ಸಿನಿಮಾ

ತೆಲುಗಿನ ಅಕ್ಕಿನೇನಿಗೆ ಜೋಡಿಯಾಗಿ ಕಿರಿಕ್ ಬೆಡಗಿ..!ತಿಳಿಯಲು ಈ ಲೇಖನ ಓದಿ..

226

ಅದೃಷ್ಟ ಅನ್ನೋದು ಯಾರಿಗೆ, ಹೇಗೆ, ಎಲ್ಲಿ ಒಲಿಯುತ್ತೆ ಅಂತ ಹೇಳೋದು ಕಷ್ಟ. ಈ ಮಾತು ಸಿನಿ ರಂಗಕ್ಕೂ ಸರಿಯಾಗಿ ಹೊಂದುತ್ತದೆ. ಇಲ್ಲಿ ಯಶಸ್ಸು ಅನ್ನೋದು ಕೆಲವೊಬ್ಬರಿಗೆ ಮಾತ್ರ ಸಿಗುತ್ತದೆ. ಕಲರ್‍ಫುಲ್ ದುನಿಯಾಗೆ ಎಂಟ್ರಿಯಾಗಿ ಅದೆಷ್ಟೊ ವರ್ಷಗಳಾದ ಮೇಲೆ ಅದೃಷ್ಟ ಒಲಿದರೆ, ಇನ್ನು ಕೆಲವರಿಗೆ ರಾತ್ರೋ ರಾತ್ರಿ ಸ್ಟಾರ್ ಕಿರೀಟ ದಕ್ಕುತ್ತದೆ. ಹಾಗೇ ಬೇರೆ ಬೇರೆ ಭಾಷೆಗಳಲ್ಲಿ ಕಮಾಲ್ ಕೂಡ ಮಾಡ್ತಾರೆ.

ಕಿರಿಕ್ ಪಾರ್ಟಿ’ ಭರ್ಜರಿ ಯಶಸ್ಸಿನ ಬಳಿಕ, ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ‘ಚಮಕ್’ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ‘ಅಂಜನಿಪುತ್ರ’ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದರು.

‘ಚಲೋ’ ಚಿತ್ರದ ಮೂಲಕ ತೆಲುಗಿನಲ್ಲಿ ಖಾತೆ ಓಪನ್ ಮಾಡಿರುವ ರಶ್ಮಿಕಾ, ತಮ್ಮ ತೆಲುಗಿನ 2 ನೇ ಚಿತ್ರದಲ್ಲಿ ನಾಗಾರ್ಜುನ ಅವರೊಂದಿಗೆ ಅಭಿನಯಿಸಲಿದ್ದಾರೆ.

ನಾಗಾರ್ಜುನ ಹಾಗೂ ‘ಈಗ’ ಖ್ಯಾತಿಯ ನಾನಿ ಅವರೊಂದಿಗೆ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಅದ್ಧೂರಿ ವೆಚ್ಚದಲ್ಲಿ ಬಹುತಾರಾಗಣದಲ್ಲಿ ನಾಗಾರ್ಜುನ ಹೊಸ ಚಿತ್ರ ಮೂಡಿಬರಲಿದ್ದು, ರಶ್ಮಿಕಾ ಅವರು ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಅದೇನೆ ಇದ್ದರೂ, ಈ ಹಿಂದೆ ನಾಗಾರ್ಜುನ ಜೊತೆ ತೆರೆ ಹಂಚಿಕೊಂಡ ಬಹುತೇಕ ನಾಯಕಿಯರು ಯಶಸ್ಸಿನ ಹಾದಿ ಹಿಡಿದಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಕೂಡ ನಾಗಾರ್ಜುನ್ ಜೊತೆ ತೆರೆ ಹಂಚಿಕೊಳುತ್ತಾ ಇರೋದರಿಂದ ಅದೇ ರೀತಿಯ ದೊಡ್ಡ ನಿರೀಕ್ಷೆ ರಶ್ಮಿಕಾ ಅಭಿಮಾನಿಗಳಲ್ಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