ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಂತ್ಕೊಂಡು ನೀರು ಕುಡಿತೀರಾ, ಹಾಗಾದರೆ ಇಲ್ನೋಡಿ ವಿಜ್ಞಾನಿಗಳು ಹೇಳಿರೋ ಪ್ರಕಾರ , ಈ ಕಾರಣಗಳ್ನ ಓದಿದ್ರೆ ಶಾಕ್ ಆಗೋದು ಖಂಡಿತ. ಓದಿ ನೋಡಿ.

ನಿಂತು ನೀರು ಕುಡಿದ್ರೆ ಬಾಯಾರಿಕೆ ಹೋಗೋದಿಲ್ಲ. ಆಗಾಗ ನೀರು ಕುಡೀತಾನೇ ಇರ್ಬೇಕು ಅನ್ಸುತ್ತೆ. ಎಷ್ಟು ಕುಡಿದ್ರೂ ಉಪಯೋಗ ಇಲ್ಲ.

ಕೂತು ನೀರು ಕುಡೀವಾಗ ನಿಮ್ ದೇಹ ರಿಲ್ಯಾಕ್ಸ್ ಆಗಿರುತ್ತೆ, ಆಗ ತಿಂದಿದ್ದು, ಕುಡ್ದಿದ್ದು ಸುಲಭವಾಗಿ ಜೀರ್ಣ ಆಗುತ್ತೆ. ನಿಂತು ಕುಡಿದ್ರೆ ಅಜೀರ್ಣ ಆಗುತ್ತೆ.

ಈಗ ನಿಂತ್ಕೊಂಡು ನೀರು ಕುಡಿದ್ರೆ ವಯಸ್ಕಾಲದಲ್ಲಿ ಆರ್ತ್ರೈಟಿಸ್ ಬರುತ್ತೆ. ನಿಂತ್ಕೊಂಡು ನೀರು ಕುಡೀವಾಗ ನಿಮ್ ಶರೀರದಲ್ಲಿರೋ ದ್ರವ ಪದಾರ್ಥಗಳು ಏರುಪೇರಾಗುತ್ತಂತೆ. ಇದ್ರಿಂದ ಗಂಟುಗಳಲ್ಲಿ ನೀರು ನಿಂತು ಆರ್ತ್ರೈಟಿಸ್ ಬರುತ್ತೆ.

ನಿಂತ್ಕೊಂಡಿರೋವಾಗ ದೇಹದಲ್ಲಿ ಟೆನ್ಷನ್ ಹೆಚ್ಚಿರುತ್ತೆ. ನೀವು ಒಂದು ಹೊಡೆದಾಟಕ್ಕೆ ರೆಡಿ ಇರೋ ಹಾಗೆನೇ ಅದು, ಅಷ್ಟು ಟೆನ್ಷನ್ ಇರುತ್ತೆ ದೇಹದಲ್ಲಿ.

ನಿಂತು ನೀರು ಕುಡಿದ್ರೆ ಅದು ಹೊಟ್ಟೆಗೆ ರಭಸವಾಗಿ ಬಡಿಯುತ್ತೆ. ಈ ಶಾಕಿನಿಂದಾಗಿ ಜೀರ್ಣಾಂಗ ವ್ಯವಸ್ಥೆ ಹಾಳಾಗಿಬಿಡುತ್ತೆ.

ನಿಂತು ನೀರು ಕುಡಿಯೋದ್ರಿಂದ ಕಿಡ್ನಿ ಸರಿಯಾಗಿ ಕೆಲಸ ಮಾಡೋಕಾಗೊಲ್ಲ. ಅದರಿಂದ ಕೊಳೆ ಸರಿಯಾಗಿ ಫಿಲ್ಟರ್ ಆಗದೆ ಅದೆಲ್ಲ ಕಿಡ್ನಿಯಲ್ಲೇ ಉಳಿದು ಬಿಡೋ ಚಾನ್ಸ್ ಇದೆ. ಇದರಿಂದ ಮುಂದೆ ಕಿಡ್ನಿಯಲ್ಲಿ ಸಮಸ್ಯೆ ಬರ್ಬಹುದು.

