ಸಿನಿಮಾ

ನಿಮ್ಮ ಮನೆ ಮನೆಗೆ “ಕಿಲಾಡಿ ಕುಟುಂಬ” ಬರುತ್ತಿದೆ! ಏನು ಅಂತ ಗೊತ್ತಾಗಬೇಕಾದರೆ ಈ ಲೇಖನಿ ಓದಿ……

722

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್‌ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿಸಿದ್ದ 10 ಜನ ಫೈನಲಿಸ್ಟ್‌ ಗಳು ಮತ್ತೂಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ಅಂದ ಆಗೇ ಆ ಕಾರ್ಯಕ್ರಮದ ಹೆಸರು “ಕಿಲಾಡಿ ಕುಟುಂಬ” ವಿಶೇಷವಾಗಿ ನವರಸನಾಯಕ ಜಗ್ಗೇಶ್‌ ಅವರು ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದ ಜಗ್ಗೇಶ್‌ ಅವರು ಇಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಅಲ್ಲದೆ, ಇವರೊಂದಿಗೆ ವಿಶೇಷವಾಗಿ ಡ್ರಾಮಾ ಜ್ಯೂನಿಯರ್, ಲಿಟ್ಲ ಚಾಂಪಿಯನ್ಸ್‌, ಸರಿಗಮಪ ಹಾಗೂ ಜೀ ಕುಟುಂಬದ ಬಹುತೇಕ ಸದಸ್ಯರು ಈ ಕಿಲಾಡಿ ಕುಟುಂಬದಲ್ಲಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇವರಿಗೆಲ್ಲ ಕ್ಯಾಪ್ಟನ್‌ ಬೇರಾರೂ ಅಲ್ಲ, ನಟ ಜಗ್ಗೇಶ್‌! ಜೂನ್‌ 12ರ ಸೋಮವಾರದಿಂದ ಆರಂಭವಾಗಲಿರುವ ಈ ರಿಯಾಲಿಟಿ ಶೋ ಈವರೆಗೆ ಪ್ರಸಾರಗೊಂಡ ಕಾಮಿಡಿ ಕಾರ್ಯಕ್ರಮಗಳೆಲ್ಲವುಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಂತೆ ಇದು ಕೂಡ ಪ್ರೇಕ್ಷಕರನ್ನು ರಂಜಿಸಲೆಂದೇ ನಿರೂಪಿಸುತ್ತಿರುವ ಶೋ ಆಗಿದೆ. ಆದರೆ, ಈ ಬಾರಿ ವಿಶೇಷವಾಗಿ ಕಾಮಿಡಿಯ ಜೊತೆಗೆ ಎಲ್ಲಾ ಬಗೆಯ ನವರಸಗಳನ್ನು ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಶೋನಿಂದ ನಡೆಯುತ್ತಿದೆ.

ಎಂದಿನಂತೆ ನಾಡಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಎಲ್ಲಾ ತಯಾರಿಯೂ ನಡೆದಿದೆ. ಇದರ ಜೊತೆಗೆ, ದಿನದಿಂದ ದಿನಕ್ಕೆ ಮರೆಯಾಗುತ್ತಿರುವ ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಹುಡುಕಿ ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಹೊಸ ಪ್ರಯತ್ನವನ್ನು ಜೀ ವಾಹಿನಿ ತಂಡ ಕೈಗೆತ್ತಿಕೊಂಡಿದೆ.

ವಿಶೇಷವೆಂದರೆ ನವರಸ ನಾಯಕ ಜಗ್ಗೇಶ್‌ ಅವರೊಂದಿಗೆ, ಕಾಮಿಡಿ ಕಿಲಾಡಿಗಳ ವಿಜೇತರಾದ ಶಿವರಾಜ್‌ ಕೆ.ಆರ್‌. ಪೇಟೆ ಹಾಗೂ ನಯನ ಕೂಡ ನಿರೂಪಣೆಯ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಜೂ.12ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7 ರಿಂದ 7.30ರ ವರೆಗೆ ಕಿಲಾಡಿ ಕುಟುಂಬ ಪ್ರಸಾರವಾಗಲಿದೆ. ಈ ಕಿಲಾಡಿ ಕುಟುಂಬ ವಾರದ 5 ದಿನವೂ ಪ್ರಸಾರವಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಭಾರತೀಯ ಮಹಿಳೆಯರು ಆಭರಣಗಳನ್ನು ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು ಗೊತ್ತಾ…? ಈ ಲೇಖನ ಓದಿ…

    ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.

  • ಸುದ್ದಿ

    ಕೊಡಗಿನಲ್ಲಿ ಕಂಪಿಸಿದ ಭೂಮಿ, ಜಲ ಪ್ರಳಯಕ್ಕೆ ಸಿಲುಕಿದ ಜನರು…!

    ಮಡಿಕೇರಿ, ಮೇ 26: ಕೊಡಗಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ (ಮಡಿಕೇರಿ ಭಾಗ) ಭೂಮಿ ಕಂಪಿಸಿದ ಅನುಭವವಾಗಿತ್ತು. ಜತೆಗೆ ನಿಗೂಢ ಶಬ್ದ ಕಿವಿಗೆ ಬಡಿದಿತ್ತು. ಅದಾದ ಬಳಿಕ ಆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಏನಾಯಿತು ಎಂಬುದು ಎಲ್ಲರ ಮುಂದಿದೆ. ಈ ಬಾರಿ ಮತ್ತೆ ಭೂಮಿ ಕಂಪಿಸಿದ್ದು, ಅದು ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿನತ್ತ ವರ್ಗಾವಣೆಗೊಂಡಿದೆ. ಇದು ಭಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ, ಜಲಪ್ರಳಯವಾಗಿ ಭಾರೀ ಅನಾಹುತ…

  • ಕರ್ನಾಟಕ

    ಮೆಜೆಸ್ಟಿಕ್ ನಲ್ಲಿ ಬೇಬಿ ಸಿಟ್ಟಿಂಗ್ ವ್ಯವಸ್ಥೆಗೆ ಮೆಟ್ರೋ ನಿರ್ಧಾರ …!ಹೊಸ ಯೋಜನೆಯ ಬಗ್ಗೆ ತಿಳಿಯಲು ಈ ಲೇಖನ ಓದಿ….

    ಬೆಂಗಳೂರಿನ ಜನರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿರುವ ನಮ್ಮ ಮೆಟ್ರೋ ಇನ್ನು ಮುಂದೆ ಇನ್ನಷ್ಟು ಹತ್ತಿರವಾಗಲಿದೆ. ಡಿಸೆಂಬರ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ‌ ಬೋಗಿ ಸಹ ಆರಂಭವಾಗಲಿದೆ‌.

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(21 ಡಿಸೆಂಬರ್, 2018) ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ…

  • Health, ಆರೋಗ್ಯ, ಉಪಯುಕ್ತ ಮಾಹಿತಿ

    ಸೇಬುಗಳ ಕುರಿತ೦ತೆ ಪ್ರಮುಖವಾದ ಕೆಲವು ಆರೋಗ್ಯ ಸ೦ಬ೦ಧಿ ಪ್ರಯೋಜನಗಳು!!

    ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ  ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರದ ಹಣ್ಣು  ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು. ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ…

  • ಆರೋಗ್ಯ, ಉಪಯುಕ್ತ ಮಾಹಿತಿ, ಜೀವನಶೈಲಿ

    ನಿಂತ್ಕೊಂಡು ನೀರು ಕುಡಿದ್ರೆ, ಏನಾಗುತ್ತೆ ಗೊತ್ತಾ??? ಮುಂದೆ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ನಿಂತ್ಕೊಂಡು ನೀರು ಕುಡಿತೀರಾ, ಹಾಗಾದರೆ ಇಲ್ನೋಡಿ ವಿಜ್ಞಾನಿಗಳು ಹೇಳಿರೋ ಪ್ರಕಾರ , ಈ ಕಾರಣಗಳ್ನ ಓದಿದ್ರೆ ಶಾಕ್ ಆಗೋದು ಖಂಡಿತ. ಓದಿ ನೋಡಿ. ಎಷ್ಟು ನೀರು ಕುಡಿದ್ರೂ ಇನ್ನೂ ಕುಡೀತಾನೇ ಇರ್ಬೇಕು ಅನ್ಸುತ್ತೆ :- ನಿಂತು ನೀರು ಕುಡಿದ್ರೆ ಬಾಯಾರಿಕೆ ಹೋಗೋದಿಲ್ಲ. ಆಗಾಗ ನೀರು ಕುಡೀತಾನೇ ಇರ್ಬೇಕು ಅನ್ಸುತ್ತೆ. ಎಷ್ಟು ಕುಡಿದ್ರೂ ಉಪಯೋಗ ಇಲ್ಲ. ಅಜೀರ್ಣ ಆಗುತ್ತೆ :- ಕೂತು ನೀರು ಕುಡೀವಾಗ ನಿಮ್ ದೇಹ ರಿಲ್ಯಾಕ್ಸ್ ಆಗಿರುತ್ತೆ, ಆಗ ತಿಂದಿದ್ದು, ಕುಡ್ದಿದ್ದು ಸುಲಭವಾಗಿ ಜೀರ್ಣ ಆಗುತ್ತೆ….