಿದ್ದಾರಂತೆ. ಯಾಕೆ ಗೊತ್ತಾ!

    ಮಲಯಾಳಂನ ಖ್ಯಾತ ನಟ ದೇವನ್ ಅವರ ಬಳಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತನ್ನ ಹಳೆ ಪ್ರೇಮವನ್ನು ನೆನೆದು ಕಣ್ಣೀರಿಟ್ಟಿರಿಟ್ಟಿದ್ದಾರಂತೆ. ತೆರೆಯ ಮೇಲೆ ಲವರ್ ಬಾಯ್ ಅಗಿ ಮಿಂಚುತ್ತಿದ್ದ ರಜನಿ ಅವರ ನಿಜ ಜೀವನದಲ್ಲಿ ತನ್ನ ಮೊದಲ ಪ್ರೇಮ ವಿಫಲವಾಗಿತ್ತು. ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವಿಸ್ ಬಸ್  ಕಂಡಕ್ಟರ್ ಆಗಿದ್ದ ಸಮಯದಲ್ಲಿ ರಜನಿ, ರೂಟ್ ನಂಬರ್ 10ಎ ಬಸ್ ನಲ್ಕಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಎಂಬಿಬಿಎಸ್ ಓದುತ್ತಿರುವ ನಿರ್ಮಲಾ ಎಂಬುವವರನ್ನು ಪ್ರೀತಿಸುತ್ತಿದ್ದರು. ನಿರ್ಮಲಾ…

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.

  • Animals

    ಆನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

    ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ  ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ  ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು…

  • ಸಿನಿಮಾ

    ತನ್ನ ಹೆತ್ತ ತಾಯಿ ಮಾಡಿದ್ದ ಶೋಷಣೆಯನ್ನ ಬಹಿರಂಗ ಮಾಡಿದ ಫೇಮಸ್ ನಟಿ..!

    ಮಲಯಾಳಂ ಚಲನಚಿತ್ರ ನಟಿ ಸಂಗೀತ ಕ್ರಿಶ್ ತಮ್ಮ ತಾಯಿಯ ಆರೋಪಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಶ್ ತಾಯಿ ಇತ್ತೀಚೆಗೆ ಮಗಳು ತನ್ನನ್ನ ವೃದ್ಧಾಪ್ಯದಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ತಿಗಾಗಿ ಕ್ರಿಶ್ ನನ್ನನ್ನ ಮನೆಯಿಂದ ಹೊರ ಹಾಕಲು ಮುಂದಾಗಿದ್ದಾಳೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಕ್ರಿಶ್ ಳನ್ನ ಹೆಚ್ಚು ಸುದ್ದಿಯಲ್ಲಿರುವ ಹಾಗೆ ಮಾಡಿತ್ತು. ಈ ಆರೋಪಗಳಿಗೆ ಕ್ರಿಶ್ ಟ್ವಟರ್ ಮೂಲಕ ಸರಿಯಾಗೇ ಉತ್ತರ ನೀಡಿದ್ದಾರೆ. ತಾನು 13 ವರ್ಷದ ಬಾಲಕಿಯಾಗಿದ್ದಾಗ ಹೇಗೆ ತನ್ನನ್ನ ಶೋಷಿಸಲಾಯಿತು ಎಂದು ವಿವರಿಸಿದ್ದಾಳೆ. ಕುಡುಕ…

  • ವಿಚಿತ್ರ ಆದರೂ ಸತ್ಯ

    ಜುರಾಸಿಕ್ ಅವಧಿಯ ಡೈನೋಸರ್ ಮೊಟ್ಟೆಗಳು ಪತ್ತೆ..!ತಿಳಿಯಲು ಈ ಲೇಖನ ಓದಿ…

    ಚೀನದ ಜಿಯಾಂಗ್ಸಿ ಪ್ರಾಂತ್ಯದಲ್ಲಿನ ಗ್ವಾಂಗ್ಝೋ ನಗರ ಡೈನೋಸಾರ್ಗಳ ತವರು ಎಂದೇ ಖ್ಯಾತವಾಗಿದ್ದು ಈಚೆಗೆ ಇಲ್ಲಿ ಈಚೆಗೆ ಡೈನೋಸಾರ್ಗಳ ಪಳೆಯುಳಿಕೆ ರೂಪದಲ್ಲಿರುವ ಸುಮಾರು 30 ಮೊಟ್ಟೆಗಳು ಪತ್ತೆಯಾಗಿವೆ. ಪರಿಣತರು ಈ ಮೊಟ್ಟೆಗಳು ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ.

  • ಕರ್ನಾಟಕ

    ರೈತರ ಸಾಲ ಮನ್ನಾ ಮಾಡಿ, ಮೋದಿಗೆ ಸವಾಲ್ ಹಾಕಿದ ಸಿದ್ದರಾಮಯ್ಯ!!!

    ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.