ಜ್ಯೋತಿಷ್ಯ

ದಿನ ಭವಿಷ್ಯ ಶನಿವಾರ…ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

199

ಇಂದು ಶನಿವಾರ, 10/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ನ್ಯಾಯಾಲಯದ ವಿವಾದಗಳು ನಿಮಗೆ ಯಶಸ್ಸು ತರಲಿವೆ. ಆಗಾಗ ಧನ ಲಾಭದಿಂದ ಕಾರ್ಯಾನುಕೂಲವಾಗುತ್ತದೆ. ಈ ದಿನ ಹರ್ಷದಾಯಕವಾಗಿದ್ದು, ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರ. ಹೊಸ ಯೋಜನೆಗಳ ಬಗ್ಗೆ ಬಂದ ಸಲಹೆಗಳನ್ನು ನಿರಾಕರಿಸದಿರಿ. ಮಿತ್ರರಿಂದ ಸಕಾಲಿಕ ಸಲಹೆ. ಉತ್ತಮ ಆರೋಗ್ಯಭಾಗ್ಯ. ವೃತ್ತಿ-ಉದ್ಯೋಗದಲ್ಲಿ ಬದಲಾವಣೆ ತಂದೀತು. ಸಾಂಸಾರಿಕ ಸ್ಥಿತಿ ಉತ್ತಮ.

ವೃಷಭ:-

ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನ. ಉದ್ಯೋಗಾಕಾಂಕ್ಷಿಗಳಿಗೆ ಜೀವನದಲ್ಲಿ ಸಂತಸ ತರುವ ದಿನ. ಕುಲದೇವತಾ ಆರಾಧನೆಯಿಂದ ಯಶಸ್ಸು. ಪಿತ್ರಾರ್ಜಿತ ಆಸ್ತಿ-ಸ್ವತ್ತುಗಳ ತಕಾರರು ಕಿರಿಕಿರಿ ತಂದೀತು. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದೀತು. ನವದಂಪತಿಗಳಿಗೆ ಸಂತಾನ ಭಾಗ್ಯದ ಕುರುಹು ತೋರಿ ಬರಲಿದೆ.

ಮಿಥುನ:

ದೇಹಾರೋಗ್ಯದ ಬಗ್ಗೆ ಆಗಾಗ ಗಮನ ಹರಿಸಬೇಕು. ಆಗಾಗ ತಾಪತ್ರಯಗಳು ತೋರಿ ಬಂದರೂ ದೈವಾನುಗ್ರಹ ಕಾಪಾಡಲಿದೆ. ಸಮಸ್ಯೆಗಳನ್ನು ನಿರಾಯಾಸವಾಗಿ ಪರಿಹರಿಸಿಕೊಳ್ಳಲಿದ್ದೀರಿ. ಯಾವುದೇ ವಿಚಾರದಲ್ಲಿ ರಾಜಿಯಾಗದ ಮನಸ್ಥಿತಿ. ಪ್ರೀತಿಪಾತ್ರರಿಂದ ಸಮಯೋಚಿತ ಭರವಸೆಯ ಬಲ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಬಂಡವಾಳ ಹೂಡಿಕೆಗಳ ಬಗ್ಗೆ ಜಾಗ್ರತೆಯಿಂದ ವ್ಯವಹರಿಸಬೇಕು.

ಕಟಕ :-

ಉದ್ಯೋಗದಲ್ಲಿ ಬಡ್ತಿ, ಪ್ರಗತಿ ಸಾಧ್ಯತೆ. ಕುಟುಂಬದ ಸದಸ್ಯರೊಂದಿಗೆ ಸಂತಸದ ದಿನ ಕಳೆಯುವಿರಿ. ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ವೆಚ್ಚಗಳು ಮಿತಿ ಮೀರಲಿವೆ. ಗೊಂದಲದ ಪರಿಸ್ಥಿತಿಯಿಂದ ಆತಂಕಕ್ಕೆ ಕಾರಣವಾಗಲಿದೆ. ಅನಾವಶ್ಯಕವಾಗಿ ಖರ್ಚು ಹಿತೈಷಿಗಳ ಆಗಮನ ಸಾಧ್ಯತೆ. ಕುಟುಂಬದ ಕಲಹಗಳಿಂದ ದೂರವಿದ್ದಷ್ಟು ಉತ್ತಮ. ಕೋಪತಾಪಗಳಿರುತ್ತವೆ.

 ಸಿಂಹ:

ಬಂಧುಮಿತ್ರರ ಆಗಮನದಿಂದ ಸಂತಸ ತಂದೀತು. ಪದೇ ಪದೇ ವಿಘ್ನ ಭಯದಿಂದಾಗಿ ಕಾರ್ಯಸಾಧನೆಗೆ ಅನನುಕೂಲವಾದೀತು. ಶ್ರಮ ವಹಿಸಿದ ನಿಮ್ಮ ಕಾರ್ಯಗಳಲ್ಲಿ ಶೀಘ್ರಗತಿಯಲ್ಲಿ ಯಶಸ್ಸು. ಬಹುದಿನಗಳ ವ್ಯವಹಾರಗಳು ಪ್ರಯತ್ನದಿಂದ ನೆರವೇರಲಿವೆ. ಅಧಿಕ ವೆಚ್ಚ ಭರಿಸಬೇಕಾದೀತು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶಕ್ಕಾಗಿ ಪ್ರಯತ್ನಿಸಬೇಕಾಗುತ್ತದೆ.  ಮನೆಯವರೊಂದಿಗೆ ಸಂತಸದ ಕ್ಷಣ.

ಕನ್ಯಾ :-

ಸೂಕ್ತ ಸಲಹೆಗಳಿಂದ ಮುನ್ನಡೆ ತೋರಿ ಬಂದೀತು. ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಸಾಧ್ಯತೆ ಇರುತ್ತದೆ. ಮಂಡಿ ನೋವು, ಸಂದು ನೋವುಗಳಿಂದ ಬಳಲುವ ಸಾಧ್ಯತೆ. ವೈದ್ಯಕೀಯ ವೆಚ್ಚ ಭರಿಸಬೇಕಾದೀತು. ಕುಲದೇವತಾ ದರ್ಶನ ಭಾಗ್ಯ ನಿಮ್ಮ ಪಾಲಿಗೆ. ಆಗಾಗ ಧನಾಗಮನವಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ ವಿರುತ್ತದೆ. ಮಕ್ಕಳ ಆಗಮನದಿಂದ ಸಂತೋಷ ಇಮ್ಮಡಿಗೊಳ್ಳಲಿದೆ.

ತುಲಾ:

ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮಿತ್ರರೊಂದಿಗೆ ಮನಸ್ತಾಪ ಸಾಧ್ಯತೆ. ಹೂಡಿಕೆಗಳಿಂದ   ದೊರಕಲಿವೆ. ಆಗಾಗ ಧನಾಗಮನ ವಿರುತ್ತದೆ. ಬಂಧುಗಳ ಆಗಮನದಿಂದ ಸಂತಸದ ವಾತಾವರಣ.  ನ್ಯಾಯಾಲಯದ ವ್ಯಾಜ್ಯಗಳಲ್ಲಿ ಯಶಸ್ಸು. ದಿನಾಂತ್ಯ ಶುಭವಾರ್ತೆ ತಂದು ಕೊಡಲಿದೆ.

ವೃಶ್ಚಿಕ :-

ಅಪೇಕ್ಷಿತ ಕಾರ್ಯಸಾಧನೆಯಾಗುತ್ತದೆ. ಅಧಿಕಾರಿ ವರ್ಗದವರಿಗೆ ಸಹೋದ್ಯೋಗಿಗಳಿಂದ ಅಸಹಕಾರ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದ ಫ‌ಲಿತಾಂಶ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ ತಂದೀತು. ಭೂವ್ಯವಹಾರದಲ್ಲಿ ಅಧಿಕ ಲಾಭ. ಗೃಹ ನಿರ್ಮಾಣ ಕೆಲಸ ಆರಂಭ ಸಾಧ್ಯತೆ. ನೀಡಿದ ಸಾಲಗಳು ಮರುಪಾವತಿಯಾಗುವವು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉತ್ತಮ ಪ್ರಗತಿ ಕಂಡುಕೊಳ್ಳುವರು.

ಧನಸ್ಸು:

ಕೃಷಿ ಕಾರ್ಯಗಳಲ್ಲಿ ಪ್ರಗತಿ. ಮೀನುಗಾರಿಕೆ, ಜಲ ಸಾರಿಗೆ, ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನಿಶ್ಚಿತತೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ. ಕುಲದೇವತಾ ದರ್ಶನ ಭಾಗ್ಯ. ಯಾಗಲಿದೆ. ವೃತ್ತಿರಂಗದಲ್ಲಿ ಹಂತ ಹಂತವಾಗಿ ಸಮಾಧಾನ ಕಂಡು ಬರುತ್ತದೆ. ದೀರ್ಘ‌ಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ ಧನಾಗಮನದಿಂದ ಸಾಲ ಭಾದೆ ನಿವಾರಣೆ  ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ.

ಮಕರ :-

ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆಗಳು ಕಡಿಮೆಯಾಗಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ-ಸ್ಥಾನಭದ್ರತೆ ಮತ್ತು ಅಂತಸ್ತನ್ನು ಹೆಚ್ಚಿಸಿಕೊಳ್ಳುವಿರಿ. ಯಂತ್ರವೊಂದನ್ನು ಖರೀದಿಸುವ ಸಾಧ್ಯತೆ ಕಂಡು ಬರುತ್ತಿದೆ. ನೆರೆಹೊರೆಯವರಿಂದ ನಿಮ್ಮ ಕೆಲಸಗಳಿಗೆ ಸಹಕಾರ. ದೇವತಾಕಾರ್ಯಗಳನ್ನು ನಡೆಸಲಿದ್ದೀರಿ. ಅಪರೂಪದ ವ್ಯಕ್ತಿಗಳ ದರ್ಶನಭಾಗ್ಯ. ದೂರ ಸಂಚರಾದಲ್ಲಿ ಹೆಚ್ಚಿನ ಗಮನ ವಿರಲಿ.

ಕುಂಭ:-

ಮಹಿಳೆಯರಿಗೆ ಉತ್ತಮ ಸಹಕಾರ ದೊರತು ಕಾರ್ಯಸಿದ್ಧಿ. ದೈಹಿಕ ಸಾಮರ್ಥ್ಯ ವೃದ್ಧಿಸಲಿದೆ. ಶುಭವಾರ್ತೆಯಿಂದ ಸಂತಸ ತಂದೀತು. ಮಕ್ಕಳಿಗೆ ಸಂಬಂಧಿಸಿ ದುಃಖವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ ಆದಾಯದ ಮೂಲಗಳು ವೃದ್ಧಿಯಾಗಲಿವೆ. ಆಧ್ಯಾತ್ಮಿಕವಾಗಿ ಆಸಕ್ತಿ ಕಂಡು ಬರುತ್ತದೆ.

ಮೀನ:-

ವರಿಯಬೇಕು. ದಿಂದ ಮುಂದು ಲಾರದು. ದೇವತಾ ಪ್ರಾರ್ಥನೆಯಿಂದ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಯಾವುದೇ ವಿಚಾರದಲ್ಲಿ ಮನೋಬಲ ಮಕ್ಕಳ ವಿಚಾರವಾಗಿ ಸಮಾಧಾನ ಸಿಗ ವ್ಯಾಪಾರ, ವ್ಯವಹಾರಗಳಲ್ಲಿ ಏರುಪೇರು ಸಾಧ್ಯತೆ. ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ. ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳು ದೂರವಾಗುವ ಕಾಲ. ಸಂತಾನ ಪ್ರಾಪ್ತಿಯಾಗುವ ಸೂಚನೆ ಕಂಡುಬರುವುದು.  ಕೆಳವರ್ಗದವರ ಸಹವಾಸದಿಂದ ಅಪವಾದ ಭೀತಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕುಷ್ಠ ರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್..! ಓದಿ ಈ ಮನಕಲುಕುವ ಸ್ಟೋರಿ…

    ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!

  • Health

    ವಿದೇಶದಲ್ಲಿ ಬೇಡಿಕೆಯನ್ನು ಪಡೆದ ನುಗ್ಗೆ ಸೊಪ್ಪಿನ ಪುಡಿ…!

    ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ. ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್‌ ಆಗಿ ಪರಿವರ್ತಿಸಿದರೆ…

  • ಆರೋಗ್ಯ

    ಅತಿಯಾದರೆ ಅಮೃತವೂ ವಿಷ, ಹೆಚ್ಚು ನಿಂಬೆರಸ ಸೇವನೆ ಆರೋಗ್ಯಕ್ಕೆ ಹಾನಿಕರ.

    ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಒಳ್ಳೆದು ಎಂದು ಹೆಚ್ಚು ನಿಂಬೆರಸ ಸೇವಿಸಿದರೆ ಆರೋಗ್ಯ ಹಾನಿಕರ ಎನ್ನುವ ಬಗ್ಗೆ ಹಲವರಿಗೆ ತಿಳಿದಿಲ್ಲ. ಹೌದು. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಅತಿಯಾಗಿ ನಿಂಬೆರಸ ಸೇವಿಸಿದರೆ ಎಷ್ಟು ಅಪಾಯಕಾರಿ ಎನ್ನುವುದನ್ನ ಕೂಡ ಅಧ್ಯಯನಗಳೇ…

  • ಸುದ್ದಿ

    ಅಂಬೇಡ್ಕರ್ ಸಂಘಗಳಿಂದ ಚೈತ್ರ ಕೋಟೂರು ವಿರುದ್ಧ ಹೋರಾಟ..!ಯಾಕೆ ಗೊತ್ತಾ?

    ಕನ್ನಡ ನಟಿ, ಸಹಾಯಕ ನಿರ್ದೇಶಕಿ, ಬರಹಗಾರ್ತಿ ಚೈತ್ರ ಕೋಟೂರು ಇಷ್ಟುದಿನ ‘ಬಿಗ್ ಬಾಸ್’ ಮನೆಯೊಳಗೆ ವಿವಾದಕ್ಕೀಡಾಗಿದ್ದರು. ನಾಮಿನೇಟ್ ಆದಾಗೆಲ್ಲಾ, ಡೇಂಜರ್ ಝೋನ್ ನಿಂದ ಸೇಫ್ ಆಗಲು ಚೈತ್ರ ಕೋಟೂರು ಕಟ್ಟಿದ ಕಥೆಗಳು, ಮಾಡಿದ ಅವಾಂತರಗಳು ಒಂದೆರಡಲ್ಲ. ಆದರೆ ಆ ಎಲ್ಲಾ ವಿವಾದಗಳು ಇಲ್ಲಿಯವರೆಗೂ ‘ಬಿಗ್ ಬಾಸ್’ ಮನೆಯೊಳಗೆ ಮಾತ್ರ ಸೀಮಿತವಾಗಿತ್ತು. ಈಗ ನೋಡಿದ್ರೆ, ಚೈತ್ರಕೋಟೂರು ವಿರುದ್ಧ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಇಳಿದಿದೆ. ‘ಬಿಗ್ ಬಾಸ್’ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕೋಟೂರು…

  • ಉಪಯುಕ್ತ ಮಾಹಿತಿ

    ತಿಗಣೆಗಳನ್ನು ನಾಶಪಡಿಸುವ ಹತ್ತು ಸುಲಭ ಉಪಾಯಗಳು ಇಲ್ಲಿದೆ ನೋಡಿ.

    ತಿಗಣೆಯು ಸಾಮಾನ್ಯವಾಗಿ ರಾತ್ರಿ ವೇಳೆ ಮನುಷ್ಯರ ರಕ್ತವನ್ನು ಕುಡಿಯುವ ಒಂದು ಬಗೆಯ ಕೀಟ. ಇದರ ಕಡಿತವು ದದ್ದುಗಳು, ಮಾನಸಿಕ ಪರಿಣಾಮಗಳು ಮತ್ತು ಅಲರ್ಜಿ ಲಕ್ಷಣಗಳು ಸೇರಿದಂತೆ ಅನೇಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ತಿಗಣೆ ಕಡಿತವು ಅಗೋಚರ ಬೊಕ್ಕೆಗಳಿಂದ ಹಿಡಿದು ಎದ್ದುಕಾಣುವ ಬೊಕ್ಕೆಗಳವರೆಗೆ ಚರ್ಮದ ಬದಲಾವಣೆಗಳಿಗೆ ಕಾರಣವಾಗಬಹುದು. ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ನಿಮಿಷಗಳು ಅಥವಾ ದಿನಗಳವರೆಗೆ ಬೇಕಾಗಬಹುದು. ತುರಿಕೆಯು ಸಾಮಾನ್ಯವಾಗಿರುತ್ತದೆ, ಮತ್ತು ಕೆಲವರಿಗೆ ಸುಸ್ತು ಎನಿಸಬಹುದು ಅಥವಾ ಜ್ವರ ಇರಬಹುದು. ಸಾಮಾನ್ಯವಾಗಿ, ಶರೀರದ ತೆರೆದ ಪ್ರದೇಶಗಳು ಬಾಧಿತವಾಗುತ್ತವೆ ಮತ್ತು ಸಾಲಾಗಿ ಮೂರು ಕಡಿತಗಳು ಉಂಟಾಗುತ್ತವೆ. ತಿಗಣೆ ಕಡಿತಗಳು ಯಾವುದೇ ಸಾಂಕ್ರಾಮಿಕ…

  • ಉಪಯುಕ್ತ ಮಾಹಿತಿ

    ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವವರಿಗೆ ಎಚ್ಚ್ಚರಿಕೆ, ನಿಮ್ಮ ಜೀವಕ್ಕೆ ದೊಡ್ಡ ಅಪಾಯ.

    ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಿಂದಿನ ಕಾಲದಲಿ ಮೊಬೈಲ್ ಫೋನ್ ಗಳು ಇರಲಿಲ್ಲ ಮತ್ತು ಜನರು ಯಾರ ಬಳಿ ಆದರೂ ಮಾತನಾಡಬೇಕು ಅಂದರೆ ಲ್ಯಾಂಡ್ ಲೈನ್ ಅಥವಾ ಅಂಚೆ ಕಚೇರಿಯ ಮೊರೆ ಹೋಗುತ್ತಿದ್ದರು, ಆದರೆ ಈಗ ಒಬ್ಬ ವ್ಯಕ್ತಿ ಎಷ್ಟೇ ದೂರ ಇದ್ದರು ಆತನ ಜೊತೆ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ. ಇನ್ನು ಕೆಲವು ಮೊಬೈಲ್…