ಸಿನಿಮಾ

ದೊಡ್ಮನೆ ಹುಡುಗ ಅಣ್ಣಾವ್ರ ಮೊಮ್ಮಗನ ಮದುವೆ ಸಂಭ್ರಮ ಹೇಗಿತ್ತು ಯಾವೆಲ್ಲಾ ಸ್ಟಾರ್’ಗಳು ಬಂದಿದ್ದರು..ತಿಳಿಯಲು ಈ ಲೇಖನ ಓದಿ…

1029

ಕನ್ನಡ ಚಿತ್ರರಂಗದ ದೊಡ್ಮನೆ ಅಣ್ಣಾವ್ರ ಮನೆಯಲ್ಲಿ‌ ಮದುವೆ ಸಂಭ್ರಮ ನಡೆದಿದೆ. ಇದು ದೊಡ್ಮನೆಯ ಮೂರನೇ‌ ತಲೆಮಾರಿನ‌ ಮದುವೆಯಾಗಿದ್ದು, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಮಗ ಶಾನ್ (ಷಣ್ಮುಖ) ರ ಮದುವೆ ಮಾರ್ಚ್ 26 ರಂದು ಶಿವಮೊಗ್ಗದಲ್ಲಿ ನಡೆದಿದೆ.

ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಬಿಮಾನಿಗಳು ಮದುವೆಗೆ ಬನ್ನಿ ಎಂದು ಎಲ್ಲರನ್ನೂ ಆಹ್ವಾನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ಮದುವೆ ನಂತರ ದೊಡ್ಮನೆ ಫ್ಯಾಮಿಲಿಯಲ್ಲಿ ಈ ಮದುವೆ ನಡೆದಿದೆ.

ದೊಡ್ಮನೆ ಹುಡುಗನ ಮದುವೆ ಸಂಭ್ರಮದ ಈ ವಿಡಿಯೋ ನೋಡಿ…

ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮಿ ಗೋವಿಂದರಾಜು ಅವರ ಪುತ್ರ ಶಾನ್ (ಷಣ್ಮುಖ) ಅವರು ಸಾಗರದಲ್ಲಿ ವಕೀಲರಾಗಿರುವ ಬರೂರು ನಾಗರಾಜ್ ಅವರ ಮಗಳು ಸಿಂಧೂ ಅವರನ್ನು ಕೈ ಹಿಡಿದಿದ್ದಾರೆ. ಈ ಮದುವೆ ಸಮಾರಂಭ ಶಿವಮೊಗ್ಗದ ಸರ್ಜಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ದೊಡ್ಮನೆಯ ಇಡೀ ಕುಟುಂಬದ ಜೊತೆಗೆ ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ರಾಜ್ ಕುಟುಂಬದ ಹಲವು ಮಂದಿ ಹಾಗೂ ಸಿನಿಮಾ ಲೋಕದ ಗಣ್ಯರು ಭಾಗಿಯಾಗಿದ್ದರು.

ಇಲ್ಲಿ ಓದಿ:-ಶಿವಣ್ಣನ ವಿರುದ್ದ ತಿರುಗಿ ಬಿದ್ದ ಹುಚ್ಚ ವೆಂಕಟ್..!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