ಸುದ್ದಿ

ಕೋತಿಯನ್ನು ಈ ಶ್ರೀಮಂತ ದಂಪತಿಗಳು ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕುತ್ತಿದ್ದಾರೆ.!ಏಕೆ ಗೋತಾ.?ತಿಳಿಯಲು ಈ ಲೇಖನ ಓದಿ…

91

ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.

ಮಂಗಕ್ಕೆ ಎಸಿ ಕೊಠಡಿ ನಿರ್ಮಿಸಿ ಮಗನಂತೆ ನೋಡಿಕೊಳ್ಳುತ್ತಿರುವುದಕ್ಕೆ ಹಲವರು ನಮ್ಮನ್ನು ಹುಚ್ಚರೆಂದು ಕರೆಯುತ್ತಾರೆಂದು ಹೇಳುವ ದಂಪತಿಗಳು, ಇದಕ್ಕೆ ತಾವು ತಲೆ ಕೆಡಿಸಿಕೊಳ್ಳುವುದಿಲ್ಲವೆಂದಿದ್ದಾರೆ. ತಮ್ಮ ನಿಧನ ನಂತರವೂ ಚುನ್ಮುನ್ ಸುಖವಾಗಿರಬೇಕೆಂಬ ಕಾರಣಕ್ಕೆ ಈಗಲೇ ಅದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಟ್ಟಿದ್ದಾರೆ. ಚುನ್ಮುನ್ ಗೆ ಚೈನೀಸ್ ಆಹಾರ ಇಷ್ಟವೆಂದು ಹೇಳುವ ದಂಪತಿಗಳು ಚುನ್ಮುನ್ ಗೆ ಸಂಗಾತಿಯನ್ನೂ ಹುಡುಕಿ ಕೊಟ್ಟಿದ್ದಾರೆ.

ಟ್ರಸ್ಟ್ ಒಂದನ್ನು ಸ್ಥಾಪಿಸಿರುವ ದಂಪತಿಗಳು ತಮ್ಮ ಮರಣದ ಬಳಿಕ ಎಲ್ಲಾ ಆಸ್ತಿಯನ್ನು ಈ ಟ್ರಸ್ಟ್ ಗೆ ಹೋಗುವ ವ್ಯವಸ್ಥೆ ಮಾಡಿದ್ದಾರೆ. ಅದರಿಂದ ಬರುವ ಹಣದಲ್ಲಿ ಮಂಗಗಳನ್ನು ಸಂರಕ್ಷಣೆ ಮಾಡಬೇಕೆಂಬುದು ಈ ದಂಪತಿಗಳ ಹೆಬ್ಬಯಕೆ. ತಮ್ಮ ದತ್ತು ಪುತ್ರ ಚುನ್ಮುನ್ ನನ್ನು ಹೆತ್ತ ಕಂದನಂತೆ ಪ್ರೀತಿಸುತ್ತಿರುವ ದಂಪತಿಗಳು ತಮ್ಮ ಸಿರಿ ಸಂಪತ್ತಿಗೆಲ್ಲ ಚುನ್ಮುನ್ ಕಾರಣವೆಂದು ಬಲವಾಗಿ ನಂಬಿದ್ದಾರೆ.

ಹಿಂದೂವಾದ ಬ್ರಿಜೇಶ್, ಮುಸ್ಲಿಂ ಯುವತಿ ಶಬೀಸ್ತಾ ಅವರನ್ನು ಮದುವೆಯಾದ ಕಾರಣಕ್ಕಾಗಿ ಇಬ್ಬರ ಕುಟುಂಬದವರೂ ಅವರನ್ನು ಹಲವಾರು ವರ್ಷಗಳ ಹಿಂದೆಯೇ ದೂರ ಮಾಡಿದ್ದರು. ಈ ವೇಳೆ ಈ ಮಂಗ ಅವರ ಪಾಲಿನ ಅದೃಷ್ಟದ ಸಂಕೇತದಂತೆ ಬಂದಿತಂತೆ. ಚುನ್ಮುನ್ ಎಂದು ಇದಕ್ಕೆ ದಂಪತಿಗಳು ಹೆಸರಿಟ್ಟಿದ್ದು ಚುನ್ಮುನ್ ಬಂದ ಮೇಲೆಯೇ ತಮಗೆ ಶ್ರೀಮಂತಿಕೆ ಬಂದಿತೆಂದು ದಂಪತಿಗಳು ಹೆಮ್ಮೆಯಿಂದ ಹೇಳುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರಪಂಚದಲ್ಲೇ ಅತಿ ದುಬಾರಿ ಚಾಕೊಲೇಟ್ ಇದರ ಬೆಲೆ ಕೇಳಿದರೆ ಶಾಕ್ ಆಗ್ತೀರಾ..!

