ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಲವಾರು ವಾರಗಳ ಹಿಂದೆ ತೈಲ ಬೆಳೆಗಳ ದರ ಏಳ ಎಗ್ಗಿಲ್ಲದೆ ಏರುತ್ತಲೇ ಇತ್ತು. ಈಗ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಇಳಿಕೆಯಗುತ್ತಿದೆ.ಭಾನುವಾರವಷ್ಟೇ 20 ಪೈಸೆ ಯಷ್ಟು ಕಡಿಮೆಯಾಗಿದೆ.ಒಟ್ಟಾರೆಯಾಗಿ ಇಲ್ಲಿಯವರೆಗೆ 7 ರುಪಾಯಿ 29 ಪೈಸೆ ಕಡಿಮೆಯಾಗಿದೆ.ಇದು ಆಗಸ್ಟ್ ೧೬ಕ್ಕೆ ಇದ್ದ ದರಕ್ಕೆ ಈಗ ತಲುಪಿದೆ.
ಇದರ ಜೊತೆಗೆ ಡೀಸೆಲ್ ಬೆಲೆ ಕೂಡ ಲೀಟರ್ಗೆ 18 ಪೈಸೆ ಕಡಿಮೆಯಾಗಿದ್ದು 29 ದಿನಗಳಲ್ಲಿ ೩ರುಪಾಯಿ ೮೯ ಪೈಸೆ ಕಡಿಮೆಯಾಗಿದೆ.
ಆಗಸ್ಟ್ ೧೫ಕ್ಕೆ ಹೋಲಿಸಿದ್ದಲ್ಲಿ ಆಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲಿಟರ್ ಗೆ 77.14 ಇತ್ತು. ಮತ್ತು ಮುಂಬೈನಲ್ಲಿ 84.58ರುಪಾಯಿ ಬೆಲೆ ಇತ್ತು.ಆಗಸ್ಟ್ ೧೬ರ ನಂತರ ದಿನಾಲು ಏರಿಕೆ ಆಗುತ್ತಲೇ ಇತ್ತು.ಅಕ್ಟೋಬರ್ ೪ರ ಹೊತ್ತಿಗೆ ಮುಂಬೈನಲ್ಲಿ 91.34ರೂಪಾಯಿಗಳ ವರೆಗೆ ಗರಿಷ್ಟ ಬೆಲೆ ತಲುಪಿತ್ತು.
ಆಗ ಎಲ್ಲೆಡೆ ಕೇಂದ್ರಸರ್ಕಾರದ ವಿರ್ರುದ್ದ ಆಕ್ರೋಶ ವ್ಯಕ್ತವಾಗಿತ್ತು. ನಂತರ ಮೋದಿ ಸರ್ಕಾರ 1.50ರಷ್ಟು ಅಬಕಾರಿ ಸುಂಕವನ್ನು ಇಳಿಸಿತ್ತು.ಜೊತೆಗೆ 1 ರೂ.ಕಮಿಷನ್ ಕಡಿಮೆ ಮಾಡಿತ್ತು.ತೈಲ ಕಂಪನಿಗಳಿಗೂ ಕೂಡ 2.50 ಕಡಿಮೆ ಮಾಡುವಂತೆ ಸೂಚನೆ ಕೊಟ್ಟಿತ್ತು.ಇದರ ಜೊತೆಗೆ ವ್ಯಾಟ್ ಕಡಿಮೆಮಾದುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು ಆದೇಶ ಕೂಡ ಮಾಡಿತ್ತು.
ತದನಂತರ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ 72.95 ಮತ್ತು 77.45ಕ್ಕೆ ದರಗಳು ಇಳಿಕೆ ಕಂಡಿದ್ದವು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದ್ದರಿಂದ ಭಾರತದಲ್ಲೂ ಸಹ ಏರಿಕೆ ಕಂಡಿತ್ತು. ಈಗ ದಿನದಿಂದ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರ ಕಡಿಮೆಯಾಗುತ್ತಲೇ ಇದ್ದು, ಇದು ಜನರಲ್ಲಿ ಮಂದಹಾಸ ಮೂಡುವಂತಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ. ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ. ►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್ಇಎಸ್)…
ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…
ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ನಮ್ಮ ಈ ಜೀವನದಲ್ಲಿ ಸುಖವಾಗಿರಬೇಕೆಂಬುದು ಎಲ್ಲರ ಮಹದಾಸೆ. ತಾವು ಹಾಯಾಗಿ ಜೀವನ ಕಳೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ದಿನನಿತ್ಯ ಬೆಳಗ್ಗೆ ಎದ್ದ ಕೂಡಲೆ ನಮ್ಮ ಜೀವನ ಶುರುವಾಗುತ್ತದೆ, ಎದ್ದೆನೋ ಬಿದ್ದೆನೋ ಎಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ. ಇನ್ನೇನೋ ಪಡೆಯಬೇಕೆಂಬ ಹೋರಾಟ.