ಉಪಯುಕ್ತ ಮಾಹಿತಿ, ಗ್ಯಾಜೆಟ್

ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ.?ಇದ್ರೆ ಈ ಕೂಡಲೆ ತೆಗೆದುಬಿಡಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

432

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ.

ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ.

ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್‌ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ.

ಆದರೂ ಇನ್ನೂ ಸಾಕಷ್ಟು ಆಪ್ಸ್ ಇವೆಯಂತೆ. ಅಂತಹವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ…

ಇವುಗಳಲ್ಲಿ ಯಾವುದಾದರೂ ಆಪ್‌ನ್ನು ನೀವು ಈಗಾಗಲೆ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಕೂಡಲೆ ತೆಗೆದುಬಿಡಿ. ಇಲ್ಲದಿದ್ದರೆ ಎಷ್ಟೋ ಬೆಲೆಬಾಳುವ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹ್ಯಾಕರ್‌ಗಳ ಪಾಲಾಗುವ ಅಪಾಯವಿದೆ.

ಆ ಆಪ್ಸ್ ಯಾವುದು ಎಂದು ಈಗ ನೋಡೋಣ…

1. ಗೈಡ್ ಫಾರ್ ಫಿಫಾ ಮೊಬೈಲ್ (Guide for FIFA Mobile)

ಗೂಗಲ್ ಪ್ಲೇಸ್ಟೋರ್‌ನಲ್ಲಿ ಇರುವ ಈ ಆಪ್‌‍ನಲ್ಲಿ ವೈರಸ್ ಇದೆ. ಇದನ್ನು ಕೂಡಲೆ ತೆಗೆದುಬಿಡಿ. ಈಗಾಗಲೆ ಇದನ್ನು ಲಕ್ಷದಷ್ಟು ಜನ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ನಿಮ್ಮ ಡಿವೈಸ್‌ನಲ್ಲಿದ್ದರೆ ಕೂಡಲೆ ಅನ್‌ಇನ್‌ಸ್ಟಾಲ್ ಮಾಡಿ.

2. ಗೈಡ್ ಫಾರ್ ಲೆಗೋ ನೆಕ್ಸೋ ನೈಟ್ಸ್ (Guide for LEGO Nexo Knights)

ಪ್ಲೇ ಸ್ಟೋರ್‌ನಲ್ಲಿರುವ ಈ ಆಪ್‌ನಲ್ಲಿ ಮಾಲ್‌ವೇರ್ ಇದೆ. ಇದನ್ನು ಈಗಾಗಲೆ 50 ಸಾವಿರಕ್ಕೂ ಅಧಿಕ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ನೀವೂ ಡೌನ್‌ಲೋಡ್ ಮಾಡಿಕೊಂಡಿದ್ದರೆ ಕೂಡಲೆ ರಿಮೂವ್ ಮಾಡಿ.

3. ಗೈಡ್ ಫಾರ್ ರೋಲಿಂಗ್ ಸ್ಕೈ (Guide for Rolling sky)

ಇದನ್ನು 10 ಸಾವಿರ ಮಂದಿ ಬಳಕೆದಾರರು ಈಗಾಗಲೆ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ಸಹ ಅಪಾಯಕಾರಿ. ಆದಕಾರಣ ಇದನ್ನೂ ತೆಗೆದುಬಿಡಿ.

4. ಗೈಡ್ ಫಾರ್ ಲೆಗೋ ಸಿಟಿ ಮೈ ಸಿಟಿ (Guide for LEGO City My City)

ಈ ಆಪ್‌ನ್ನು 50 ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿಯಾದ ಆಪ್. ಕೂಡಲೆ ತೆಗೆದುಬಿಡಿ.

5. ಗೈಡ್ ಫಾರ್ ಪೋಕಿಮಾನ್ ಗೋ (Guide for Pokemon GO)

ಪೋಕಿಮಾನ್ ಗೇಮ್‌ಗೆ ಸೇರಿದ ಗೈಡ್ ಆಪ್ ಆಗಿರುವ ಇದು ಪ್ಲೇಸ್ಟೋರಲ್ಲಿದೆ. ಇದನ್ನು ಲಕ್ಷ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಆದಕಾರಣ ಇದನ್ನು ಅನ್‌ಇನ್‌ಸ್ಟಾಲ್ ಮಾಡಿಬಿಡಿ.

6. ಗೈಡ್ ಡ್ರೀಮ್ ಲೀಗ್ ಸಾಕರ್ (Guide Dream League Soccer)

ಈ ಆಪ್‌ನ್ನು 50 ಸಾವಿರ ಮಂದಿ ಈಗಾಗಲೆ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್‌ನಲ್ಲೂ ಸಹ ಮಾಲ್‌ವೇರ್ ಇದೆ. ಆದಕಾರಣ ಇದನ್ನು ನಿಮ್ಮ ಫೋನ್‌ನಿಂದ ಕೂಡಲೆ ತೆಗೆದುಬಿಡಿ.

7. ಲೀಗೈಡ್ ಲೆಗೋ ಸಿಟಿ ಅಂಡರ್ ಕವರ್ (LEGUIDE LEGO City Undercover)

ಇದು ಸಹ ಅಪಾಯಕಾರಿ ಆಪ್. ಇದನ್ನು ಈಗಾಗಲೆ 50 ಸಾವಿರ ಮಂದಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ನೀವು ಸಹ ಆ ಕೆಲಸ ಮಾಡಿದ್ದರೆ ಕೂಡಲೆ ತೆಗೆದುಬಿಡಿ.