    ದೀಪಾವಳಿಯ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ವ್ಯವಹರಿಸುವ ಐಟಿಸಿ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಅನ್ನು ಬಿಡುಗಡೆ ಮಾಡಿದೆ. ಚಾಕೊಲೇಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು 4.3 ಲಕ್ಷ ರೂ. ಕಂಪನಿಯು ಫೇಬಲ್ ಬ್ರಾಂಡ್ನೊಂದಿಗೆ ಚಾಕೊಲೇಟ್ ಅನ್ನು ಪರಿಚಯಿಸಿದೆ. ದುಬಾರಿ ಚಾಕೊಲೇಟ್ ವಿಷಯದಲ್ಲಿ, ಐಟಿಸಿಯ ಈ ಉತ್ಪನ್ನವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರಿಕೊಂಡಿದೆ.  ಇಂತಹ ದುಬಾರಿ ಚಾಕೊಲೇಟ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವುದು ಇದೇ ಮೊದಲೇನಲ್ಲ. ಈ ಮೊದಲು 2012 ರಲ್ಲಿ, ಡೆನ್ಮಾರ್ಕ್‌ನ ಕುಶಲಕರ್ಮಿ ಚಾಕೊಲೇಟಿಯರ್ ಫ್ರಿಟ್ಜ್ ನಿಪ್ಸ್‌ಚೈಲ್ಡ್…

  • ಹಣ

    ಇವುಗಳನ್ನು ಪಾಲಿಸಿದ್ರೆ ನೀವೂ ಸಹ ಕೋಟ್ಯಾಧಿಪತಿ ಆಗಬಹುದು!ಹೇಗೆ ಅಂತೀರಾ?ಈ ಲೇಖನಿ ಓದಿ…

    ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು.

  • ರಾಜಕೀಯ

    5ಸಾವಿರ ಜನ ಸೇರಿಸಿ ಸಮಾವೇಶ ಮಾಡಿ-ರಮೇಶ್‌ಕುಮಾರ್‌ಗೆ ವರ್ತೂರು ಪ್ರಕಾಶ್ ಸವಾಲ್

    ಘಟಬಂಧನ್ ನಾಯಕರು ಅವರ ಕ್ಷೇತ್ರದಲ್ಲಿ ಈ ಬಾರಿ ಅಡ್ರೆಸ್‌ಗೆ ರ‍್ತಾರಾ-ಚಿಂತನೆ ಮಾಡಲಿ ಕೋಲಾರ:- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕರೆತರುವ ಮುನ್ನ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್‌ರ ಘಟಬಂಧನ್ ತಂಡ ಕೋಲಾರದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡಿ ತೋರಿಸಲಿ, ಅವರ ಕ್ಷೇತ್ರಗಳಲ್ಲಿ ಅವರು ಅಡ್ರೆಸ್‌ಗೆ ರ‍್ತಾರ ಆಲೋಚಿಸಲಿ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಸವಾಲು ಹಾಕಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ…

  • ಸುದ್ದಿ

    ರಾಮ..ರಾಮ..ಮತ್ತೆ ಭಗವಾನ್ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಕ್ತರ ಕೆಂಗಣ್ಣಿಗೆ ಗುರಿಯಾದ ಪ್ರೊಫೆಸರ್ ಭಗವಾನ್..!

    ತಾವು ಬುದ್ದಿವಂತರು ವಿಚಾರವಾದಿಗಳು ಅಂತ ಹೇಳಿಕೊಳ್ಳುವ ಕೆಲವರು ಹಿಂದೂ ದೇವತೆಗಳನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡುಬಿಟ್ಟಿದ್ದಾರೆ. ಅವರಲ್ಲಿ ಒಬ್ಬರು ಪ್ರೊಫೆಸರ್ ಭಗವಾನ್. ಯಾವಾಗಲೂ ಹಿಂದೂ ದೇವತೆಗಳ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ವಿವಾದಾತ್ಮಕ ಕೊಟ್ಟು ಸುದ್ದಿಯಾಗುವ ಇವರು ಈಗ ಮತ್ತೊಂದು ವಿವಾದದ ಸುದ್ದಿಯಲ್ಲಿದ್ದಾರೆ. ವಿಚಾರವಾದಿ ಆಗಿರುವ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸಿ, ಭಕ್ತರ ಭಾವನೆಗಳನ್ನು ಕೆರಳಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರೊಫೆಸರ್ ಭಗವಾನ್‍ರವರು…

  • ಮನರಂಜನೆ, ಸುದ್ದಿ

    ಬಿಗ್ ಬಾಸ್ ಶಾಕಿಂಗ್ ಸುದ್ದಿ.!ರವಿ ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ..!ಹಾಗಾದ್ರೆ ಕೊನೆಯ ಸ್ಪರ್ಧಿ ಯಾರು?

    ಬಿಗ್ ಬಾಸ್ ಶಾಕಿಂಗ್ ಸುದ್ದಿ ಮನೆಯಿಂದ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕುರಿತಂತೆ ಬಿಗ್ ಬಾಸ್ ಸುದ್ದಿಯನ್ನು ನೀಡಿದೆ. ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ. ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ ಅವರ ವೋಟಿಂಗ್ ಸಹ ಬಂದ್ ಆಗಲಿದೆ. ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ…

  • ಸುದ್ದಿ

    ಅಯೋಧ್ಯೆ ತೀರ್ಪಿಗೆ 27 ವರ್ಷ ಉಪವಾಸ ಮಾಡಿ ಕಾದ ಆಧುನಿಕ ಶಬರಿ.

    ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ…