ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜಕೀಯ, ರಾಜಕಾರಣಿಗಳು ಎಂದರೆ ಸಾಕು, ಎಲ್ಲರೂ ಹೇಳುವುದು ಒಂದೇ…ಇವರೆಲ್ಲಾ ಎಷ್ಟು ಸಾಚಾ ಅಂತ ಯಾರಿಗೆ ತಾನೇ ಗೊತ್ತಿಲ್ಲಾ ಅಂತಲೇ ಹೇಳುತ್ತಾರೆ.ಯಾಕಂದ್ರೆ ಸ್ವತಹ ರಾಜಕಾರಣಿಗಳೇ ಒಬ್ಬರ ಮೇಲೆ ಒಬ್ಬರು, ಅವರು ಅಷ್ಟು ಆಸ್ತಿ ಮಾಡಿದ್ದಾರೆ, ಇವರು ಇಷ್ಟು ಕೋಟಿ ಹೊಡೆದಿದ್ದಾರೆ ಅಂತ ಅಪಾದನೆ ಮಾಡುವವರು ತುಂಬಿ ಹೋಗಿದ್ದಾರೆ.

ಇದೆರೆಲ್ಲದರ ನಡುವೆ ಇಂತಹ ಕಾಲದಲ್ಲಿಯೂ ಪ್ರಾಮಾಣಿಕ ರಾಜಕಾರಣಿಗಳು ಇದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.ಆದರೆ ಅಂತಹ ವ್ಯಕ್ತಿಗಳು ಇದ್ದಾರೆ. ಅವ್ರು ಬೇರೆ ಯಾರೂ ಅಲ್ಲ 20 ವರ್ಷಗಳಿಂದ ಯಾವ ಪಕ್ಷವೂ ಸೋಲಿಸಲಾಗದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್.
ಇವ್ರು ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.ಆದರೆ ಇತ್ತೀಚಿಗೆ ತಾನೇ ನಡೆದ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಮಾಣಿಕ್ ಸರ್ಕಾರ್ ಸೋತು, ಈಗ ಪಕ್ಷದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಬರೋಬ್ಬರಿ 20 ವರ್ಷ ತ್ರಿಪುರಾ ರಾಜ್ಯದ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ ಮಾಣಿಕ್ ಸರ್ಕಾರ್.ಅಂದ ಹಾಗೆ ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರೂ ಇವರ ಹತ್ತಿರ ವಾಸಿಸಲು ಒಂದು ಸ್ವಂತ ಮನೆ ಕೂಡ ಇಲ್ಲ.ಹಾಗಾಗಿ ಇವರು ತಾವು ಮುಖ್ಯಮಂತ್ರಿಯಾಗಿದ್ದಾಗ ಇದ್ದ ಮನೆಯನ್ನು ಖಾಲಿ ಮಾಡಿ,ಈಗ ತಮ್ಮ ಪಕ್ಷದ ಅತಿಥಿ ಗೃಹದಲ್ಲಿ ವಾಸ್ತವ್ಯಹೂಡಿದ್ದಾರೆ.

ಸಿಪಿಎಂ ಪಕ್ಷದ ನಾಯಕ ಬಿಜನ್ ಧಾರ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮತ್ತು ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯರೊಂದಿಗೆ ಪಕ್ಷದ ಕಚೇರಿ ಅತಿಥಿ ಗೃಹದಲ್ಲಿ ವಾಸಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಮ್ಮ ಇಡೀ ಜೀವನದಲ್ಲಿ ಕೇವಲ 900 ಚದರ ಅಡಿ ಆಸ್ತಿಯನ್ನ ಮಾತ್ರ ಸಂಪಾದನೆ ಮಾಡಿದ್ದು, ಅದನ್ನೂ ಕೂಡ ತಮಗೆ ಮಕ್ಕಳಿಲ್ಲದ ಕಾರಣ ತಮ್ಮ ಬಂದುಗಳಿಗೆ ಕೊಟ್ಟುಬಿಟ್ಟಿದ್ದಾರೆ.

ಯಾವುದೇ ಕಾರ್ ಮತ್ತು ಮೊಬೈಲ್ ಕೂಡ ಹೊಂದಿಲ್ಲದ ಇವರು ತನಗೆ ಸರ್ಕಾರದಿಂದ ಬರುತ್ತಿದ್ದ ಸಂಬಳವನ್ನು ಪಕ್ಷಕ್ಕೆ ನೀಡಿ ಪಕ್ಷದಿಂದ ಕೊಡುವ ಸುಮಾರು 10 ಸಾವಿರ ರೂಪಾಯಿಗಳಿಂದ ಜೀವನ ನಡೆಸುತ್ತಿದ್ದರು.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದ ಪ್ರಕಾರ ಇವರು ಯಾವುದೇ ಬಂಗಲೆ,ಕಾರು,ಆಸ್ತಿ,ಮನೆಯನ್ನು ಹೊಂದಿಲ್ಲದ ಇವರ ಬಳಿ 1,520 ರೂ. ಹಣವಿದ್ದು ಮತ್ತು 2,410 ರೂ. ಎಸ್‍ಬಿಐ ಬ್ಯಾಂಕ್ ಖಾತೆಯಲ್ಲಿ ಇದೆ ಎಂದು ಚುನಾವಣಾ ಸಮಯದಲ್ಲಿ ಅಫಿಡೆವಿಟ್ ಸಲ್ಲಿಸಿದ್ದರು. 2013 ರಲ್ಲಿ ಬ್ಯಾಂಕ್ ಖಾತೆಯಲ್ಲಿ 9,720 ರೂ. ಇತ್ತು ಎಂದು ಉಲ್ಲೇಖಿಸಿದ್ದರು.
ಏನೇ ಆದರೂ ಒಂದು ಅಂತೂ ಸತ್ಯ ಆಗಿದೆ.ಪ್ರಾಮಾಣಿಕರಿಗೆ ಇದು ಕಾಲ ಅಲ್ಲ….

