ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಅಜ್ಜಿಗೆ ಬರೋಬ್ಬರಿ 80 ವರ್ಷ ವಯಸ್ಸು ಆದ್ರೂ ಇವರು ಛಲ ಬಿಡದೆ ಕೃಷಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇವರ ಒಂದು ಸಾಧನೆಯು ಪ್ರತಿಯೊಬ್ಬ ರೈತನಿಗೆ ಸ್ಫೂರ್ತಿ ಅನ್ನಬಹುದು .ಈ ಅಜ್ಜಿಯ ಹೆಸರು ಲಕ್ಷ್ಮೀಬಾಯಿ ಮಲ್ಲಪ್ಪ ಜುಲ್ಪಿ ಎಂಬುದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದವರು ಇವರಿಗೆ 80 ವರ್ಷ ವಯಸ್ಸು. ಮತ್ತೆ ಇವರಿಗೆ ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳಿದ್ದಾರೆ. ಈ ವಯಸ್ಸಿನಲ್ಲೂ ಕೂಡ ಇವರ ಕಾರ್ಯ ವೈಖರಿಯನ್ನು ನೋಡಿದರೆ ಎಂತವರಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಆ ರೀತಿಯಲ್ಲಿ ಕೃಷಿ ಚಟುವಟಿಕೆಯ ಕೆಲಸವನ್ನು ಮಾಡುತ್ತಾರೆ ಈ ಲಕ್ಶ್ಮಿಬಾಯಿ.
ಲಕ್ಶ್ಮಿಬಾಯಿಯವರು ತಮ್ಮ ತವರುಮನೆಯ ಸೋರಗಾಂವಿ ಗ್ರಾಮದಿಂದ ದೇಶೀಯ ಬದನೆ ತಳಿಗಳನ್ನ ತಂದು ತಮ್ಮ ಗಂಡನ ಮನೆಯಲ್ಲಿ ಬೆಳೆಯುವ ಮೂಲಕ ಅದ್ಭುತ ಸಾಧನೆಯನ್ನ ಮಾಡಿದ್ದಾರೆ. ಇವರು ಬೆಳೆಯುವಂತ ದೇಶಿಯ ಬದನಕಾಯಿಗೆ ಉತ್ತಮ ಮಾರ್ಕೆಟಿಂಗ್ ಇದ್ದು ಸುತ್ತ ಮುತ್ತಲಿನ ರೈತರೆಲ್ಲರೂ ಇವರನ್ನು ನೋಡಿ ಪ್ರೇರೇಪಿತರಾಗಿದ್ದರೆ ಎನ್ನಲಾಗುತ್ತದೆ.
ದಿನಾ ಬೆಳಗಾದರೆ ಸಾಕು ಎದ್ದು ದನಕರುಗಳಿಗೆ ನೀರು ಹಾಕೋದು, ಹೊಲಗದ್ದೆಗಳಲ್ಲಿ ಬದನೆಕಾಯಿಗಳ ಬೆಳೆ ನೋಡಿಕೊಳ್ಳೋದು ಮತ್ತು ದೇಶಿಯ ಬೀಜಗಳನ್ನ ಸಂರಕ್ಷಣೆ ಮಾಡೋದು ಹಾಗು ನಿತ್ಯವೂ ಕೃಷಿ ಕಾರ್ಯದಲ್ಲಿ ತೊಡಗುವಂತ ಕೆಲಸವನ್ನು ಮಾಡುತ್ತಾರೆ.
ಹೊಲದಲ್ಲಿ ಬದನೆಕಾಯಿ ಹೆಚ್ಚೋದು, ಬೆಳೆಗೆ ನೀರುಣಿಸೋದು, ಕಸ ಕೀಳೋದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅಲ್ಲದೆ ಹೊಲದಲ್ಲಿ ಕೆಲ್ಸ ಮಾಡೋರನ್ನ ತಮ್ಮ ಮಕ್ಕಳಂತೆ ನೋಡಿಕೊಳ್ತಾರೆ.
ಲಕ್ಷ್ಮೀಬಾಯಿಯವರು ಬೀಜ ಬ್ಯಾಂಕನ್ನು ತಮ್ಮ ಮನೆಯಲ್ಲಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಜಾತಿಯ ದೇಶಿಯ ತಳಿಗಳ ಬೀಜಗಳನ್ನ ಮಣ್ಣಿನ ಮಡಿಕೆಗಳಲ್ಲಿಟ್ಟು ಸಂರಕ್ಷಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು ಕೃಷಿ ಸಾಧನೆ ಮಾಡಿರೋ ಕುಟುಂಬದಲ್ಲಿ ಪತಿ ಮಲ್ಲಪ್ಪಗೆ ರಾಜ್ಯ ಪ್ರಶಸ್ತಿ, ಪುತ್ರ ರುದ್ರಪ್ಪಗೆ ಮಹಿಂದ್ರಾ ನ್ಯಾಷನಲ್ ಅವಾರ್ಡ, ಐಎಆರ್ಐ ಪ್ರಶಸ್ತಿಗಳು ಬಂದಿದ್ದು, ಇಡಿ ಕುಟುಂಬ ಕೃಷಿ ಸಾಧಕ ಕುಟುಂಬವಾಗಿ ಹೆಸರುವಾಸಿಯಾಗಿದೆ.
ಕಳೆದ ಹಲವು ವರ್ಷಗಳ ಸಾಧನೆ ಮತ್ತು ಬದನೆ ಸಂಶೋಧನೆಗಾಗಿ ನ್ಯೂ ದೆಹಲಿಯ ನ್ಯಾಷನಲ್ ಇನೋವೇಷನ್ ಪೌಂಡೇಶನ್ ವತಿಯಿಂದ ಪ್ರಶಸ್ತಿಗೂ ಭಾಜನರಾಗಿದ್ದು, ದೇಶಿಯ ತಳಿ ಸಂರಕ್ಷಣೆಗಾಗಿ 2015ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 6 ದಿನಗಳು ಬಾಕಿ ಉಳಿದಿವೆ. ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡಿದ್ದ ಅನುಪಮಾ ಗೌಡ ಭಾನುವಾರ ನಡೆದ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಮನೆಗೆ ಕಳುಹಿಸಲಾಗಿತ್ತು.
ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ
ದಿನೇ ದಿನೆ ರಾಜ್ಯ ರಾಜಕಾರಣ ಕುತೂಹಲ ಕೆರೆಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ರವರ ಕಿರಿಯ ಪುತ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಫೆಬ್ರವರಿ, 2019) ಇಂದು ನೀವು ಹೆಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ…
ದಿನಭವಿಷ್ಯ (27 ಫೆಬ್ರವರಿ, 2019) ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು ಬಾಕಿಯಿರುವಸಾಲಗಳನ್ನು ಸಂಗ್ರಹಿಸಬಹುದು ಅಥವಾ…
ಹಕ್ಕಿ ಜ್ವರದ ಸೋಂಕು ಗಾಳಿಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಆದರೆ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕಲ್ಲ.ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಏನ್1 ವೈರಸ್ನಿಂದ ಹರಡುವ ರೋಗವಾಗಿದೆ.ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್ಫ್ಲೂಯೆನ್ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ.