ಸುದ್ದಿ

2018 ರಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವಜನತೆಗೆ ಅರಿವು ಮೂಡಿಸಲು 5K ಓಟದಲ್ಲಿ ಸ್ಪರ್ಧಿಗಳೊಂದಿಗೆ ಸ್ವತಃ ತಾವೂ ಕೂಡ ಪಾಲ್ಗೊಂಡ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

121

ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ.. ಅದರಲ್ಲೂ 2000 ಸಾಲಿನ ವರ್ಷದಲ್ಲಿ ಹುಟ್ಟಿದವರಿಗೆ 2018 ರಲ್ಲಿ ನಡೆಯುವ ಚುನಾವಣೆಯಲ್ಲಿ ಮೊದಲ ವೋಟ್ ಮಾಡುವ ಅವಕಾಶವಾಗಿದೆ..

ಹೌದು 2018 ರಲ್ಲಿ ಮೊದಲ ಬಾರಿಗೆ ವೋಟ್ ಮಾಡುತ್ತಿರುವ ಯುವ ಜನತೆಯ ಜೊತೆಗೆ ಎಲ್ಲಾ ವರ್ಗದವರಿಗೂ ಮತದಾನದ ಮಹತ್ವವನ್ನು ತಿಳಿಸಿ ಅರಿವು ಮೂಡಿಸಲೆಂದೇ ಮಲ್ಲೇಶ್ವರಂ ನ “ನಮ್ಮ ವೋಟ್ ಫೌಂಡೇಷನ್” ನವರು 5K ಓಟವನ್ನು ಫೆಬ್ರವರಿ 25ರಂದು ಆಯೋಜಿಸಿದ್ದರು..

ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು ಚಾಲನೆ ನೀಡಿದ ಈ ಅಭಿಯಾನದಲ್ಲಿ 2000 ಸ್ಪರ್ಧಿಗಳು ಭಾಗವಹಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು..

ಚಾಲನೆ ನೀಡಿದ್ದಷ್ಟೇ ಅಲ್ಲದೇ ಸ್ವತಃ ತಾವೂ ಕೂಡ ಸ್ಪರ್ಧಿಗಳೊಂದಿಗೆ ಪಾಲ್ಗೊಂಡು ಎಲ್ಲೂ ನಿಲ್ಲದೇ ಓಟವನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.. ಕಾರ್ಯಕ್ರಮವನ್ನು ಉದ್ಘಾಟಿಸಿ ಕೇವಲ ಸ್ಪೂರ್ತಿಯ ಮಾತುಗಳನ್ನಾಡಿ ಮನೆಗೆ ಹೋಗುವ ಬದಲು ಸ್ಪರ್ಧಿಗಳೊಂದಿಗೆ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ..

ಮಲ್ಲೇಶ್ವರಂ ಪ್ಲೇ ಗ್ರೌಂಡ್ ನಲ್ಲಿ ಶುರುವಾದ ಓಟ 5 ಕಿ ಮೀ ಸಾಗಿ ಮತ್ತದೇ ಆಟದ ಮೈದಾನದಲ್ಲಿ ಮುಕ್ತಾಯಗೊಂಡಿತು.. ಸಂಪೂರ್ಣ 5 ಕಿ ಮೀ ಅನ್ನು ಶಾಸಕರು ನಿರಾಯಾಸವಾಗಿ ಪೂರ್ಣಗೊಳಿಸಿದ್ದು ಓಟದಲ್ಲಿ ಭಾಗವಹಿಸಿದ ಎಷ್ಟೋ ಯುವಕರಿಗೆ ಹುಬ್ಬೇರುವಂತೆ ಮಾಡಿತು..

ಕ್ಷೇತ್ರದ ಜನತೆಗೆ ಶಾಸಕರುಗಳು ನೋಡಲು ಸಿಗುವುದೇ ಅಪರೂಪ ಆದರೆ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರ ವಿಚಾರದಲ್ಲಿ ಈ ಅಭಿಪ್ರಾಯ ಬದಲಾಗುತ್ತದೆ.. ಸದಾ ಜನರ ನಡುವೆಯ ಜನಸಾಮಾನ್ಯರಂತೆ ಕಾಣುವ ಇವರು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಅವರಿಗೆ ಅವಕಾಶಗಳನ್ನು ಮಾಡಿಕೊಡುವುದರಲ್ಲಿ ಮೊದಲಿಗರೆಂದೇ ಹೇಳಬಹುದು..

ಡೌನ್ ಟು ಅರ್ಥ್ ಪರ್ಸನಾಲಿಟಿ ಇಂದಲೇ ಎಲ್ಲರಿಗೂ ಇಷ್ಟವಾಗುವ ಡಾ.ಅಶ್ವತ್ಥ್ ನಾರಾಯಣ್ ರವರು ಎಂದಿಗೂ ಹೀಗೆ ಇರಲಿ ಎಂಬುದೇ ನಮ್ಮ ಆಶಯ..

ಏನೇ ಆಗಲಿ ಮತದಾನ ನಮ್ಮ ನಿಮ್ಮೆಲ್ಲರ ಹಕ್ಕು.. ವೋಟ್ ಮಾಡಲು ಮರೆಯದಿರಿ.. ಮರೆತವರನ್ನು ಕರೆತಂದು ಮತದಾನ ಮಾಡಿ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೆಳ್ಳುಳ್ಳಿಯನ್ನು ತಿಂದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಈ ಮಾಹಿತಿ ನೋಡಿ.

    ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ. 1….

  • ಸಿನಿಮಾ

    ನಮ್ಮ ಸರ್ಕಾರ ಇದೆ ಎಂದು ಧಮಕಿ ಹಾಕಿದ ಶಾಸಕನಿಗೆ ತಿರುಗೇಟು ನೀಡಿದ ದರ್ಶನ್…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…

  • ಜ್ಯೋತಿಷ್ಯ

    ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗವಿದ್ದು ಧನಾಗಮನವಾಗಲಿದೆ…ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 3 ಫೆಬ್ರವರಿ, 2019 ನೀವು ದೀರ್ಘಕಾಲದಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ಕುಟುಂಬದ…

  • ಸುದ್ದಿ

    ಟಿಕ್‌ಟಾಕ್‌ಗೆ ಮತ್ತೊಂದು ಬಲಿ : ಕೋಲಾರದಲ್ಲಿ ಕೃಷಿ ಹೊಂಡದ ಬಳಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು…!

    ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್​ಟಾಕ್​ ಕ್ರೇಜ್​​ಗೆ ಬಲಿಯಾಗಿದ್ದಾಳೆ. ಮಾಲಾಗೆ ವಿಪರೀತ ಟಿಕ್​ಟಾಕ್​ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್​ಟಾಕ್​ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ…