ಕವಿ

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡಿಗರಿಗೆ ಒಂದು ಆದರ್ಶ..!ತಿಳಿಯಲು ಈ ಲೇಖನ ಓದಿ..

1998

ಮಾಸ್ತಿ ವೆಂಕಟೇಶ ಅಯ್ಯಂಗಾರರು

ಜನನ : 6 ಜೂನ್ 1891 ಹೊಂಗೆನಹಳ್ಳಿ, ಮಾಲೂರು, ಕೋಲಾರ, ಮೈಸೂರ್ ರಾಜ್ಯ, ಬ್ರಿಟಿಷ್ ಇಂಡಿಯಾ.

ಮರಣ: (ಜೂನ್ 6 – 1986) (ವಯಸ್ಸು 95) ಬೆಂಗಳೂರು, ಕರ್ನಾಟಕ, ಭಾರತ.

ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.

ಬಾಲ್ಯ, ಜೀವನ, ವಿದ್ಯಾಭ್ಯಾಸ:-

  • ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾ ರ್ “ಪೆರಿಯಾತ್” ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು.

ಸಾಹಿತ್ಯ:-

  • ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು 1910 ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩.
  • ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. 20ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು.

  • ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು “ಚನ್ನಬಸವನಾಯಕ”.
  • “ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

ಮುಖ್ಯ ಕೃತಿಗಳು:-

ಸಣ್ಣ ಕತೆಗಳ ಸಂಗ್ರಹ

  • ಸಣ್ಣಕತೆಗಳು (೫ ಸಂಪುಟಗಳು)

ನೀಳ್ಗತೆ

  • ಸುಬ್ಬಣ್ಣ

ಕಾವ್ಯ ಸಂಕಲನಗಳು

  • ಬಿನ್ನಹ, ಮನವಿ
  • ಅರುಣ

ಜೀವನ ಚರಿತ್ರೆ

  • ರವೀಂದ್ರನಾಥ ಠಾಕೂರ(1935)

ನಾಟಕ

  • ಪುರಂದರದಾಸ
  • ಕನಕಣ್ಣ
  • ಕಾಳಿದಾಸ

ಕಾದಂಬರಿ

  • ಚಿಕವೀರ ರಾಜೇಂದ್ರ(1956)

ಪ್ರಶಸ್ತಿಗಳು:-

  • ಜ್ಞಾನಪೀಠ ಪ್ರಶಸ್ತಿ (1983).
  • ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್.
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ.

ಮೂಲ:-ಮಾಸ್ತಿ ವೆಂಕಟೇಶ ಅಯ್ಯಂಗಾರರು

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇನ್ಮುಂದೆ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಮುಂದಾದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌,.!

    ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…

  • ಉಪಯುಕ್ತ ಮಾಹಿತಿ

    ನೀವು ಬಳಸುವ ಮಾತ್ರೆಗಳ ಪ್ಯಾಕ್ ನಲ್ಲಿ ಈ ಕೆಂಪು ಗೆರೆ ಏಕಿರುತ್ತದೆ ಗೊತ್ತಾ. ಯಾರಿಗೂ ತಿಳಿದಿಲ್ಲ.

    ಔಷಧಿಗಳನ್ನು ಹತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲಿ ಚೀಟಿ ತೋರಿಸಿ ಔಷಧಿಗಳನ್ನು ಪಡೆದುಕೊಳ್ಳುತ್ತೇವೆ. ಇದುಯ್ ಒಂದು ಸಾಮಾನ್ಯದ ಸಂಗತಿ ಆದರೆ ಬಹುಷಃ ನಿಮಗೆ ಗೊತ್ತಿರುವುದಿಲ್ಲ ಈ ದೇಶದಲ್ಲಿ ಅದೆಷ್ಟೋ ಮಂದಿ ಅವಿದ್ಯಾವಂತರೋ ಅಥವಾ ತಿಳುವಳಿಕೆ ಇಲ್ಲದ ಜನರು ಒಮ್ಮೊಮ್ಮೆ ಜ್ವರ ಹಾಗು ತಲೆನೋವು ಇತ್ಯಾದಿ ಕಾರಣಕ್ಕಾಗಿ ಯಾವುದೇ ವೈದ್ಯರ ಬಳಿ ತೋರಿಸದೆ ಮೆಡಿಕಲ್ ಗಳಿಂದ ಮಾತ್ರೆಗಳನ್ನು ತಗೆದುಕೊಳ್ಳುತ್ತಾರೆ. ಈ ರೀತಿ ಮಾಡುವುದು ಎಷ್ಟೊಂದು ದೊಡ್ಡ ತಪ್ಪು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ, ಹೌದು ಕೆಲವೊಮ್ಮೆ ನಾವು ತಗೆದುಕೊಳ್ಳುವ ಮಾತ್ರೆಗಳು ನಮ್ಮ…

  • ಕಾನೂನು

    ತ್ರಿವಳಿ ತಲಾಖ್‌ ರದ್ದು! ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು…

    ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್‌ ಅನ್ನು ರದ್ದು ಪಡಿಸಿದೆ.

  • ಸುದ್ದಿ

    ಭಾರೀ ಮಳೆ ಗುಡುಗು, ಸಿಡಿಲು ಬಡಿದು ಪ್ರೇಮ ಸೌಧ ತಾಜ್ ಮಹಲ್‍ಗೆ ಹಾನಿ.

    ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ವರುಣ ದೇವ ವಿಜೃಂಭಿಸಿದ ಕಾರಣ ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ…

  • ಸುದ್ದಿ

    ಬಿಗಿದಪ್ಪಿದ ಸ್ಥಿತಿಯಲ್ಲಿ ತಾಯಿ-ಮಗು ಶವ ಪತ್ತೆ..! ಕರುಳು ಹಿಂಡಿದ ದೃಶ್ಯ..!

    ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…

  • ದೇವರು-ಧರ್ಮ

    ಮೈಸೂರು ರಾಜವಂಶಸ್ತರಿಗೆ ಇದ್ದ ಅಲಮೇಲಮ್ಮನ ಶಾಪ ಮುಕ್ತವಾಯಿತ..?ತಿಳಿಯಲು ಈ ಲೇಖನ ಓದಿ..

    ಮೈಸೂರು ಅರಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಹಾರಾಣಿ ತ್ರಿಶಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಯದುವಂಶಕ್ಕೆ ವಾರಸುದಾರನನ್ನು ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಅರಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.