ಸುದ್ದಿ

ಫೇಸ್ಬುಕ್ ಫೋಟೋ ನೋಡಿ ಲವ್ ಮಾಡಿದ…ಹುಡುಗಿಯನ್ನು ಭೇಟಿಯಾಗಲು ಹೋದಾಗ..!

802

ಪಾಟ್ನಾದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಸುಂದರ ಹುಡುಗಿಯ ಫೋಟೋ ನೋಡಿದ್ದಾನೆ. ಆಕೆ ಸೌಂದರ್ಯಕ್ಕೆ ಸೋತು ಮೊದಲು ರಿಕ್ವೆಸ್ಟ್ ಕಳುಹಿಸಿದ್ದಾನೆ. ಹುಡುಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ. ನಿಧಾನವಾಗಿ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ. ನಂತ್ರ ಪ್ರೀತಿ ಶುರುವಾಗಿದೆ.

ಇಬ್ಬರೂ ಹೊಸ ಪ್ರಪಂಚದಲ್ಲಿ ತೇಲಾಡಲು ಶುರು ಮಾಡಿದ್ದಾರೆ. ಗಂಟೆಗಟ್ಟಲೆ ಚಾಟ್ ಮಾಡ್ತಿದ್ದವರು ಹೊಸ ವರ್ಷ ಭೇಟಿಯಾಗಿ, ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾನೆ. ಹೊಸ ವರ್ಷದ ಮೊದಲ ದಿನ ಪಾರ್ಕ್ ಒಂದನ್ನು ನಿಗಧಿ ಮಾಡಿ ಅಲ್ಲಿ ಮೊದಲ ಭೇಟಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಹುಡುಗಿಗಿಂತ ಒಂದು ಗಂಟೆ ಮೊದಲೇ ಬಂದ ಹುಡುಗ, ಪ್ರಿಯತಮೆಯನ್ನು  ನೋಡುವ ಕಾತರದಲ್ಲಿದ್ದ.

ಕೈನಲ್ಲಿ ಹೂ ಹಿಡಿದು ನಿಂತಿದ್ದವನ ಮುಂದೆ ಬಂದಿದ್ದು ಫೇಸ್ಬುಕ್ ನಲ್ಲಿದ್ದ ಹುಡುಗಿಯಲ್ಲ. ಹೊಸ ಹುಡುಗಿ ನೋಡ್ತಿದ್ದಂತೆ ದಂಗಾದ ಹುಡುಗ ಪಾರ್ಕ್ ನಿಂದ ಓಡಲು ಶುರುಮಾಡಿದ್ದಾನೆ. ಹುಡುಗಿ ಜನವರಿ 2 ರಂದು ಪೊಲೀಸ್ ಠಾಣೆಗೆ ಹೋಗಿ ಹುಡುಗನ ವಿರುದ್ಧ ದೂರು ನೀಡಿದ್ದಾಳೆ.

facebookruins

ಪೊಲೀಸರು ಹುಡುಗನನ್ನು ಕರೆಸಿ ವಿಚಾರಿಸಿದ್ದಾರೆ. ಫೇಸ್ಬುಕ್ ನಲ್ಲಿ ಸುಂದರ ಫೋಟೋ ಹಾಕಿ ಮೋಸ ಮಾಡಿದ ಹುಡುಗಿ ಶ್ರೀಮಂತೆ ಎಂದು ಸುಳ್ಳು ಹೇಳಿದ್ದಳು. ಆದ್ರೆ ಬೇರೆಯವರ ಮನೆಯಲ್ಲಿ ಕೆಲಸ ಮಾಡ್ತಾಳೆ. ಆಕೆ ಬೇಡ ಎಂದು ಹುಡುಗ ಹೇಳಿದ್ದಾನೆ. ಠಾಣೆಯಲ್ಲಿಯೇ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಪೊಲೀಸರು ಇಬ್ಬರನ್ನು ಶಾಂತಗೊಳಿಸಿ ಮನೆಗೆ ಕಳುಹಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