ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ.ಆದರೆ ಪುರಾಣಕ್ಕೆ ಸಂಭಂದಿಸಿದಂತೆ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ.ಯಾಕಂದ್ರೆ ಪೌರಾಣಿಕ ಧಾರಾವಾಹಿಗಳನ್ನು ಮಾಡಲು ತುಂಬಾ ಹಣ ಬೇಕಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಅಲ್ಲೊಂದು ಇನ್ನೊಂದು ಧಾರಾವಾಹಿಗಳು ಮಾತ್ರ ನೋಡಲು ನಮಗೆ ಸಿಗುತ್ತವೆ.
ಅದರಲ್ಲಿ ಒಂದು ಶನಿ ಧಾರವಾಹಿ. ಇದು ನ್ಯಾಯದ ಅಧಿದೇವತೆ ಶನಿಯ ಕಥೆ ಹೇಳುವ ಧಾರವಾಹಿ. ಇದು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 23ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದು ಅಭೂತಪೂರ್ವ ಯಶಸ್ಸು ಕಾಣುತ್ತಿದೆ.
ಈ ಸೀರಿಯಲ್ ಆರಂಭ ಆದಾಗಿನಿಂದಲೂ ಪ್ರತಿಹಂತದಲ್ಲೂ ಕುತೂಹಲವನ್ನು ಹುಟ್ಟುಸಿಕೊಂಡು ಬರುತ್ತಿದ್ದು, ಈಗಾಗಲೇ ಕಿರುತೆರೆಯಲ್ಲಿ ಯಶಸ್ವಿಯಾಗಿ 100 ಎಪಿಸೋಡ್ ಮುಗಿಸಿದೆ. ಉತ್ತಮ ನಿರೂಪಣೆ, ಕಥೆ, ಪಾತ್ರಗಳು ಈ ಧಾರಾವಾಹಿಯ ಪ್ಲಸ್ ಪಾಯಿಂಟ್ ಆಗಿದ್ದು ಇತರ ಧಾರಾವಾಹಿಗಳಿಗಿಂತ ‘ಶನಿ’ ಮೊದಲ ಸ್ಥಾನದಲ್ಲಿದೆ.
ಶನಿ ಧಾರಾವಾಹಿಯ ಪ್ರಮುಖ ಹೈಲೆಟ್ ಕರ್ಮ ಫಲಧಾತ, ನ್ಯಾಯದ ಅಧಿದೇವತೆ ಭಗವಾನ್ ಶನಿದೇವನ ಪಾತ್ರ.ಈ ಪಾತ್ರವನ್ನು ಮಾಡಿರುವುದು ಸುನಿಲ್ ಎಂಬ ಒಬ್ಬ ಅನಾಥ ಹುಡುಗ ಎಂದರೆ ನೀವ್ ನಂಬೋದಿಲ್ಲ.
ತನ್ನ ತೀಕ್ಷಣ ಕಣ್ಣಿನ ನೋಟ,ಮುಖದ ಗಾಂಬಿರ್ಯ,ಅಮೋಘ ಡೈಲಾಗ್ ಡೆಲಿವರಿ ಜೊತೆಗೆ ಆ ಶನಿ ಮಾಹಾತ್ಮನೆ ತನ್ನ ಮೈ ಮೇಲೆ ಬಂದಿರುವಂತೆ ಅಮೋಘ ಅಭಿನಯ ನೀಡಿ ಕಿರುತೆರೆ ಲೋಕದ ಜನರ ಮನಸ್ಸನ್ನು ಗೆದ್ದಿದ್ದಾನೆ ಈ ಸುನೀಲ್.
ಸಮಾರ್ಗದಲ್ಲಿ ನಡೆ, ಇಲ್ಲದಿದ್ದರೆ ನಾನೇ ನಿಮ್ಗೆ ಸನ್ಮಾರ್ಗ ತೋರಬೇಕಾದಿತು..ಇದು ಶನಿ ಧಾರಾವಾಹಿಯ ಹೈಲೆಟ್ ಡೈಲಾಗ್.
ತನ್ನ ಅಮೋಘ ನಟನೆಯಿಂದಲೇ ಕರುನಾಡ ಜನರ ಮನಸ್ಸನ್ನು ಗೆದ್ದಿರುವ ಸುನೀಲ್ ಬೆಳೆಯುತ್ತಿರುವುದು ಚಾಮರಾಜನಗರದ ಅನಾಥಾಶ್ರಮದಲ್ಲಿ. ಹೌದು ಸುನೀಲ್ ಚಿಕ್ಕಂದಿನಿಂದಲೂ ಬೆಳೆದಿದ್ದು ದೀನ ಬಂಧು ಮಕ್ಕಳ ಆಶ್ರಮದಲ್ಲಿ.ಈ ಆಶ್ರಮವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರ ಮಗ ಚಾಮರಾಜನಗರದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.ತನ್ನ ಹತ್ತನೆ ತರಗತಿವರಗಿನ ವಿಧ್ಯಾಭ್ಯಾಸವನ್ನು ಆಶ್ರಮದಿಂದಲೇ ಮುಗಿಸಿದ್ದಾನೆ.
