ಸುದ್ದಿ

ಮಹಿಳಾಮಣಿಗಳಿಗೆ ಬಂಪರ್ ಆಫರ್!ಹತ್ತು ಸಾವಿರ ಹಣದ ಜೊತೆಗೆ ಸಿಗಲಿದೆ ಒಂದು ಸ್ಮಾರ್ಟ್ ಮೊಬೈಲ್..!

144

ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಆಂಧ್ರಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಘೋಷಣೆ ಮಾಡಿದ್ದಾರೆ. ನಾಯ್ಡು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ 10 ಸಾವಿರ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನೀಡಲಿದ್ದಾರಂತೆ.

ಅಮರಾವತಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಾಯ್ಡು ಈ ಘೋಷಣೆ ಮಾಡಿದ್ದಾರೆ. ಹಣ ಮಹಿಳೆಯರಿಗೆ ಮೂರು ಹಂತದಲ್ಲಿ ಸಿಗಲಿದೆ. ಫೆಬ್ರವರಿಯಲ್ಲಿ ಮೊದಲ ಚೆಕ್ ವಿತರಣೆಯಾಗಲಿದೆ.ಮಹಿಳೆಯರಿಗೆ ಫೆಬ್ರವರಿಯಲ್ಲಿ 2500 ರೂಪಾಯಿ ಚೆಕ್ ಸಿಗಲಿದೆ. ಶೀಘ್ರವೇ ಸ್ಮಾರ್ಟ್ಫೋನ್ ನೀಡುವುದಾಗಿ ಅವರು ಹೇಳಿದ್ದಾರೆ.

ಮಹಿಳೆಯರ ಸ್ವಾಭಿಮಾನವನ್ನು ರಕ್ಷಿಸಲು ಬಯಸುತ್ತೇನೆ. ಒಬ್ಬ ಸಹೋದರನಂತೆ ನಾನು ಅವ್ರಿಗೆ ಸಹಾಯ ಮಾಡುತ್ತೇನೆ. ನಮ್ಮ ಬಳಿ ತುಂಬಾ ಹಣವಿಲ್ಲ. ಕೈಲಾದಷ್ಟು ಸಹಾಯವನ್ನು ಮಾಡುತ್ತೇನೆ ಎಂದಿದ್ದಾರೆ. ಮಹಿಳೆಯರು ಸರ್ಕಾರದ ಪ್ರಕಟಣೆಯನ್ನು ಸ್ವಾಗತಿಸಿದ್ದಾರೆ.

ಆಂಧ್ರದಲ್ಲಿ ಸುಮಾರು 93 ಲಕ್ಷ ಸ್ವ ಸಹಾಯ ಗುಂಪಿನ ಮಹಿಳೆಯರಿದ್ದಾರೆ. ಸರ್ಕಾರಕ್ಕೆ ಈ ಯೋಜನೆಯಡಿ ಒಟ್ಟೂ 9400 ಕೋಟಿ ಖರ್ಚಾಗುವ ಸಾಧ್ಯತೆಯಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ಜ್ಯೋತಿಷ್ಯ

    ಹರಿದ ಬಟ್ಟೆ, ಜೀನ್ಸ್ ತೊಡೋದರಿಂದ ಏನಾಗುತ್ತೆ ಗೊತ್ತಾ?

    ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ.  ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ…

  • ಜ್ಯೋತಿಷ್ಯ

    ಈ ದಿನದ ಭವಿಷ್ಯ ಹೇಗಿದೆ ಇಲ್ಲಿ ನೋಡಿ ತಿಳಿಯಿರಿ…

    ಬುಧವಾರ, 28/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅರಣ್ಯ ಇಲಾಖೆ ಸಿಬ್ಬಂದಿಗೆ ಮನ್ನಣೆ ಸಿಗುವುದು. ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಚನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.  ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ ಹೊಂದುವಿರಿ. ವೃಷಭ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು…

  • ಸುದ್ದಿ

    ಮಧ್ಯಾನ ಊಟದ ನಂತರ ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ಶಾಲಾ ಮಕ್ಕಳು….!

    ಮಧ್ಯ ಪ್ರದೇಶದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ಚರಂಡಿ ನೀರಿನಲ್ಲಿ ತಮ್ಮ ತಟ್ಟೆಗಳನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತಲೆ ತಗ್ಗಿಸುವಂತಹ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ನಡೆದಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು….

  • ಗ್ಯಾಜೆಟ್

    ನಿಮ್ಮ ಮೊಬೈಲ್ ನೀರಿಗೆ ಬಿದ್ರೆ,ಏನ್ ಮಾಡಬೇಕು..?ಏನ್ ಮಾಡಬಾರದು..?ತಿಳಿಯಲು ಈ ಲೇಖನ ನೋಡಿ…

    ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ. ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ.

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 2 ಫೆಬ್ರವರಿ, 2019 ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆಭಂಗ ತರುತ್ತದೆ. ನೀವು…

  • ಸ್ಪೂರ್ತಿ

    ಎಸ್ಸೆಸ್ಸೆಲ್ಸಿ ಓದಿದ್ದ ಭೂಪ… 7 ಸರಕಾರಿ ಹುದ್ದೆಗಳ ಕೆಲಸಕ್ಕೆ ಸೇರಿದ್ದು ಹೇಗೆ ಗೊತ್ತಾ…?ತಿಳಿಯಲು ಈ ಲೇಖನ ಓದಿ….

    ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್‌ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎಸ್‌ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.