ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ.

ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಶಿಸಲಾಗಿದೆ. ದಾರಿಯುದ್ದಕ್ಕೂ ಪಕ್ಷಿಗಳ ಕಲರವ, ಮತ್ತೆ ಮತ್ತೆ ಸವಯಬೇಕೆನ್ನುವ ಕಾಡು ಹಣ್ಣುಗಳು,ಸುವಾಸಿತ ಹೂವುಗಳು ಜನರನ್ನು ಸೆಳೆಯುತ್ತದೆ.

ಶಿರಸಿಯಿಂದ ಬಾಡಿಗೆಗೆ ಜೀಪುಗಳನ್ನು ಪಡೆದು ಇಲ್ಲಿಗೆ ತೆರಳುವುದು ಬಲು ಸೂಕ್ತ. ಇನ್ನುಳಿದಂತೆ ನಿಮ್ಮ ಸ್ವಾಂತ ವಾಹನಗಳಿದ್ದರೆ ಸಾಕಷ್ಟು ಅನುಕೂಲ, ಏಕೆಂದರೆ ಇದರ ಸುತ್ತಮುತ್ತಲೂ ಸಾಕಷ್ಟು ಇತರೆ ನೈಸರ್ಗಿಕ ಆಕರ್ಷಣೆಗಳನ್ನು ಆನಂದದಿಂದ ನೋಡಬಹುದು.

ಇನ್ನುಳಿದಂತೆ, ಇಲ್ಲಿ ಯಾವುದೆ ರೀತಿಯ ಉಪಹಾರಗೃಹಗಳಿಲ್ಲ. ಕಾರಣ ನೀವು ಶಿರಸಿಯಿಂದಲೆ ಊಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದಲ್ಲಿ ಇಲ್ಲಿನ ಪ್ರಶಾಂತ ಹಾಗೂ ರಮಣೀಯ ಪರಿಸರದ ಮಧ್ಯೆ ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತ ಊಟ ಸವಿಯಬಹುದು. ಆದರೆ ದಯವಿಟ್ಟು ಈ ಸ್ಥಳದಲ್ಲಿ ಗಲೀಜು ಮಾಡದಂತೆ ನೋಡಿಕೊಂಡರೆ ಸಾಕು.

ಶಿರಸಿ ಪ್ರದೇಶದಲ್ಲಿ ಹಿಂದೆ 1678-1718 ರ ಸಮಯದಲ್ಲಿ ಆಳುತ್ತಿದ್ದ ಸದಾಶಿವರಾಯ ಅರಸನು ಈ ಶಿವಲಿಂಗಗಳ ನಿರ್ಮಾತೃ ಎನ್ನಲಾಗಿದೆ. ಶಿವನ ಪರಮ ಭಕ್ತನಾಗಿದ್ದ ಇತ ಇಲ್ಲಿ ಹರಿದಿರುವ ಶಲ್ಮಲಾ ನದಿಯ ತಟದ ಕಲ್ಲುಗಳ ಮೇಲೆ, ನೀರೊಳಗಿನ ಕಲ್ಲುಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ್ದಾನೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವೀಕ್ಷಕರೇ ನಮ್ಮ ಭಾರತ ದೇಶವು ಸಾಂಸ್ಕೃತಿಕವಾಗಿ ತುಂಬಾ ಮುಂದುವರಿದ ದೇಶವಾಗಿದೆ ಈ ನಮ್ಮ ದೇಶದಲ್ಲಿ ಅನೇಕ ರೀತಿಯ ಅರಮನೆಗಳು ದೇವಸ್ಥಾನಗಳು ಪೂರಕವಾಗಿರುವಂತಹ ಶಿಲ್ಪಕಲೆಗಳನ್ನು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಈ ರೀತಿ ಅರಮನೆಗಳು ಮತ್ತೆ ದೇವಾಲಯಗಳನ್ನು ನೋಡಲು ಸಾವಿರಾರು ಲಕ್ಷಾಂತರ ಪ್ರವಾಸಿಗರು ಬರುವುದನ್ನು ನಾವು ಕಾಣಬಹುದು. ಎಷ್ಟೊಂದು ಪ್ರವಾಸಿಗರು ರಾತ್ರಿ ವೇಳೆಯಲ್ಲಿ ಈ ರೀತಿ ಸ್ಥಳಗಳನ್ನು ನೋಡಲು ಬರುತ್ತಾರೆ ರಾತ್ರಿ ವೇಳೆಯಲ್ಲಿಯೇ ಬರುತ್ತಾರೆ ಏಕೆಂದರೆ ಈ ಸ್ಥಳಗಳಲ್ಲಿರುವ ಅತ್ಯುನ್ನತವಾದ ಅರಮನೆಗಳು ದೇವಾಲಯಗಳಿಗೆ ದೀಪಗಳಿಂದ ಅಲಂಕಾರವನ್ನು ಮಾಡಿರುತ್ತಾರೆ. ಬೆಳಗ್ಗಿನ ಸಮಯದಲ್ಲಿ…
ಒಬ್ಬ ಅಂಗಡಿ ಮಾಲೀಕ ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೇ ಕಳೆದ ಎಂಟು ವರ್ಷಗಳಿಂದ 300 ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿದ್ದಾರೆ. ಅದೂ ಕೂಡ ದೆಹಲಿಯ ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ….! ರಾಜೇಶ್ ಕುಮಾರ್ ಎಂಬ ಈ ವ್ಯಕ್ತಿ ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶವಿಟ್ಟುಕೊಂಡು ಈ ಶಾಲೆ ನಡೆಸುತ್ತಿದ್ದಾರೆ. ಉತ್ತರಪ್ರದೇಶ ಮೂಲದ ಇವರು ತಮ್ಮ…
ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…..ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು. ಬಾಳೆ ಹೂವಿನಲ್ಲಿ ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳಿವೆ. ಇದರ ಸಾಂಬಾರು ಮಾಡಿಕೊಂಡು ತಿಂದರೆ ಸಾಕಷ್ಟು ಪ್ರಯೋಜನಗಳಿವೆ. * ಬಾಳೆ ಹೂವಿನಲ್ಲಿರುವ ಇಥನಾಲ್ ಅಂಶ ಗಾಯವನ್ನು ಬೇಗ ಗುಣವಾಗುವಂತೆ ಮಾಡುತ್ತದೆ. ಹಾಗೂ ಇನ್ಫೆಕ್ಷನ್ ಕಡಿಮೆ ಮಾಡಲು ಸಹಾಯಕ. * ಬಾಳೆ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್,…
ಕೇವಲ ಮೂರೂ ನಿಮಿಷದ ಈ ಅನಿಮೇಟೆಡ್ ವಿಡಿಯೋ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ನಾವು ಮಾಡುವ ಒಂದು ಚಿಕ್ಕ ಸಹಾಯ ನಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಪ್ಯಾಶನ್’ಸ್ ಕೆಯ್ರ & ಕಾನ್ಸ್ಟಂಟೈನ್ ಅನ್ನುವವರು ಈ ಅದ್ಭುತವಾದ ವಿಡಿಯೋ ನಿರ್ದೇಶನ ಮಾಡಿದ್ದಾರೆ. ತಪ್ಪದೆ ಕೊನೆಯವರೆಗೂ ನೋಡಿ… ಒಂದು ಒಳ್ಳೆ ಮೆಸೇಜ್ ಹೊಂದಿರೋ ಈ ವಿಡಿಯೋವನ್ನು ನೋಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…
ಇಂದು ನಮ್ಮ ಜೀವನ ವಿಧಾನದಲ್ಲಿ ನಾವು ಅನುಸರಿಸುತ್ತಿರುವ ಅಭ್ಯಾಸಗಳು, ಮಾಡುತ್ತಿರುವ ತಪ್ಪುಗಳಿಂದ ನಮಗೆ ಅನೇಕ ವಿಧದ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳು ಬರುತ್ತಿವೆ.
ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು….