ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ
ವೈದ್ಯರು ಪ್ರಕಾರ ಸಾಮಾನ್ಯವಾಗಿ ಕಾಡುವ ನಿದ್ರಾಹೀನತೆಯಿಂದ ಭವಿಷ್ಯದಲ್ಲಿ ಮಾರಕ ಆರೋಗ್ಯ ದುಷ್ಪರಿಣಾಮಗಳು ಎದುರಾಗುತ್ತವೆ…
ಕೆಲುವು ವರದಿಗಳ ಪ್ರಕಾರ ದೀರ್ಘಕಾಲದ ನಿದ್ರಾಹೀನತೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ಹೇಳಲಾಗಿದೆ. ಅಂತೆಯೇ ಪುರುಷರಿಂಗಿಂತ ಹೆಚ್ಚಾಗಿ ಮಹಿಳೆಯರಿಗೇ ನಿದ್ರಾ ಹೀನತೆಯಿಂದ ಎದುರಾಗುವ ದುಷ್ಪರಿಣಾಮಗಳ ಅಪಾಯ ಹೆಚ್ಚಿದ್ದು, ಪುರುಷರಿಗಿಂತ ಬೇಗನೇ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಪದೇ ಪದೇ ಆನಾರೋಗ್ಯಕ್ಕೀಡಾಗುವವರಿಗಿಂತಲೂ, ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲೇ ಹೆಚ್ಚಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಂಭವ ಹೆಚ್ಚಿರುತ್ತದೆ. ತೀರಾ ತಡವಾಗಿ ನಿದ್ರೆ ಬರುವುದು, ಅರೆ ನಿದ್ರೆಯಲ್ಲೇ ಎಚ್ಚರವಾಗುವುದು, ಸಮಾಧಾನಕರವಲ್ಲದ ನಿದ್ರೆ ಮತ್ತು ಅಗತ್ಯಕ್ಕಿಂತ ಮೊದಲೇ ಅಂದರೆ ಮುಂಜಾನೆಯೇ ಎಚ್ಚರವಾಗುವುದು ಇವೆಲ್ಲವೂ ನಿದ್ರಾ ಹೀನತೆಯ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.
ಸುಮಾರು 160, 867 ಮಂದಿಯ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶೇ.27ರಷ್ಟು ಮಂದಿ ತಡವಾಗಿ ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದು, ಶೇ.11ರಷ್ಟು ಮಂದಿಯಲ್ಲಿ ನಿದ್ರೆ ಮಧ್ಯೆ ಎಚ್ಚರವಾಗುವ ಸಮಸ್ಯೆ ಕಂಡು ಬಂದಿದೆ. ಅಂತೆಯೇ ಶೇ.18ರಷ್ಟು ಮಂದಿಯಲ್ಲಿ ಅಗತ್ಯಕ್ಕೂ ಮೊದಲೇ ನಿದ್ರೆಯಿಂದ ಎಚ್ಚರವಾಗುವ ಸಮಸ್ಯೆ ಹೊಂದಿದ್ದಾರೆ. ಇಂತಹವರಲ್ಲಿ ಅತೀ ಬೇಗನೇ ಹೃದಯಾಘಾತವಾಗುವ ಅಪಾಯವಿದ್ದು, ಪಾರ್ಶ್ವವಾಯು ಸಂಭವ ಕೂಡ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿದ್ದೆಗೆಡುವುದು ಹೃದಯಾಘಾತಕ್ಕೆ ಕಾರಣವಾಗಿ ಬಳಿಕ ಸಾವು ಕೂಡ ಸಂಭವಿಸಬಹುದು ಎಂದು ಹೇಳಿದ್ದಾರೆ. ಅಂತೆಯೇ ಅತೀ ಕಡಿಮೆ ನಿದ್ರೆ ನಮ್ಮ ಮೆದುಳಿನ ಮೇಲೂ ಅಗಾಧ ದುಷ್ಪರಿಣಾಮ ಬೀರಿ ಪಾರ್ಶ್ವವಾಯುವಿಗೆ ದಾರಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಾಗಾದರೆ, ನೀವೇನಾದರೂ ನಿದ್ರಾ ಹೀನತೆಯಿಂದ ಬಳಲುತ್ತಿದ್ದಾರೆ ಆದಷ್ಟು ಬೇಗ ವೈದ್ಯರನ್ನು ಕಂಡು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಹೆಸರು ಟ್ರೋಲ್ ವಾಸಣ್ಣ. ಮೂಲತಃ ಮಲ್ಪೆಯವರಾದ ವಾಸು ಅವರಿಗೆ ಇದೀಗ ಸೈಬರ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಸು ಅವರು ರಾಜಕೀಯ ಪ್ರೇರಿತ ಮಾತುಗಳು, ರಾಜಕೀಯ ನಾಯಕರನ್ನು, ಪಕ್ಷಗಳನ್ನು ಅಪಹಾಸ್ಯ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗಾಗಿ ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಾಸು ಅವರನ್ನು ಕರೆಸಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ವಾಸು ಅವರಿಂದ ಕೆಲ ಕಿಡಿಗೇಡಿಗಳು…
ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.
ಈ ಭೂಮಿಮೇಲೆ ಹುಟ್ಟಿರುವ ಎಲ್ಲ ಜೀವಿಗಳಿಗೂ ನಿದ್ರೆ ಅತೀ ಅವಶ್ಯಕ. ನಿದ್ದೆ ಮಾಡುವುದರಿಂದ ಶರೀರ ಉತ್ತೇಜನಗೊಂಡು ,ಮಾರನೇ ದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಶಕ್ತಿ ಲಭಿಸುತ್ತದೆ. ನಿದ್ರಿಸುವುದರಿಂದ ಶರೀರಕ್ಕೆ ಇನ್ನೂ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ.
ಪಾನ್ ಕಾರ್ಡ್ಗೆ ಆಧಾರ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, 30 ಸೆಪ್ಟೆಂಬರ್ 2019 ಇದಕ್ಕೆ ಕೊನೆಯ ದಿನವಾಗಿದೆ. ಆಧಾರ್ ಜೊತೆ ಪಾನ್ ಕಾರ್ಡ್ ಅನ್ನು ನೀವೇ ಲಿಂಕ್ ಮಾಡಿಕೊಳ್ಳಲು ಇಲ್ಲಿದೆ ಎರಡು ಸುಲಭದ ಉಪಾಯ. ಮೊದಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ, ‘ಲಿಂಕಿಂಗ್ ಆಧಾರ್’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ವಿಂಡೋ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಜನ್ಮ ದಿನಾಂಕ ಇತ್ಯಾದಿ ಮಾಹಿತಿ…