ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಡಿನಲ್ಲಿ ಹುಲಿ ಎದುರಾದರೆ ಯಾರಾದರೂ ಜೀವಭಯದಿಂದ ಓಡಿ ದಿಕ್ಕಾಪಾಲಾಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಹುಲಿ ಎದುರಾದರೂ ಕದಲದೇ ನಿಂತು ಅದನ್ನು ದಿಟ್ಟಿಸಿ ಹಿಮ್ಮೆಟ್ಟಿಸಿದ್ದಾಳೆ.
ಝೂಗಳಲ್ಲಿ ಬಂಧಿಯಾಗಿರುವ ಹುಲಿಗಳನ್ನು ನೋಡಿದರೇ ಮೈ ಜುಮ್ಮೆನ್ನುತ್ತದೆ. ಅಂಥದ್ದರಲ್ಲಿ ಕಾಡಿಗೆ ಹೋದಾಗ ಕಣ್ಣೆದುರೇ ಬಂದ ಹುಲಿಯನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಒಂದೂವರೆ ಗಂಟೆಗಳ ಕಾಲ ದಿಟ್ಟಿಸಿ ನೋಡುತ್ತಾ, ಹುಲಿಯನ್ನೇ ಹೆದರಿಸಿ ಓಡಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶ ಸಾತ್ಪುರ ಹುಲಿ ರಕ್ಷಿತಾರಣ್ಯದಲ್ಲಿ ನಡೆದಿದೆ.
ಇತ್ತೀಚೆಗೆ ಹುಲಿ ಗಣತಿಗೆಂದು ಮಹಿಳಾ ಅರಣ್ಯಾಧಿಕಾರಿಯೊಬ್ಬರು, ಇಬ್ಬರು ಪುರುಷ ಗಾರ್ಡ್ಗಳ ಜೊತೆ ಮಧ್ಯಪ್ರದೇಶದ ಹೋಷಂಗಾಬಾದ್ ಎಂಬಲ್ಲಿನ ‘ಸತ್ಪುರ ಟೈಗರ್ ರಿಸರ್ವ್’ಗೆ ಹೋಗಿದ್ದರು.ಈ ವೇಳೆ ಹುಲಿಯೊಂದು ಏಕಾಏಕಿ ಪೊದೆಯೊಳಗಿಂದ ಪ್ರತ್ಯಕ್ಷವಾಗಿ, ಗಣತಿಗೆಂದು ಬಂದಿದ್ದವರ ಮುಂದೆ ಘರ್ಜಿಸಲು ಆರಂಭಿಸಿತು.ಹುಲಿ ಮತ್ತು ಇವರ ನಡುವೆ ಕೇವಲ 10 ಮೀಟರ್ ಅಂತರವಿತ್ತು.
ಹುಲಿಯ ಘರ್ಜನೆ ಕೇಳಿದ್ದೇ ತಡ ಇಬ್ಬರೂ ಪುರುಷ ಗಾರ್ಡ್ಗಳು ತತ್ತರಿಸಿ ಹೋಗಿದ್ದರು.ಆಗ ಈಕೆ ತನ್ನ ಸಹೋದ್ಯೋಗಿಗಳಿಬ್ಬರಿಗೆ ಒಂದಿಂಚೂ ಕದಲದೇ ನಿಲ್ಲಿ ಎಂದಿದ್ದಾಳೆ. ಜೊತೆಗೆ ತಾನೂ ಕದಲದೇ ಹುಲಿಯನ್ನೇ ದಿಟ್ಟಿಸಿದ್ದಾಳೆ.
ಹೀಗೆ ಒಂದೆರಡು ನಿಮಿಷವಲ್ಲ, ಒಂದೂವರೆ ಗಂಟೆ ಕಳೆದ ಇವರು ಕೊನೆಗೂ ಹುಲಿಯನ್ನು ಹಾಗೆ ದಿಟ್ಟಿಸಿಯೇ ಹಿಮ್ಮೆಟ್ಟಿಸಿದ್ದಾರೆ.ಈ ಘಟನೆಯಿಂದ ಬೆಚ್ಚಿದ ಹುಲಿ, ಒಂದೂವರೆ ಗಂಟೆಗಳ ಬಳಿಕ ಸುಮ್ಮನೆ, ಮತ್ತೆ ಕಾಡಿನೊಳಗೆ ಸೇರಿಕೊಂಡಿತು.
ಮಹಿಳಾ ಅಧಿಕಾರಿಯ ಈ ಧೈರ್ಯ ಆಕೆಯ ಸಮಯಪ್ರಜ್ಞೆ ಹಾಗೂ ಸಾಮಾನ್ಯ ಜ್ಞಾನದಿಂದ ಮೂವರ ಪ್ರಾಣ ಕಾಪಾಡಿದೆ.ಮಹಿಳಾ ಅಧಿಕಾರಿಯ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ…
ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡುವಾಗ ವಿಶೇಷ ಗಮನ ನೀಡಬೇಕಾಗುತ್ತದೆ. ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನಿಡುವಾಗ ಕೂಡ ದಿಕ್ಕು, ನಿಯಮವನ್ನು ಪಾಲನೆ ಮಾಡಬೇಕು. ಇಲ್ಲವಾದ್ರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಸ್ಥಾಪನೆ ಮಾಡಿ. ಭಗವಂತ ಶಿವನ…
ಪಿ.ಯು.ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.ಮಾರ್ಚ್ 1 ರಿಂದ 17 ರ ವರೆಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಸೌಲಭ್ಯ ಕಲ್ಪಿಸಿದೆ.
ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.
ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಅ ಭೋಜನ ಅಸಂಪೂರ್ಣ ಎನ್ನಿಸುತ್ತದೆ.
ದಟ್ಟವಾದ ರೇಷಿಮೆಯಂತಹ ಕೂದಲು ನೋಡಿದರೆ ಕಣ್ಮನ ಸೆಳೆಯುತ್ತದೆ. ಸುಂದರ ಕೇಶ ಯಾವ ಮೇಕಪ್ ಮತ್ತು ಆಭರಣಗಳು ನೀಡದಂತಹ ಮೆರುಗನ್ನು ನೀಡುತ್ತದೆ. ನಿದಾನವಾಗಿ ತಲೆಬಾಚಲು ಸಹ ಸಮಯ ಸಿಗದ ಇಂದಿನ ದಿನಗಳಲ್ಲಿ ಕೇಶಕ್ಕಾಗಿ ಆರೈಕೆ ತುಸು ಕಷ್ಟವೇ.