8. ಗೈಡ್ ಫರ್ ಕಾಡಿಲ್ಲಾಕ್ಸ್ (Guide for Cadillacs)

ಇದನ್ನು 10 ಸಾವಿರ ಮಂದಿವರೆಗೂ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ವೈರಸ್ ಇರುವುದಾಗಿ ಗುರುತಿಸಲಾಗಿದೆ. ಆದಕಾರಣ ಇದನ್ನು ಇನ್‌ಸ್ಟಾಲ್ ಮಾಡಿಕೊಂಡಿರುವವರು ಕೂಡಲೆ ತೆಗೆದುಬಿಡಿ.

9. ಲೀ ಗೈಡ್ ಲೆಗೋ ಸಿಟಿ ಮೈ ಸಿಟಿ (LEGUIDE LEGO City My City)

ಇದನ್ನು 10 ಸಾವಿರ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಇದನ್ನು ಕೂಡಲೆ ತೆಗೆದುಬಿಡಿ.

10. ಗೈಡ್ ಫಾರ್ ಫೀಫಾ 17 (Guide For FIFA 17)

ಈ ಆಪ್ ಸಹ 50 ಸಾವಿರ ಮಂದಿ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ಮಾಲ್‍ವೇರ್ ಇದೆ. ಆದಕಾರಣ ಇದನ್ನೂ ಸಹ ತೆಗೆದುಬಿಡಿ.

11. ಗೈಡ್ ಫಾರ್ ಸ್ಲಿತರ್.ಐಓ (Guide for slither.io)

ಸುಮಾರು 1 ಲಕ್ಷ ಮಂದಿ ಬಳಕೆದಾರರು ಈ ಆಪನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆ ರೀತಿ ನೀವು ಮಾಡಿದ್ದರೆ ಕೂಡಲೆ ಈ ಆಪನ್ನು ತೆಗೆದುಬಿಡುವುದು ಒಳ್ಳೆಯದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports, ಕ್ರೀಡೆ

    ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!

    ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!
    ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.

  • ಸುದ್ದಿ

    7 ವರ್ಷಗಳಲ್ಲಿ 7 ಬಾರಿ ಗರ್ಭಪಾತ ; ಕರಳು ಚಿಮ್ಮುತ್ತೆ ಮಹಿಳೆಯ ಹೃದಯ ವಿದ್ರಾವಕ ಕಥೆ….

    ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…

  • Sports, ಕ್ರೀಡೆ

    ಪ್ರತಿಷ್ಠೆಗಾಗಿ ಭಾರತ ಮತ್ತು ಪಾಕ್ ಕೊನೆಯ ಹೋರಾಟ ಇಲ್ಲಿ ಗೆಲುವು ಯಾರದು?

    ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಭಾನುವಾರ ಎದುರಾಗುತ್ತಿವೆ.

  • ಸುದ್ದಿ

    ‘ಲೈಫ್ ಬಿಗಿನ್ಸ್ ಅಟ್90’ ಎಂಬ ಮಾತನ್ನು ಸ್ಕೂಬಾ ಡೈವಿಂಗ್ಸ್ ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಜ್ಜ..!

    ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ.. ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು…

  • ಸ್ಪೂರ್ತಿ

    51ವರ್ಷದ ಮಹಿಳೆ ಮಾಡಿರುವ ಸಾಧನೆಯ ಬಗ್ಗೆ ನೀವು ತಿಳಿದ್ರೆ ಅಚ್ಚರಿ ಪಡೋದ್ರಲ್ಲಿ ಡೌಟ್ ಇಲ್ಲ.!

    ಸಾಧನೆ ಅನ್ನೋದು ಸುಲಭದ ಮಾತಲ್ಲ. ‘ಆಗುವುದಿಲ್ಲ ಅನ್ನೋ ಮಾತನ್ನು ಬಿಟ್ಟು ಆಗುತ್ತೆ’ ಅನ್ನೋ ದಾರಿಯನ್ನು ಹುಡುಕಿದಾಗ ಮಾತ್ರ ಆ ಸಾಧನೆಯನ್ನು ಮಾಡಲು ಸಾಧ್ಯವಾಗುವುದು ಹಾಗು ಅದಕ್ಕೆ ಪ್ರತಿಫಲ ಸಿಗುವುದು.ಕಣ್ರೀ ನಾವು ನಿಮಗೆ ಹೇಳಲು ಹೊರಟಿರುವ ಕಥೆ ಎಲ್ಲರ ಕಣ್ಣು ಹುಬ್ಬೇರಿಸುವ ರೀತಿಯಲ್ಲಿರುವ ಕಥೆ ಇದು.

  • ಸಿನಿಮಾ

    ನಟ ಯಶ್ ಮನೆ ಮುಂದೆ ಆತ್ಮಹತ್ಯಗೆ ಯತ್ನಿಸಿದ ಅಭಿಮಾನಿ..!

    ಕನ್ನಡ ಚಿತ್ರಗಳನ್ನು ಕೀಳುಮಟ್ಟದಲ್ಲಿ ನೋಡುತ್ತಿದ್ದ ಪರಭಾಷಿಕರನ್ನು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.ಇದನು ಯಶ್ ರವರ ಹುಟ್ಟು ಹಬ್ಬವಾಗಿದ್ದು ಯಶ್ ರವರನ್ನು ನೋಡಲು ಅಭಿಮಾನಿಯನ್ನು ಬಿಡದ್ದಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರವಿ ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಇಂದು ತನ್ನ ನೆಚ್ಚಿನ ನಟನ ಹುಟ್ಟುಹಬ್ಬ ಇರುವ ಕಾರಣ ಯಶ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಹೊಸಕೆರೆಹಳ್ಳಿ ಮನೆಗೆ ಆಗಮಿಸಿದ್ದ. ಮನೆಗೆ ಆಗಮಿಸಿದರೂ ಭೇಟಿಗೆ…