ತುಂಬಾ ಚಿಕ್ಕಂದಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಸುನೀಲ್ ಯಕ್ಷಗಾನವನ್ನು ಕೂಡ ಕಲಿತಿದ್ದರು.ಶನಿ ಧಾರಾವಾಹಿಯ ಆಡಿಶನ್ ತಂಡದ ಕಣ್ಣಿಗೆ ಬಿದ್ದ ಇವರ ಅಮೋಘ ಅಭಿನಯಕ್ಕೆ ಮನಸೋತ ಶನಿ ಧಾರವಾಹಿ ತಂಡದವರು ಧಾರಾವಾಹಿಯ ಮುಖ್ಯ ಪಾತ್ರ ಭಗವಾನ್ ಶನಿದೇವನ ಪಾತ್ರಕ್ಕೆ ಆಯ್ಕೆ ಮಾಡಿದ್ರು.
ಶನಿ ಪಾತ್ರದಾರಿ ಸುನೀಲ್ ಹೇಳುವ ಪ್ರಖಾರ ಶನಿ ದೇವರ ಅಷ್ಟೇನೂ ಗೊತ್ತಿಲ್ವಂತೆ.ಪಾತ್ರ ಮಾಡುತ್ತಲೇ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.ತನ್ನ ಶೂಟಿಂಗ್ ನಡುವೆಯೂ ಪಿಯು ಓದುತ್ತಿರುವ ಪ್ರತಿಭಾವಂತ ಹುಡುಗ ಸುನೀಲ್’ಗೆ ಮತ್ತಷ್ಟು ಅವಕಾಶಗಳು ದೊರೆಯಲಿ, ಆ ಭಗವಾನ್ ಶನಿ ಮಹಾತ್ಮನ ಆಶೀರ್ವಾದ ಅವನಿಗೆ ಸಿಗಲಿ ಎಂದು ನಾವು ಕೇಳಿಕೊಳ್ಳೋಣ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಕೃತಿ ನಮಗೆ ನೀಡಿರುವ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದು, ಇನ್ನು ಮೀನು ಮಾಂಸದ ಆಹಾರದ ಪ್ರೀತಿಯರಿಗೆ ತುಂಬಾ ಪ್ರಿಯವಾದ ಆಹಾರ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಮೀನನ್ನ ಪ್ರಪಂಚದಲ್ಲಿ ಹೆಚ್ಚಿನ ಜನರು ತಿನ್ನುತ್ತಾರೆ. ಇನ್ನು ಕರಾವಳಿ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಮೀನು ಅಂದರೆ ಪಂಚಪ್ರಾಣ, ಮೀನು ತುಂಬಾ ಆರೋಗ್ಯಕರವಾದ ಆಹಾರ ಅನ್ನುವುದು ನಮಗೆ ತಿಳಿದಿರುವ ವಿಚಾರ ಆಗಿದೆ ಮತ್ತು ಅದನ್ನ ವೈದ್ಯಲೋಕ ದೃಡಪಸಿಡಿದೆ, ಮೀನಿನಲ್ಲಿ ಇರುವ ಹಲವು ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ತುಂಬಾ…
KOLAR NEWS PAPER 25-12-2022
ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ…
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…
ಯುಕೆ ನಿವಾಸಿಯೊಬ್ಬಳು ಕೆಲ ದಿನಗಳ ಹಿಂದಷ್ಟೆ 21ನೇ ಮಗುವಿಗೆ ಜನ್ಮ ನೀಡಿದ್ದಾಳೆ.ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಈ ಮಹಾತಾಯಿ ಹೆಸರು ಶು ರೆಡ್ಪೋರ್ಡ್. ಪತಿ ನಿವೋಲ್. ವರದಿ ಪ್ರಕಾರ ಹಿಂದಿನ ವಾರ 12 ನಿಮಿಷದ ಹೆರಿಗೆ ನೋವು ಅನುಭವಿಸಿ ಶು 21ನೇ ಮಗು ಬೋನಿ ರಾಯೈಗೆ ಜನ್ಮ ನೀಡಿದ್ದಾಳೆ. 21 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ ಅತಿ ದೊಡ್ಡದಾದ…