ಕವಿ

ಜ್ಞಾನಪೀಠ ಪ್ರಶಸ್ತಿ ಪಡೆದ ಶಿವರಾಮ ಕಾರಂತ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

1918

ಶಿವರಾಮ ಕಾರಂತ (ಅಕ್ಟೋಬರ್ 10, 19೦6-ಸೆಪ್ಟೆಂಬರ್ 16, 1997)- “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.

 

ಜೀವನ:-

  • ಜ್ಞಾನಪೀಠಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು ೪೨೭ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು ೪೭. ತಮ್ಮ ೯೬ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.
  • ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾ ಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ.

 

ಪರಿಸರ ಹೋರಾಟ:-

ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ “ಕಾರಂತಜ್ಜ” ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

ಕಾದಂಬರಿಗಳು:-

  1. ಅದೇ ಊರು, ಅದೆ ಮರ
  2. ಅಳಿದ ಮೇಲೆ
  3. ಅಂಟಿದ ಅಪರಂಜಿ
  4. ಆಳ, ನಿರಾಳ
  5. ಇದ್ದರೂ ಚಿಂತೆ
  6. ಇನ್ನೊಂದೇ ದಾರಿ
  7. ಇಳೆಯೆಂಬ

ಕವನ ಸಂಕಲನಗಳು:-

  1. ರಾಷ್ಟ್ರಗೀತ ಸುಧಾಕರ
  2. ಸೀಳ್ಗವನಗಳು

ಸಣ್ಣ ಕತೆ:-

  • ಕವಿಕರ್ಮ
  • ತೆರೆಯ ಮರೆಯಲ್ಲಿ
  • ಹಸಿವು
  • ಹಾವು

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಶೀಘ್ರವೇ ಸುಮಲತಾ ಕುರಿತಂತೆ ವಿಡಿಯೋ ಸಿಡಿ ರಿಲೀಸ್ ಮಾಡುವುದಾಗಿ JDS ಶಾಸಕನಿಂದ ಹೊಸ ಬಾಂಬ್!ಆ ವಿಡಿಯೋದಲ್ಲಿ ಇರೋದು ಏನು?ಈ ಸುದ್ದಿ ನೋಡಿ…

    ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಜೆಡಿಎಸ್ ಮುಖಂಡ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಿಡಿ ತಮ್ಮ ಬಳಿ ಇದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಪುಟ್ಟರಾಜು ಅವರು, ‘ಖಾಸಗಿ ಹೋಟೆಲ್​​ವೊಂದರಲ್ಲಿ ಸುಮಲತಾ ಈಗಾಗಲೇ ಬಿಜೆಪಿ ಜತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಸೇರಲು…

  • ಸಂಬಂಧ

    ಈ 6 ಗುಣಗಳು ನಿಮ್ಮಲ್ಲಿದ್ರೆ, ಯಾರಾದರಾಗಿರಲಿ ನಿಮ್ಮನ್ನು ನಂಬುತ್ತಾರೆ…

    ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.

  • ಉಪಯುಕ್ತ ಮಾಹಿತಿ

    ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೊಸ ಟ್ರಿಕ್ಸ್..!ತಿಳಿಯಲು ಈ ಲೇಖನ ಓದಿ …

    ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.

  • ಸುದ್ದಿ

    ರೈತರಿಗೆ ಬಂಪರ್ ಸುದ್ದಿ ಕೊಟ್ಟ ಕುಮಾರಣ್ಣ..!

    ಡಿಸೆಂಬರ್ ಒಳಗೆ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ಸಾಲಮನ್ನಾ ಫಲಾನುಭವಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದ ಸಿಎಂ, ಡಿಸೆಂಬರ್ ಒಳಗೆ ರೈತರ ಬೆಳೆ ಸಾಲಮನ್ನಾ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಬ್ಯಾಂಕುಗಳಿಗೆ 4 ಕಂತುಗಳಲ್ಲಿ ರೈತರ ಸಾಲ ಮನ್ನಾದ ಮೊತ್ತವನ್ನು ಪಾವತಿಸಲು ಚಿಂತನೆ ನಡೆದಿತ್ತಾದರೂ, 2 ಕಂತುಗಳಲ್ಲಿ ಸಾಲಮನ್ನಾ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಿ ಡಿಸೆಂಬರ್ ಒಳಗೆ ಸಂಪೂರ್ಣವಾಗಿ…

  • ಸುದ್ದಿ

    ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು…ಕಾರಣ?

    ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು. ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ…

  • ಆರೋಗ್ಯ

    ಹೆಚ್ಚಿನವರಿಗೆ ಕಣ್ಣಿನ ಸಮಸ್ಯೆ ಕಾಡುತ್ತಿದಿಯಾ..?ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ ..

    ಣ್ಣ ಮಕ್ಕಳಲ್ಲೇ ಕಣ್ಣಿನ ದೃಷ್ಟಿ ಸಮಸ್ಯೆ ಕಾಣಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಜೀವನಶೈಲಿ, ವಾತಾವರಣದಲ್ಲಿನ ಬದಲಾವಣೆ ಇವುಗಳಿಗೆ ಪ್ರಮುಖ ಕಾರಣವಾಗಿದೆ. ಕಣ್ಣಿನ ದೃಷ್ಟಿ ಸರಿಯಿಲ್ಲವೆಂದರೆ ಸಂಪೂರ್ಣ ದೇಹವೇ ನಿಸ್ತೇಜವಾದಂತೆ.