ಜ್ಯೋತಿಷ್ಯ

ದಿನ ಭವಿಷ್ಯ ಸೋಮವಾರ..ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ…

711

ಸೋಮವಾರ, 23/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಮೇಷ:-

ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ವೃಷಭ:-

ಕ್ಷುಲ್ಲಕ ಕಾರಣಗಳಿಗಾಗಿ ಯಾರನ್ನೂ ಕೂಡಾ ವಿರೋಧಿಸಲು ಮುಂದಾಗದಿರಿ. ಗ್ರಹಸ್ಥಿತಿಗಳು ನಿಮ್ಮ ವಿರುದ್ಧ ತೀರ್ಪನ್ನು ನೀಡುವವು. ಹಾಗಾಗಿ ತಾಳ್ಮೆಯನ್ನು ಕಳೆದುಕೊಳ್ಳದಿರಿ.

ಮಿಥುನ:–

ಸಾಧು ಪ್ರಾಣಿಗಳನ್ನೇ ಬಲಿಕೊಡುವರೇ ವಿನಹಃ ಹುಲಿ ಸಿಂಹಗಳನ್ನು ಬಲಿ ಕೊಡುವುದಿಲ್ಲ. ಹಾಗಾಗಿ ನಿಮ್ಮ ತೀರ್ಮಾನಗಳನ್ನು ಯಾರೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿಮ್ಮ ದೃಢ ನಿರ್ಧಾರವೇ ಕಾರಣ.

ಕಟಕ :-

ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಒಳ್ಳೆಯ ದಿನ. ನಿಮ್ಮ ವಿಚಾರಧಾರೆಗಳನ್ನು ಇತರರು ಒಪ್ಪಿಕೊಳ್ಳುವರು. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು. ಶಿವಪಂಚಾಕ್ಷ ರಿ ಮಂತ್ರ ಜಪಿಸಿ.

 ಸಿಂಹ:–

ಎಲ್ಲಾ ಸಮಯದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ.

ಕನ್ಯಾ :-

ಬಾಳಸಂಗಾತಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ.

ತುಲಾ:–

ಚರರಾಶಿಯಲ್ಲಿ ಜನ್ಮಿಸಿರುವ ನೀವು ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದೀರಿ. ಕುಟುಂಬದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೇ ಪ್ರಶ್ನೆಗಳು ಬರುತ್ತವೆ. ಸುಬ್ರಮಣ್ಯಸ್ವಾಮಿಯನ್ನು ಆರಾಧಿಸಿ.

ವೃಶ್ಚಿಕ :-

ಒಣ ತರ್ಕದಿಂದ ಸಿದ್ಧಾಂತವನ್ನು ರೂಪಿಸಲು ಸಾಧ್ಯವಿಲ್ಲ . ನಿಮ್ಮ ವಾದ ಸರಣಿಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಎದುರಾಳಿಯಿಂದ ಮುಖಭಂಗಕ್ಕೆ ಕಾರಣವಾಗುವುದು.

 

ಧನಸ್ಸು:–

ಆಸ್ತಿ ಖರೀದಿಯ ವಿಚಾರದ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ಸಹಾಯ ಮಾಡುವರು. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ.

ಮಕರ :-

ಮುಂದೆ ಬರಬಹುದಾದ ಉತ್ತಮ ದಿನಗಳನ್ನು ಎದುರಿಸಲು ಸನ್ನದ್ಧರಾಗುವಿರಿ. ಎಲ್ಲೆಡೆಯೂ ನಿಮ್ಮ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯುವುದು. ಆ ಚರ್ಚೆಯು ಎಲ್ಲಿಯು ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು.

ಕುಂಭ:-

ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಕೊರತೆ ನಿಮ್ಮನ್ನು ಕಾಡುತ್ತಿದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಮಾಡುವುದು. ಆಂಜನೇಯ ಸ್ಮರಣೆ ಮಾಡಿ.

ಮೀನ:-

ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸಿನ ಹಾದಿಗೆ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಳಕಿನ ಹಬ್ಬ ದೀಪಾವಳಿಯ ಸೊಬಗು ಹೆಚ್ಚಿಸುವ ದೀಪಗಳ ಇಂದಿರುವ ಮಹತ್ವಗಳೇನು ಗೊತ್ತಾ..?

    ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ದೀಪಗಳು ಮನೆಯನ್ನು ಬೆಳಗೋದರ ಜೊತೆಗೆ ಮನಸ್ಸಿಗೆ ಮುದವನ್ನಾ ನೀಡುತ್ತವೆ. ಮನೆ ಮನಗಳನ್ನು ಬೆಳಗೋ ದೀಪಾವಳಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಇದ್ದು ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಒಂದ್ಕಡೆ ಟೆರಾಕೋಟಾ ಇಂದ ತಯಾರಾಗಿರೋ ಪುಟ್ಟ ಪುಟ್ಟ ದೀಪಗಳು. ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಸ್ತಿರೋ ಬಣ್ಣ ಬಣ್ಣದ ದೀಪಗಳು….

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ರೆಸಿಪಿ

    ಈ ಸುಡುವ ಬೇಸಿಗೆಯಲ್ಲಿ ಉಷ್ಣತೆ ಕಡಿಮೆಮಾಡಲು, ಈ ಪಾನೀಯಗಳನ್ನು ಸೇವಿಸಿ.

    ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ…

  • ಸುದ್ದಿ

    ಉಗ್ರರ ದಾಳಿಯ ನಂತರ ವೀರ ಯೋಧರಿಗಾಗಿ ಅತ್ಯಂತ ಮಹತ್ವದ ನಿರ್ಧಾರೆ ತೆಗೆದುಕೊಂಡ ಕೇಂದ್ರ ಸರ್ಕಾರ…

    ಪುಲ್ವಾಮ ಭಯೋತ್ಪಾದಕ ದಾಳಿ ನಂತ್ರ ಭಾರತ ಸರ್ಕಾರ, ಯೋಧರ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯ್ತಿರುವ ಎಲ್ಲ ಭದ್ರತಾ ಸಿಬ್ಬಂದಿ ಶ್ರೀನಗರ ರಸ್ತೆಯಲ್ಲಿ ಪ್ರಯಾಣ ಬೆಳೆಸುವುದಿಲ್ಲ. ಭದ್ರತಾ ಸಿಬ್ಬಂದಿಯನ್ನು ವಾಯು ಮಾರ್ಗದ ಮೂಲಕ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು. ಬುಧವಾರ ಸಂಜೆ ಭದ್ರತಾ ದಳದ ಮುಖ್ಯಸ್ಥರು ಅಧಿಕೃತ ಹೇಳಿಕೆ ನೀಡಿದ್ದರು. ಗುರುವಾರದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಅಸ್ಸಾಂ ರೈಫಲ್ಸ್, ಬಿಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಎನ್ ಎಸ್ ಜಿಗೆ ಈ ಆದೇಶ…

  • ಜ್ಯೋತಿಷ್ಯ

    ವಾಯುಪುತ್ರ ಹನುಮಂತನನ್ನ ನೆನೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(19 ಮಾರ್ಚ್, 2019) ಬಾಕಿಯಿರುವ ಮನೆಯ ಕೆಲಸ ಮುಗಿಸಲು ನಿಮ್ಮ ಸಂಗಾತಿಯ ಜೊತೆ ಏರ್ಪಾಡುಗಳನ್ನು ಮಾಡಿ. ನಾಳೆ…