ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ 416 ಕಂತುಗಳ ಪ್ರಸಾರ ಆಗಿದೆ.
ದೇವಾದಿ ದೇವ ಮಹಾದೇವನ ಮಹಿಮೆ ಹಾಗೂ ಜೀವನಚಿತ್ರ ಒಳಗೊಂಡ ಈ ಧಾರಾವಾಹಿಯು ಕರ್ನಾಟಕದ ಮನೆ ಮನೆಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಕನ್ನಡಿಗರ ಜನಪ್ರಿಯ ಸಿರಿಯಲ್’ಗಳ ಪೈಕಿ ಇದು ಒಂದಾಗಿತ್ತು.ಕಿರುತೆರೆಯಲ್ಲಿ ಅದ್ದೂರಿ ಗ್ರಾಪಿಕ್ಸ್ ಮತ್ತು ಸೆಟ್ ಗಳಿಂದ ನಿರ್ಮಾಣವಾಗಿದ್ದ ಈ ದಾರವಾಹಿಯನ್ನು ಜನರು ತುಂಬಾ ಮೆಚ್ಚಿಕೊಂಡಿದ್ದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಸತಿ ಮತ್ತು ಶಿವನ ಪ್ರೇಮ ಪ್ರಸಂಗದಿಂದ ಆರಂಭವಾಗಿದ್ದ ಈ ಧಾರಾವಾಹಿ, ಮಹಾದೇವನ ಮಾರ್ತಾಂಡ ಅವತಾರದ ಪ್ರಸಂಗದೊಂದಿಗೆ ಮುಕ್ತಾಯವಾಗಿದೆ.ಪಾರ್ವತಿ ದೇವಿಯ ಮಹಲ್ಸಳಾ ಅವತಾರ ಮತ್ತು ಮಲ್ಲ, ಮಣಿ ಎಂಬ ದುಷ್ಟ ಅಘೋರರ ಅಂತ್ಯ, ಹಾಗೂ ಮಹಲ್ಸಳಾ ಜೊತೆ ಶಿವನ ಅವತಾರ ಮಾರ್ತಾಂಡನ ಮದುವೆಯ ಸನ್ನಿವೇಶದೊಂದಿಗೆ ಧಾರವಾಹಿಯನ್ನು ನಿಲ್ಲಿಸಲಾಗಿದೆ.
ಜನರನ್ನು ತನ್ನತ್ತ ಸೆಳೆದಿದ್ದ ಈ ದಾರವಾಹಿ ನಿಲ್ಲಲು ಕಾರಣ ಟಿಅರ್’ಪಿ. ಹೌದು,ಬೇರೆ ದಾರವಾಹಿಗಳ ಪೈಪೋಟಿ ಮತ್ತು ಟಿಅರ್’ಪಿ ಒಂದೇ ಸಮನೆ ಏರಿಕೆಯಾಗಿದ್ದರಿಂದ ‘ಹರ ಹರ ಮಹಾದೇವ’ ನಿಲ್ಲಿಸಲಾಗಿದೆ. ಮುಂಬೈನಲ್ಲಿ ನಿರ್ಮಿಸಿದ್ದ ಸೆಟ್ನಲ್ಲಿ ಇದರ ಚಿತ್ರೀಕರಣ ಆಗುತಿತ್ತು.ಸುಮಾರು 300 ತಂತ್ರಜ್ಞರು ಇದರಲ್ಲಿ ಕೆಲಸ ಮಾಡುತ್ತಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು. ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ…
ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು….
ಮಜಾ ವಿತ್ ಸುಜಾ ಯಶಸ್ಸಿನ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೊಕೇಶ್ ಪ್ರೊಡಕ್ಷನ್ಸ್ ಮೂಲಕ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ, ನಗುವಿನ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಆ ಮುದ್ದಿನ ಶ್ವಾನ ಆರು ಮಂದಿಯ ಜೀವ ಉಳಿಸಿದೆ…! ಅಚ್ಚರಿಯಾದರೂ ಇದು ನಿಜ. ಈ ಘಟನೆ ನಡೆದಿದ್ದು ಒಡಿಸ್ಸಾದ ಕೊರಪುತ್ ಜಿಲ್ಲೆಯಲ್ಲಿ. ಶಂಕರ್ ಪ್ರಸಾದ್ ತ್ರಿಪಾಠಿ ಎಂಬವರ ಮನೆಗೆ ಭಾನುವಾರ ಬೃಹತ್ ಸರ್ಪ ಎಂಟ್ರಿ ಕೊಟ್ಟಿತ್ತು. ಮನೆಯವರು ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರಣ ಈ ಹಾವನ್ನು ಯಾರೂ ಗಮನಿಸಿರಲಿಲ್ಲ. ಇದು ನೇರವಾಗಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಳ್ಳಲು ಯತ್ನಿಸಿತ್ತು. ಆದರೆ, ಅದೃಷ್ಟ ಚೆನ್ನಾಗಿತ್ತು. ಶಂಕರ್ ಪ್ರಸಾದ್ ಅವರ ಸಾಕು ನಾಯಿ `ಡಾಗಿ’ ಈ ಸರ್ಪವನ್ನು ಕಂಡಿತ್ತು. ಇದನ್ನು ನೋಡಿದ…
ಸೌತ್ ಸೆನ್ಸೇಷನಲ್ ಹೀರೋ ವಿಜಯ್ ದೇವರಕೊಂಡ ಖರೀದಿಸಿರೋ ಹೊಸ ಮನೆ ಟಾಲಿವುಡ್ನಲ್ಲಿ ಹಾಟ್ ಟಾಪಿಕ್ ಆಗಿದೆ. ಬರೋಬ್ಬರಿ 18 ಕೋಟಿಗೆ ವಿಜಯ್, ಈ ಮನೆ ಖರೀದಿಸಿದ್ದಾರೆ ಅಂತ ಹೇಳಲಾಗ್ತಿದೆ ಇತ್ತೀಚೆಗೆ ವಿಜಯ್ ಅವರು ಹೈದರಾಬಾದ್ನ ಜುಬ್ಲಿ ಹಿಲ್ಸ್ ನಲ್ಲಿ ಇರುವ ತಮ್ಮ ಹೊಸಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ಗೃಹಪ್ರವೇಶದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕೇವಲ ನಾಲ್ಕೈದು ಹಿಟ್ ಕೊಟ್ಟು, ಸೂಪರ್ ಸ್ಟಾರ್ ಪಟ್ಟಕ್ಕೇರಿದ…
ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ. ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ. ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ…