ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಲಹಂಕ ಸಾಂಪ್ರದಾಯಿಕ ಸಿರಿಯನ್ನು ಹೊಂದಿರುವ ಕ್ಷೇತ್ರ. ಈ ಹಿಂದೆ 2008ರ ನಂತರ ಇಂದು ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಇನ್ನು ರಾಜಕೀಯ ವಲಯದಲ್ಲಿ ಪ್ರಬಲ ಪೈಪೋಟಿ ನೀಡುವಂತಹ ಭಾರೀ ಕುಳಗಳು ಇಲ್ಲಿದ್ದು , ಪ್ರಸ್ತುತ ನಡೆಯಲಿರುವ 2018ರ ವಿಧಾನಸಭಾ ಚುನಾವಣೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಗೊಂಡ ನಂತರ ಇಲ್ಲಿ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪೆನಿಗಳುಹಾಗು ವಿದೇಶಿಯರು ಗುರುತಿಸುವ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಇನ್ನು ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡು ಜನಸಾಮಾನ್ಯರಿಗೆ ಹತ್ತಿರವಾಗಿದ್ದ ಎಸ್.ಆರ್.ವಿಶ್ವನಾಥ್ ಅವರು 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೇಲೆ ಇದೊಂದು ಕಮಲ ಪಾಳಯದ ಪ್ರಬಲ ಪಡೆಯನ್ನೇ ಸೃಷ್ಟಿಸಿದೆ.

ಎಸ್.ಆರ್.ವಿಶ್ವನಾಥ್ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಅವರು ಹ್ಯಾಟ್ರಿಕ್ ಜಯದ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಇಲ್ಲಿ ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿರುವುದರಿಂದ ಮತ್ತು ಗ್ರಾಮೀಣ ಪ್ರದೇಶಗಳ ಹಳೆ ಸೊಗಡು ಹೊಂದಿರುವ ಹಲವು ಕಡೆಗಳಲ್ಲಿ ಜೆಡಿಎಸ್ ಕೂಡ ತನ್ನ ಓಟ್ ಬ್ಯಾಂಕ್ ಅನ್ನು ಗಟ್ಟಿಗೊಳಿಸಿದೆ.

ಇನ್ನು ವಿಶೇಷ ಎಂದರೆ ಚಲನಚಿತ್ರ ನಟ ಹಾಗೂ ಕಂಚಿನ ಕಂಠದ ರವಿಶಂಕರ್ ಕೂಡ ಈಗ ಯಲಹಂಕ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು , ಇದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಅದೇನೆಯಿರಲಿ ಈ ಬಾರಿಯ ವಿದಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮಿಂಚಿನಸಂಚಾಲ ಸೃಷ್ಟಿಯಾಗುವುದೊಂತು ಸುಳಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ. ಹೌದು ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‌ಗಂಜ್‌ನಲ್ಲಿ ನಾಲ್ಕು…
ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ…
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಾಜಿ ಪ್ರಧಾನಿಗಳಾದ ದಿವಂಗತ ಜವಹರ್ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಹೌದು. 48 ವರ್ಷಗಳ ಬಳಿಕ ಸ್ಪಷ್ಟ ಬಹುಮತದ ಬಳಿಕ ಮೋದಿ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದೇಶದೆಲ್ಲೆಡೆ ಎದ್ದಿದ್ದ ಮೋದಿ ಸುನಾಮಿಗೆ…
ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆಗಳ ಪರಿವರ್ತನೆ-ಸಂಕಲ್ಪ :ವರ್ತೂರು ಪ್ರಕಾಶ್ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ ಬಿಡುಗಡೆಗೊಳಿಸಿ, 12೦ ದಿನಗಳ ಕಾಲ 1೦೦೦ ಪ್ರತಿಗಳನ್ನು ವಿತರಿಸುವ ಕಾರ್ಯಕ್ಕೆ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವರ್ತೂರು ಪ್ರಕಾಶ್, ದೆಹಲಿಯಲ್ಲೂ ಸಹ ಆಮ್ ಆದ್ಮಿ ಮುಖ್ಯಮಂತ್ರಿ ಶಾಲೆಗಳನ್ನು ಅಭಿವೃದ್ಧಿಪಡಿಸಿರುವುದಕ್ಕಿಂತಲೂ ಮಾದರಿಯಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಸ್ವಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಸುಮಾರು…
ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ…
ಮಕ್ಕಳು ಮೊಬೈಲ್ ನೋಡ್ತಾರೆ, ಟಿವಿ ನೋಡ್ತಾರೆಂಬ ಪಾಲಕರ ಆರೋಪ ಈಗ ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪಾಲಕರ ಆತಂಕಕ್ಕೆ ಕಾರಣವಾಗಿರುವುದು ಪಬ್ಜಿ ಗೇಮ್. ಮಕ್ಕಳ ಪ್ರಾಣವನ್ನೇ ಪಡೆಯುತ್ತಿರುವ ಈ ಪಬ್ಜಿ ಆಟಕ್ಕೆ ಮಕ್ಕಳು ದಾಸರಾಗುತ್ತಿದ್ದಾರೆ. ಇದು ಮಕ್ಕಳ ತಪ್ಪಲ್ಲ. ಈಗಿನ ವಾತಾವರಣ, ಆಟವಾಡಲು ಜಾಗವಿಲ್ಲದ ಪರಿಸ್ಥಿತಿ ಮಕ್ಕಳನ್ನು ಆನ್ಲೈನ್ ಗೇಮ್ ಗೆ ಪ್ರೋತ್ಸಾಹಿಸುತ್ತಿದೆ. ಮಕ್ಕಳು ಅತಿ ಹೆಚ್ಚಿನ ಮಟ್ಟದಲ್ಲಿ ಆನ್ಲೈನ್ ಗೇಮ್ ಗಳನ್ನು ಆಡಿದ್ರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನಿದ್ರೆ ಕೊರತೆ, ಶಕ್ತಿ ಕಡಿಮೆಯಾಗುವುದು, ದಣಿವು, ಸುಸ್ತು,…