ಕೂತ್ಕೊಂಡು, ಸಣ್ ಸಣ್ ಗುಟುಕಲ್ಲಿ ನೀರು ಕುಡೀಬೇಕು ಅಂತ ಆಯುರ್ವೇದದಲ್ಲೂ ಹೇಳಿದ್ಯಂತೆ. ಇದರಿಂದ ದೇಹದಲ್ಲಿರೋ ಆಸಿಡ್ ಪ್ರಮಾಣ ಕಡಿಮೆ ಆಗುತ್ತೆ. ನಿಂತು ಕುಡಿದ್ರೆ ಆಸಿಡ್ ಪ್ರಮಾಣ ಹೆಚ್ಚಾಗುತ್ತೆ.

ನಿಂತು ನೀರು ಕುಡೀವಾಗ ಅದು ಅನ್ನನಾಳಕ್ಕೆ ರಭಸವಾಗಿ ಬಡಿಯುತ್ತೆ. ಇದರಿಂದ ಅನ್ನನಾಳದಲ್ಲಿ ಉರಿ ಹುಟ್ಟಿ ಎದೆಯುರಿ ಬರುತ್ತೆ. ಮುಂದೆ ಅಲ್ಸರ್ ಬರೋ ಚಾನ್ಸ್ ಹೆಚ್ಚಾಗುತ್ತೆ.
ಆದ್ದರಿಂದ ಇನ್ಮೇಲೆ ಕುತ್ಕೊಂಡು ನೀರು ಕುಡಿಯೋದು ಒಳ್ಳೆಯದು. ಇದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು. ಎನ್ಮಾಡ್ತಿರಾ ನೋಡಿ….
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ.
ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್ಡಿಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುಟ್ಟು ಸಾಧಿಸಲು ಸಲಹೆ ಮಾಡುತ್ತಾರೆ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದಷ್ಟು ಹೃದಯ ಸಂಬಂಧಿ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು…
ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ. ಪರಿಸರದ…
ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಸ್ಮಾರ್ಟ್ ಖದೀಮರು ಹೆಚ್ಚಾಗಿದ್ದಾರೆ. ಕೋಟಿ ಕೋಟಿ ಲೂಟಿಯ ಐಎಂಎ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಚ್ಚಿಬೀಳುವಂತ ಘಟನೆ ಇದಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. ಆನ್ ಲೈನ್ನಲ್ಲಿ ಅಕೌಂಟ್ಗೆ ಸಂಬಂಧಪಟ್ಟ ಮೊಬೈಲ್ ನಂಬರ್ ಚೇಂಜ್ ಮಾಡಿ ಬರೋಬ್ಬರಿ 3ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಆ ಹಣವನ್ನು ಬ್ಯಾಂಕ್ನಲ್ಲಿ ಜಮೆ…
ಅಂಟರ್ 19 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಭಾರತದ ಆರಂಭಿಕ ಬ್ಯಾಟ್ಸ್ಮನ್ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು…
ಮತಗಟ್ಟೆಗೆ ಹೋಗುವ ನಾವು, ನಮಗೆ ಇಷ್ಟವಾದ ಪಕ್ಷಕ್ಕೋ, ಅಭ್ಯರ್ಥಿಗೋ ವೋಟ್ ಹಾಕಿ ಬಂದುಬಿಡ್ತಿವಿ.ಆದರೆ ನಾವು ಹಾಕಿದ ವೋಟ್, ನಾವು ಚುನಾಯಿಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಬಿದ್ದಿದೆಯೇ ಎಂಬುವ ಗ್ಯಾರಂಟಿ ಯಾರು ಕೊಡುತ್ತಾರೆ..? ಹೌದು, ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಹಾಗಾದ್ರೆ ನಾವು ಚುನಾಯಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ನಮ್ಮ ವೋಟ್ ಬಿದ್ದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಹೇಗೆ..? ವಿವಿಪ್ಯಾಟ್ ಅಂದ್ರೆ ಏನು..? ವಿವಿಪ್ಯಾಟ್ ಅಂದರೆ “ವೋಟರ್ ವೆರಿಫಯಬಲ್ ಆಡಿಟ್ ಟ್ರಯಲ್” ಎಂದು. ಇದನ್ನು ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್’ಗೆ ಜೋಡಿಸಲಾಗಿರುತ್ತದೆ.ಇದರಿಂದ…