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಅಮೂಲ್ಯವಾದುದನ್ನು ಸಂರಕ್ಷ ಣೆ ಮಾಡಿಕೊಳ್ಳಿ. ಏಕಾಗ್ರತೆ ಕೊರತೆಯಿಂದ ನಷ್ಟಕ್ಕೆ ದಾರಿ ಮಾಡಿಕೊಳ್ಳದಿರಿ. ಯಾವುದೇ ಗುರುವಿನ ಮಂತ್ರವನ್ನು ಮನಸ್ಸಿನಲ್ಲಿ ಏಕಾಗ್ರತೆಯಿಂದ ನೆನಪಿಸಿಕೊಳ್ಳಿ. ಒಳಿತಾಗುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ…
ಹಲವಾರು ವಾರಗಳ ಹಿಂದೆ ತೈಲ ಬೆಳೆಗಳ ದರ ಏಳ ಎಗ್ಗಿಲ್ಲದೆ ಏರುತ್ತಲೇ ಇತ್ತು. ಈಗ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಇಳಿಕೆಯಗುತ್ತಿದೆ.ಭಾನುವಾರವಷ್ಟೇ 20 ಪೈಸೆ ಯಷ್ಟು ಕಡಿಮೆಯಾಗಿದೆ.ಒಟ್ಟಾರೆಯಾಗಿ ಇಲ್ಲಿಯವರೆಗೆ 7 ರುಪಾಯಿ 29 ಪೈಸೆ ಕಡಿಮೆಯಾಗಿದೆ.ಇದು ಆಗಸ್ಟ್ ೧೬ಕ್ಕೆ ಇದ್ದ ದರಕ್ಕೆ ಈಗ ತಲುಪಿದೆ. ಇದರ ಜೊತೆಗೆ ಡೀಸೆಲ್ ಬೆಲೆ ಕೂಡ ಲೀಟರ್ಗೆ 18 ಪೈಸೆ ಕಡಿಮೆಯಾಗಿದ್ದು 29 ದಿನಗಳಲ್ಲಿ ೩ರುಪಾಯಿ ೮೯ ಪೈಸೆ ಕಡಿಮೆಯಾಗಿದೆ. ಆಗಸ್ಟ್ ೧೫ಕ್ಕೆ ಹೋಲಿಸಿದ್ದಲ್ಲಿ ಆಗ ರಾಷ್ಟ್ರ ರಾಜಧಾನಿ…
ಮನುಧ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಹೇಳಲಾಗುತ್ತೆ. ಆದ್ರೆ ಅಂತಹ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲೇಬಾರದು.ಅದರಲ್ಲೂ ಕೆಲವೊಂದು ಕಾಯಿಲೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರಕೆ ಇಂದ ಇರಲೇ ಬೇಕು. ಆದರೆ ಅನೇಕರಿಗೆ ಯಾವುದೇ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಗಾಬರಿಯಿಂದ ಮಾಡಲು ಹೋಗುವುದಿಲ್ಲ.ಆದರೆ ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. *ಹಾರ್ಟ್…
ಕಾಂಗ್ರೆಸ್ಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
ನೀಲ್ಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಈ ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಈ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಇದಕ್ಕೆ ತಜ್ಞರು ಏನು ಹೇಳುತ್ತಾರೆ ನೋಡಿ.
ಒಂದೇ ಸ್ಟ್ರೆಚರ್ನಲ್ಲಿ ಪುರುಷ ರೋಗಿ ಜೊತೆ ಎಕ್ಸ್ ರೇ ರೂಮಿಗೆ ಹೋಗುವಂತೆ ಮಹಿಳೆಗೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ಇರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನಡೆದಿದೆ.ಸಂಗೀತಾ ಪುರುಷ ರೋಗಿ ಜೊತೆ ಸ್ಟ್ರೆಚರ್ ಹಂಚಿಕೊಂಡ ಮಹಿಳೆ. ಸಂಗೀತಾ ಕಳೆದ 12 ದಿನಗಳ ಹಿಂದೆ ಬಲಗಾಲು ಫ್ರ್ಯಾಕ್ಚರ್ ಆಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಎಕ್ಸ್ ರೇ ರೂಮಿಗೆ ಕರೆದುಕೊಂಡು ಹೋಗಬೇಕಾದರೆ ಸ್ಟ್ರೆಚರ್ ಇಲ್ಲವೆಂದು ಪುರುಷ ರೋಗಿಯಿದ್ದ ಸ್ಟ್ರೆಚರ್ನಲ್ಲಿ ಹೋಗುವಂತೆ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ….